ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್ ಇತಿಹಾಸದಲ್ಲಿ ವಿಶೇಷ ಸಾಧನೆ: ಒಂದೇ ದಿನ ಚಿನ್ನಕ್ಕೆ ಮುತ್ತಿಕ್ಕಿದ ಸೋದರ ಸೋದರಿ

History of Olympics Judokas Hifumi, Uta become first siblings to win gold on same day

ಟೋಕಿಯೋ, ಜುಲೈ 25: ವಿಶ್ವದ ಅತ್ಯಂತ ದೊಡ್ಡ ಕ್ರೀಡಾಕೂಟವಾಗಿರುವ ಒಲಿಂಪಿಕ್ಸ್‌ನಲ್ಲಿ ಸಾಕಷ್ಟು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತದೆ. ನಿಬ್ಬೆರಗಾಗುವಂತಾ ವಿಶ್ವದಾಖಲೆಗಳನ್ನು ಕ್ರೀಡಾಪಟುಗಳು ನಿರ್ಮಿಸುತ್ತಿರುತ್ತಾರೆ. ಆದರೆ ಇವತ್ತು ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯಂತ ವಿಶೇಷವಾದ ದಾಖಲೆಯೊಂದು ನಿರ್ಮಾಣವಾಗಿದೆ. ಜಪಾನ್‌ನ ಸೋದರ ಸೋದರಿ ಈ ಸಾಧನೆ ಮಾಡಿದ ಸಾಧಕರಾಗಿದ್ದಾರೆ.

ಜಪಾನ್‌ನ ಸೋದರ ಹಾಗೂ ಸೋದರಿಯರಿಬ್ಬರು ಒಂದೇ ದಿನ ಪ್ರತ್ಯೇಕ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಇದು ವೈಯಕ್ತಿಕ ವಿಭಾಗದಲ್ಲಿ ಸೋದರ ಸೋದರಿ ಒಂದೇ ದಿನ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದು ಒಲಿಂಪಿಕ್ಸ್ ಇತಿಹಾಸದಲ್ಲಿ ಪ್ರಥಮ ನಿದರ್ಶನವಾಗಿದೆ.

ಟೋಕಿಯೋ ಒಲಿಂಪಿಕ್ಸ್‌: ರೋಯಿಂಗ್‍ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಅರ್ಜುನ್ ಮತ್ತು ಅರವಿಂದ್ಟೋಕಿಯೋ ಒಲಿಂಪಿಕ್ಸ್‌: ರೋಯಿಂಗ್‍ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಅರ್ಜುನ್ ಮತ್ತು ಅರವಿಂದ್

ಜಪಾನ್‌ನ ಜುಡೋ ಪಟು ಹಿಫುಮಿ ಅಬೆ ಭಾನುವಾರ ವೈಯಕ್ತಿಕ ಪುರುಷರ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಅದಾದ ಒಂದುಗಂಟೆಯ ಅಂತರದಲ್ಲಿ ಜುಡೋ ಕ್ರೀಡೆಯಲ್ಲಿಯೇ ಮಹಿಳೆಯರ 52 ಕೆಜಿ ವಿಭಾಗದಲ್ಲಿ ಅವರ ಸೋದರಿ ಉಟ ಅಬೆ ಕೂಡ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಜಪಾನ್‌ನ ಈ ಸೋದರ ಸೋದರಿ ಸ್ಮರಣೀಯ ಸಾಧನೆ ಮಾಡಿದ್ದಾರೆ.

ಈ ವಿಶೇಷ ಸಾಧನೆಯ ಬಳಿಕ ಹಿಫುಮಿ ಅಬೆ ಪ್ರತಿಕ್ರಿಯಿಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಸೋದರ ಸೋದರಿಯಾಗಿ ಟೋಕಿಯೋ ಒಲಿಂಒಇಕ್ಸ್‌ನಲ್ಲಿ ಈ ಸಾಧನೆಯನ್ನು ಮಾಡಿ ಮಿಂಚುತ್ತೇವೆ ಎಂದು ನಾವು ಭಾವಿಸಿರಲಿಲ್ಲ. ನಾನು ತುಂಬಾ ಸಂತಸಗೊಂಡಿದ್ದೇನೆ. ಫೈನಲ್ ಹಂತದಲ್ಲಿ ನಾನು ನಿಜಕ್ಕೂ ಶಾಂತನಾಗಿದ್ದೆ" ಎಂದು ಹಿಫುಮಿ ಅಬೆ ಹೇಳಿದ್ದಾರೆ.

ಜಪಾನ್ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾನುವಾರದ ವೇಳೆಗೆ ಐದು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರು ಚಿನ್ನದ ಪದಕ ಪಡೆದಿರುವ ಚೀನಾ ಮೊದಲ ಸ್ಥಾನದಲ್ಲಿ ಹಾಗೂ ಅಮೆರಿಕಾ ಮೂರನೇ ಸ್ಥಾನದಲ್ಲಿದೆ.

Story first published: Sunday, July 25, 2021, 20:57 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X