ಡೋಪಿಂಗ್ ಆರೋಪ ಮುಕ್ತ ಸಂಜಿತಾ ಚಾನುಗೆ ಕೊನೆಗೂ ಅರ್ಜುನ ಗೌರವ

ನವದೆಹಲು, ಜೂನ್ 25: ಉದ್ದೀಪನ ಮದ್ದು ಸೇವನ ಆರೋಪದಿಂದ ಮುಕ್ತರಾಗಿರುವ ಭಾರತದ ವೇಟ್ ಲಿಫ್ಟರ್, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿರುವ ಸಂಜಿತಾ ಚಾನುಗೆ ಕೊನೆಗೂ ಅರ್ಜುನ ಪ್ರಶಸ್ತಿ ದೊರೆಯಲಿದೆ. ಡೋಪಿಂಗ್ ಆರೋಪಕ್ಕಾಗಿ ಸಂಜಿತಾಗೆ 2018ರಲ್ಲಿ ಪ್ರಶಸ್ತಿ ನೀಡದೆ ಹಿಡಿದಿಟ್ಟುಕೊಳ್ಳಲಾಗಿತ್ತು. ಆ ಪ್ರಶಸ್ತಿಯನ್ನು ಈಗ ಸಂಜಿತಾಗೆ ನೀಡಲಾಗುತ್ತದೆ.
2018ರಲ್ಲಿ ದೆಹಲಿ ಹೈಕೋರ್ಟ್ ಆದೇಶದಂತೆ ಸಂಚಿತಾ ಚಾನುಗೆ ನೀಡದೆ ಹಿಡಿದಿಟ್ಟುಕೊಳ್ಳಲಾಗಿದ್ದ ಅರ್ಜುನ ಪ್ರಶಸ್ತಿಯನ್ನು ಚಾನುಗೆ ನೀಡಲಾಗುತ್ತದೆ ಎಂಬುದನ್ನು ಕ್ರೀಡಾ ಸಚಿವಾಲಯ ಖಾತರಿಪಡಿಸಿದೆ. ಡೋಪಿಂಗ್ ಆರೋಪದಿಂದ ಸಂಚಿತಾ ಮುಕ್ತಳಾದರೆ ಮಾತ್ರ ಪ್ರಶಸ್ತಿಯನ್ನು ಚಾನುಗೆ ನೀಡಬೇಕೆಂದು ಕೋರ್ಟ್ ಆದೇಶಿಸಿತ್ತು.
'ಸಂಚಿತಾ ಚಾನು ಅವರ ಮೇಲಿದ್ದ ಡೋಪಿಂಗ್ ಆರೋಪವನ್ನು ಇಂಟರ್ ನ್ಯಾಷನಲ್ ವೇಟ್ ಲಿಫ್ಟಿಂಗ್ ಫೆಡರೇಶನ್ ಮುಕ್ತಗೊಳಿಸಿದೆ. ಹೀಗಾಗಿ ನಾವು ನಾವು ದೆಹಲಿ ಹೈಕೋರ್ಟ್ ಆದೇಶವನ್ನು ಪಾಲಿಸಬೇಕು ಮತ್ತು ಸಂಜಿತಾಳನ್ನು ಅರ್ಜುನ ಪ್ರಶಸ್ತಿಗೆ ಪರಿಗಣಿಸಬೇಕಿದೆ,' ಎಂದು ಕ್ರೀಡಾ ಸಚಿವಾಲಯ ಪಿಟಿಐ ಜೊತೆ ಹೇಳಿದೆ.
2017ರಲ್ಲಿ ಅರ್ಜುನ ಪ್ರಶಸ್ತಿಯಿಂದ ಸಂಚಿತಾ ಚಾನು ಅವರನ್ನು ಕಡೆಗಣಿಸಿದ್ದಕ್ಕಾಗಿ, ಚಾನು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ 2018ರ ಮೇನಲ್ಲಿ ಚಾನು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದು ಪಾಸಿಟಿವ್ ಬಂದಿತ್ತು. ಹೀಗಾಗಿ ಪ್ರಕರಣ ಹಾಗೆಯೇ ಬಾಕಿಯಿತ್ತು. ಇತ್ತೀಚೆಗೆ ವೇಟ್ ಲಿಫ್ಟಿಂಗ್ ಇಂಟರ್‌ನ್ಯಾಷನಲ್ ಸಂಚಿತಾ ಆವರನ್ನು ದೋಷಮುಕ್ತೆಯೆಂದು ಘೋಷಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications