ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜೂ. ವರ್ಲ್ಡ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ 2022: ಬೆಳ್ಳಿ ಗೆದ್ದ ಎಲೆಕ್ಟ್ರಿಷಿಯನ್ ಮಗಳು

ಛತ್ತೀಸ್‌ಗಢದ ರಾಜನಂದಗಾಂವ್‌ನ ಎಲೆಕ್ಟ್ರಿಷಿಯನ್ ಪುತ್ರಿ ಜ್ಞಾನೇಶ್ವರಿ ಯಾದವ್ ಗ್ರೀಸ್‌ನಲ್ಲಿ ನಡೆದ ಜೂನಿಯರ್ ವರ್ಲ್ಡ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2022ರಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೇ 2ರಂದು ಗ್ರೀಸ್‌ನ ಹೆರಾಕ್ಲಿಯನ್‌ನಲ್ಲಿ ನಡೆದ ಐಡಬ್ಲ್ಯುಎಫ್ ಜೂನಿಯರ್ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಭಾರತದ ಜ್ಞಾನೇಶ್ವರಿ ಯಾದವ್ ಬೆಳ್ಳಿ ಪದಕವನ್ನು ಗೆದ್ದರು.

ಜ್ಞಾನೇಶ್ವರಿ ಯಾದವ್ ಒಟ್ಟು 156ಕೆಜಿ (73ಕೆಜಿ+83ಕೆಜಿ) ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, 18ರ ಹರೆಯದ ಇನ್ನೊಬ್ಬ ಭಾರತೀಯ ಸ್ಪರ್ಧಿ ರಿತಿಕಾ 150ಕೆಜಿ (69ಕೆಜಿ+81ಕೆಜಿ) ಭಾರ ಎತ್ತುವ ಮೂಲಕ 10-ಲಿಫ್ಟರ್ ವಿಭಾಗದಲ್ಲಿ ಕಂಚು ಪದಕ ಗೆದ್ದರು.

Gyaneshwari Yadav Bagged A Silver Medal in Jr. World Weightlifting Championship 2022

"ನಾವು ತುಂಬಾ ಸಂತೋಷವಾಗಿದ್ದೇವೆ ಮತ್ತು ಅವಳು (ಜ್ಞಾನೇಶ್ವರಿ) ಮತ್ತಷ್ಟು ಉತ್ಕೃಷ್ಟ ಪ್ರದರ್ಶನ ಮತ್ತು ದೇಶಕ್ಕೆ ಇಂತಹ ಅನೇಕ ಪ್ರಶಸ್ತಿಗಳನ್ನು ಗೆದ್ದು ತರುತ್ತಾರೆ ಎಂದು ಭಾವಿಸುತ್ತೇವೆ," ಎಂದು ಆಕೆಯ ಪೋಷಕರು ತಮ್ಮ ಮಗಳ ಸಾಧನೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು.

ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮತ್ತು ಇಂಡೋನೇಷ್ಯಾದ ಪ್ರಬಲ ಆಟಗಾರ್ತಿ ವಿಂಡಿ ಕಾಂಟಿಕಾ ಐಸಾ ಅವರು ಒಟ್ಟು 185 ಕೆಜಿ (83 ಕೆಜಿ +102 ಕೆಜಿ) ಪ್ರಯತ್ನಕ್ಕೆ ಚಾಂಪಿಯನ್ ಪಟ್ಟ ಅಲಂಕರಿಸಿದರು. ಟೂರ್ನಿಯ ಆರಂಭಿಕ ದಿನದಂದು ಭಾರತೀಯ ವೇಟ್‌ಲಿಫ್ಟರ್‌ಗಳಿಗೆ ಇದು ಅತ್ಯುತ್ತಮ ಪ್ರದರ್ಶನವಾಗಿದೆ.

"ಜೂನಿಯರ್ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಎಲ್ಲಾ ಆವೃತ್ತಿಗಳಲ್ಲಿ ಸೈಖೋಮ್ ಮೀರಾಬಾಯಿ ಚಾನು (ಕಂಚು), ಜಿಲ್ಲಿ ದಲಾಬೆಹೆರಾ (ಕಂಚು) ಮತ್ತು ಅಚಿಂತಾ ಶೆಯುಲಿ (ಬೆಳ್ಳಿ) ಈ ಹಿಂದೆ ಭಾರತೀಯ ವೇಟ್‌ಲಿಫ್ಟರ್‌ಗಳು ಒಟ್ಟಾರೆ ಕೇವಲ ಮೂರು ಪದಕಗಳನ್ನು ಗೆದ್ದಿದ್ದಾರೆ ಎಂಬುದನ್ನು ಗಮನಿಸಬಹುದು.

Gyaneshwari Yadav Bagged A Silver Medal in Jr. World Weightlifting Championship 2022

"2022ರ IWF ಜೂನಿಯರ್ (ಪುರುಷರು ಮತ್ತು ಮಹಿಳೆಯರು) ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಆರಂಭಿಕ ದಿನದಂದು ಭಾರತೀಯ ವೇಟ್‌ಲಿಫ್ಟರ್‌ಗಳು 3 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 1 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕಗಳನ್ನು ನಿರೀಕ್ಷಿಸಲಾಗುವುದು," ಎಂದು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ಅಧ್ಯಕ್ಷ ಸಹದೇವ್ ಯಾದವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಹೆರಾಕ್ಲಿಯನ್‌ನಲ್ಲಿ 2022ರ ಐಡಬ್ಲ್ಯುಎಫ್ ಜೂನಿಯರ್ ವರ್ಲ್ಡ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಎಲ್ಲಾ ವೇಟ್‌ಲಿಫ್ಟರ್‌ಗಳನ್ನು ನಾನು ಅಭಿನಂದಿಸುತ್ತೇನೆ ಮತ್ತು ರಾಷ್ಟ್ರೀಯ ಶಿಬಿರಗಳಲ್ಲಿ ಅಲ್ಪಾವಧಿಯಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ಭಾರತೀಯ ತರಬೇತುದಾರರ ಪ್ರಯತ್ನವನ್ನು ಶ್ಲಾಘಿಸಲು ಬಯಸುತ್ತೇನೆ,'' ಎಂದು ಅವರು ಹೇಳಿದರು.

Story first published: Saturday, May 7, 2022, 16:10 [IST]
Other articles published on May 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X