ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪತ್ನಿ ತಾಯಿಯನ್ನು ಕೊಂದು ಬಂಧನಕ್ಕೊಳಗಾದ ಭಾರತದ ಮಾಜಿ ಕ್ರೀಡಾಪಟು

Former India Athlete Iqbal Singh Kills Mother And Wife In Us

ಮಾಜಿ ಏಷ್ಯನ್ ಚಾಂಪಿಯನ್‌ಷಿಪ್ ಪದಕ ವಿಜೇತ ಕ್ರೀಡಾಪಟು ಇಕ್ಬಾಲ್ ಸಿಂಗ್ ಬೋಪರಾಯ್ ಯುಎಸ್‌ನಲ್ಲಿ ಪತ್ನಿ ಹಾಗೂ ತಾಯಿಯನ್ನು ಕೊಲೆ ಮಾಡಿ ಬಂಧನಕ್ಕೊಳಗಾಗಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ಪೆನ್ಸಿಲ್ವೇನಿಯಾದ ನ್ಯೂಟೌನ್ ಸ್ಕ್ವಾರ್‌ನಲ್ಲಿ ಕಳೆದ ಭಾನುವಾರ ಈ ಡಬಲ್ ಮರ್ಡರ್ ಘಟನೆ ನಡೆದಿದ್ದು ತನಿಖೆ ನಡೆಯುತ್ತಿದೆ.

63 ವರ್ಷದ ಇಕ್ಬಾಲ್ ಸಿಂಗ್ ಬೋಪರಾಯ್ 1983ರಲ್ಲಿ ಕುವೈಟ್‌ನಲ್ಲಿ ನಡೆದಿದ್ದ ಏಷ್ಯನ್ ಆಥ್ಲೆಟಿಕ್ ಚಾಂಇಯನ್‌ಷಿಪ್‌ನಲ್ಲಿ ಕಂಚಿನ ಪದಕವನ್ನು ಪಡೆದಿದ್ದರು. ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಇಕ್ಬಾಲ್ ಸಿಂಗ್ ಆಪ್ತ ಗೆಳೆಯ ಮಾಜಿ ಕ್ರೀಡಾಪಟುವೊಬ್ಬರು ಖಾಸಗೀ ಪತ್ರಿಕೆಗೆ ಮಾತನಾಡುತ್ತಾ ಹೇಳಿದ್ದಾರೆ. ಇಕ್ಬಾಲ್ ಸಿಂಗ್ ಅತ್ಯಂತ ಸ್ನೇಹಪರ ವ್ಯಕ್ತಿಯಾಗಿದ್ದರು ಅವರ ತಾಯಿಗೆ 90 ವರ್ಷವಾಗಿರಬಹುದು ಎಂದು ಮಾಹಿತಿ ನೀಡಿದ್ದಾರೆ.

ಪ್ಯಾರಿಸ್ ಸೇಂಟ್ ಜರ್ಮೈನ್ ಅಭಿಮಾನಿಗಳು-ಪೊಲೀಸರ ಮಧ್ಯೆ ಸಂಘರ್ಷಪ್ಯಾರಿಸ್ ಸೇಂಟ್ ಜರ್ಮೈನ್ ಅಭಿಮಾನಿಗಳು-ಪೊಲೀಸರ ಮಧ್ಯೆ ಸಂಘರ್ಷ

"ಆತನಿಗೆ ಏನಾಗಿದೆ ಎಂದು ನನಗೆ ತಿಳಿಯುತ್ತಿಲ್ಲ. ಆದರೆ ಆತ ಕಳೆದ ಕೆಲ ತಿಂಗಳಿನಿಂದ ಗಂಭೀರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಹಾಗೂ ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು. ಆತನ ಮಕ್ಕಳು ಕೂಡ ಉತ್ತಮ ನೆಲೆ ಕಂಡುಕೊಂಡಿದ್ದು ಈ ರೀತಿ ಯಾಕೆ ಮಾಡಿಕೊಂಡಿದ್ದಾರೆಂದು ಸ್ವತಃ ಇಕ್ಬಾಲ್ ಹೇಳಬೇಕಿದೆ" ಎಂದು ಇಕ್ಬಾಲ್ ಆಪ್ರ ಗೆಳೆಯ ಹೇಳಿಕೆಯನ್ನು ನೀಡಿದ್ದಾರೆ.

ಕೊಲೆ ವಿಚಾರವಾಗಿ ಫಿಲಿಡೆಲ್ಫಿಯಾ ತನಿಖಾಧಿಕಾರಿಯಗಳು ಮಾಹಿತಿಯನ್ನು ನೀಡಿದ್ದು ಎರಡೂ ಕೊಲೆಗಳನ್ನೂ ತಾವೇ ಮಾಡಿರುವುದಾಗಿ ಇಕ್ಬಾಲ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಕೊಲೆ ಮಾಡಿದ ಬಳಿಕ ಪುತ್ರನಿಗೆ ಕರೆ ಮಾಡಿ ತನ್ನ ಕೃತ್ಯವನ್ನು ಹೇಳಿಕೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.

ಅಮೆರಿಕಾದ ಮಾಧ್ಯಮಗಳ ವರದಿಯ ಪ್ರಕಾರ 911ಗೆ ಬಂದ ಕೊಲೆ ಕುರಿತ ಕರೆಯನ್ನು ಆಧರಿಸಿ ಬಂದ ಪೊಲೀಸ್ ಅಧಿಕಾರಿಗಳಿಗೆ "ತಾಯಿ ಹಾಗೂ ಪತ್ನಿಯನ್ನು ಕೊಲೆ ಮಾಡಿದ್ದು ಅವರು ಮನೆಯೊಳಗೆ ಇದ್ದಾರೆ" ಎಂದು ಸ್ವತಃ ಇಕ್ಬಾಲ್ ತಿಳಿಸಿದ್ದಾರೆ. ವರದಿಯ ಪ್ರಕಾರ ಹಿರಿ ವಯಸ್ಸಿನ ಮಹಿಳೆಯ ಮೃತ ದೇಹ ಮೊದಲನೇ ಮಹಡಿಯ ಬೆಡ್‌ರೂಮ್‌ನಲ್ಲಿ ಹಾಗೂ ಇನ್ನೋಂದು ಮಹಿಳೆಯ ಮೃತದೇಹ ಎರಡನೇ ಮಹಡಿಯ ಬೆಡ್‌ರೂಮ್‌ನಲ್ಲಿ ಪತ್ತೆಯಾಗಿದೆ. ಇಬ್ಬರಿಗೂ ಕುತ್ತಿಗೆಗೆ ಇರಿದು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Story first published: Wednesday, August 26, 2020, 14:23 [IST]
Other articles published on Aug 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X