ಏಷ್ಯನ್ ಗೇಮ್ಸ್ ನಿಂದ ಬರಿಗೈಯಲ್ಲಿ ಬಂದಿದ್ದವಳಿಗೆ ವರ್ಲ್ಡ್ ಕಪ್ ನಲ್ಲಿ ಕಂಚು

ನವದೆಹಲಿ, ಅಕ್ಟೋಬರ್ 1: ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಬರುಗೈಯಲ್ಲಿ ವಾಪಸ್ಸಾಗಿದ್ದ ಭಾರತದ ಆರ್ಚರ್ (ಬಿಲ್ಲುಗಾರ್ತಿ) ದೀಪಿಕಾ ಕುಮಾರಿ ಅವರು ಟರ್ಕಿಯಲ್ಲಿ ನಡೆದ 'ಆರ್ಚರಿ ವರ್ಲ್ಡ್ ಕಪ್ ಫೈನಲ್' ನಲ್ಲಿ ಕಂಚು ಗೆಲ್ಲುವ ಮೂಲಕ ಈ ಬಾರಿಯ ಸ್ಪೋರ್ಟ್ಸ್ ಸೀಸನ್ ಗೆ ಕೊನೆ ಹಾಡಿದ್ದಾರೆ.
ಟರ್ಕಿಯ ಸ್ಯಾಮ್ಸನ್ ನಲ್ಲಿ ಭಾನುವಾರ ನಡೆದ ವರ್ಲ್ಡ್ ಕಪ್ ಆರ್ಚರಿ ಫೈನಲ್ ನಲ್ಲಿ ದೀಪಿಕಾ ಕಂಚಿನ ಪದಕ ತನ್ನದಾಗಿಸಿಕೊಂಡರು. ರಿಯೋ ಒಲಿಂಪಿಕ್ ನಲ್ಲಿ ಬೆಳ್ಳಿ ಗೆದ್ದಿದ್ದ ಜರ್ಮನಿಯ ಆರ್ಚರ್ ಲಿಸಾ ಉನ್ರುಹ್ ಅವರನ್ನು 6-5 ಅಂತರದಿಂದ ಸೋಲಿಸಿದ ದೀಪಿಕಾ ಕಂಚಿಗೆ ಕೊರಳೊಡ್ಡಿದರು.
ಆರ್ಚರಿ ವರ್ಲ್ಡ್ ಕಪ್ ಫೈನಲ್ ನಲ್ಲಿ ದೀಪಿಕಾ ಗೆದ್ದಿದ್ದು ಇದು ಐದನೇ ಪದಕ. 2011, 2012, 2013 ಮತ್ತು 2017ರಲ್ಲಿ ದೀಪಿಕಾ ಬೆಳ್ಳಿಯ ಪದಕ ಜಯಿಸಿದ್ದರು. ಈ ಟೂರ್ನಿಯಲ್ಲಿ ದೀಪಿಕಾ ಚಿನ್ನಕ್ಕೆ ಕಣ್ಣಿಟ್ಟಿದ್ದರು. ಆದರೆ ದೀಪಿಕಾ ಕೋಚ್ ಧರ್ಮೇಂದ್ರ ತಿವಾರಿ ಅವರು ಅನಾರೋಗ್ಯದ ಕಾರಣ ಟೂರ್ನ ಮೆಂಟ್ ಗೆ ಬಾರದಿದ್ದುದು ದೀಪಿಕಾಗೆ ಹಿನ್ನಡೆಗೆ ಕಾರಣವಾಯ್ತು.
Story first published: Monday, October 1, 2018, 13:56 [IST]
Other articles published on Oct 1, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications