CWG 2022: ಸ್ಕ್ವಾಷ್‌ನಲ್ಲಿ ಕಂಚು ಗೆದ್ದ ಘೋಸಲ್: ಭಾರತದ ಪರ ವಿಶೇಷ ಸಾಧನೆ

ಸ್ಕಾಷ್ ಪುರುಷರ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರ ಸೌರವ್ ಘೋಸಲ್ ಅದ್ಭುತ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಘೋಷಸ್ ತಮ್ಮ ಮೊದಲ ವೈಯಕ್ತಿಕ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಜೇಮ್ಸ್ ವಿಲ್‌ಸ್ಟರೋಪ್ ವಿರುದ್ಧದ ಪಂದ್ಯದಲ್ಲಿ 11-6, 11-1, 11-4 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಘೋಸಾಲ್ ಪಂದ್ಯದ ಮೊದಲ ಗೇಮ್‌ನಲ್ಲಿ 11-6 ಅಂತರದ ಜಯದೊಂದಿಗೆ ಆಟವನ್ನು ಪ್ರಾರಂಭಿಸಿದರು. ಪಂದ್ಯದ ಉದ್ದಕ್ಕೂ ತಮ್ಮ ಎದುರಾಳಿಯನ್ನು ಚೆನ್ನಾಗಿ ಅರ್ಥೈಸಿಕೊಂಡರು ಘೋಸಲ್. ಸದ್ಯಕ್ಕೆ ವಿಶ್ವದ 25ನೇ ಶ್ರೇಯಾಂಕದಲ್ಲಿರುವ ವಿಲ್‌ಸ್ಟ್ರೋಪ್ ಭಾರತೀಯ ಆಟಗಾರನ ಚುರುಕುತನ ಮತ್ತು ಫಿಟ್‌ನೆಸ್ ಎದುರು ಮಂಕಾದರು. ಎರಡನೇ ಗೇಮ್ ಇಂಗ್ಲೆಂಡ್ ಆಟಗಾರನಿಗೆ ಮತ್ತಷ್ಟು ಕಠಿಣವಾಗಿತ್ತು. ಘೋಸಲ್ ವಿರುದ್ಧ 1-11 ಅಂತರದಿಂದ ಸೋಲು ಅನುಭವಿಸಿದರು. ಸಾಧ್ಯವಾದಷ್ಟು ವೇಗವಾಗಿ ಪಂದ್ಯವನ್ನು ಮುಗಿಸುವತ್ತ ಘೋಸಲ್ ಚಿತ್ತ ನೆಟ್ಟಿದ್ದರು.

ವಿಲ್‌ಸ್ಟ್ರೋಪ್ ಪಂದ್ಯದುದ್ದಕ್ಕೂ ತಪ್ಪುಗಳನ್ನು ಎಸಗಿದರು. ಈ ಕಾರಣದಿಮದಾಗಿ ಅವರು ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವ ಅವಕಾಶವನ್ನು ಕಡಿಮೆಗೊಳಿಸಿತು. ಇನ್ನು ಭಾರತದ ಆಟಗಾರ ಘೋಸಲ್ ವಿಜಯದತ್ತ ದಾಪುಗಾಲು ಹಾಕಿದಾಗಲೂ ಸಣ್ಣ ಭಾವನೆಯನ್ನು ಕೂಡ ಸಹ ತೋರಿಸಲಿಲ್ಲ. ಹಿಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಪಾಲ್ ಕೋಲ್ ವಿರುದ್ಧ ಸೋತಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.

ಕ್ರೀಡಾಕೂಟದ ಐದನೇ ದಿನದ ಮುಕ್ತಾಯದವರೆಗೂ ಭಾರತದ ಪರ ಚಿನ್ನ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿ *ಮೀರಾಬಾಯಿ ಚಾನು - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ * ಜೆರೆಮಿ ಲಾಲ್ರಿನುಂಗ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ * ಅಚಿಂತಾ ಶೆಯುಲಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ * ಭಾರತೀಯ ವನಿತೆಯರ ತಂಡ - ಲಾನ್ ಬೌಲ್ಸ್ ವಿಭಾಗದಲ್ಲಿ ಚಿನ್ನದ ಪದಕ *ಭಾರತ ಪುರುಷರ ತಂಡ - ಟೇಬಲ್ ಟೆನಿಸ್ ವಿಭಾಗದಲ್ಲಿ ಚಿನ್ನದ ಪದಕ

ಇತರೆ ಪದಕ ಗೆದ್ದವರು: ಸಂಕೇತ್ ಮಹದೇವ್ ಸರ್ಗರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ • ಗುರುರಾಜ್ ಪೂಜಾರಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ • ವಿಜಯ್ ಕುಮಾರ್ ಯಾದವ್ - ಪುರುಷರ ವಿಭಾಗದಲ್ಲಿ ಕಂಚಿನ ಪದಕ • ಹರ್ ಜಿಂದರ್ ಕೌರ್ - ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ • ಬಿಂದ್ಯಾ ರಾಣಿ ದೇವಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ • ಸುಶೀಲಾದೇವಿ - ಜುಡೋ ವಿಭಾಗದಲ್ಲಿ ಬೆಳ್ಳಿ ಪದಕ • ವಿಕಾಸ್ ಠಾಕೂರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ • ಭಾರತ ಮಿಶ್ರ ತಂಡ - ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ *ಸ್ಕ್ವಾಷ್‌ ವೈಯಕ್ತಕ ವಿಭಾಗದಲ್ಲಿ-ಸೌರವ್ ಘೋಸಲ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 3, 2022, 23:48 [IST]
Other articles published on Aug 3, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X