ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅರ್ಜುನ ಪ್ರಶಸ್ತಿಗೆ ಗಿರೀಶ್, ಮಮತಾ ಹೆಸರು ಶಿಫಾರಸು

By Mahesh

ನವದೆಹಲಿ, ಆ.12: ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಒಲಿಂಪಿಕ್ ಪ್ರಶಸ್ತಿ ವಿಜೇತ ಪ್ಯಾರಾಲಂಪಿಕ್ ಅಥ್ಲೀಟ್ ಎಚ್ ಎನ್ ಗಿರೀಶ ಹಾಗೂ ಕಬಡ್ಡಿ ಪಟು ಮಮತಾ ಪೂಜಾರಿ, ಟೀಂ ಇಂಡಿಯಾದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೇರಿದಂತೆ ಒಟ್ಟಾರೆ 15 ಕ್ರೀಡಾಪಟುಗಳ ಹೆಸರನ್ನು ಶಿಫಾರಸು ಮಾಡಲಾಗಿದೆ.

ಇದೇ ಮೊದಲ ಬಾರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತಿಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಹೇಳಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ 15 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಕಪಿಲ್ ಹೇಳಿದ್ದಾರೆ.

Mamata Pujari

ಕರ್ನಾಟಕದ ಗಿರೀಶ ಹೊಸನಗರ ನಾಗರಾಜೇಗೌಡ ಅವರು ಲಂಡನ್ನಿನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ 2012ರ ಎತ್ತರ ಜಿಗಿತದಲ್ಲಿ 1.74 ಮೀ. ಎತ್ತರಕ್ಕೆ ಜಿಗಿದು ರಜತ ಪದಕ ಗೆದ್ದಿದ್ದರು. ಗಿರೀಶ್ ಸಾಧನೆ ಕಂಡು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು "Many congratulations to Girisha Hosanagara Nagarajegowda to have given India its first medal at the Paralympic Games" ಎಂದು ಮೋದಿ ಟ್ವೀಟ್ ಮಾಡಿದ್ದರು [ಬೆಳ್ಳಿ ಗೆದ್ದ ಕನ್ನಡಿಗ ಗಿರೀಶ್ ]

2002ರಲ್ಲಿ ಕಬಡ್ಡಿ ಆಟವನ್ನು ಆರಂಭಿಸಿದ್ದ ಮಮತಾ, 2003ರಲ್ಲಿ ರಾಜ್ಯಮಟ್ಟದಲ್ಲಿ, 2004-05ರಲ್ಲಿ ರಾಷ್ಟ್ರಮಟ್ಟದಲ್ಲಿ, 2006ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಪಡೆದುಕೊಂಡರು. ಏಷ್ಯನ್ ಗೇಮ್ಸ್ ಸೇರಿದಂತೆ ಅನೇಕ ಪ್ರಮುಖ ಕ್ರೀಡಾಕೂಟಗಳಲ್ಲಿ ಭಾರತ ತಂಡದ ನಾಯಕಿಯಾಗಿದ್ದರು. ಉಡುಪಿಯ ಅಜೆಕಾರ್ ಸಮೀಪದ ಎಣ್ಣೆಹೊಳೆ ಗ್ರಾಮದ ಕಬಡ್ಡಿ ಪಟು ಮಮತಾ ಪೂಜಾರಿ ನೇತೃತ್ವದ ಮಹಿಳಾ ತಂಡ ಕಬಡ್ಡಿ ವಿಶ್ವಕಪ್ ಗೆಲುವು ಸಾಧಿಸಿತ್ತು.[ಮಮತಾ ಜತೆ ಮಾತುಕತೆ]

HN Girisha

ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳ ಹೆಸರು ಇಂತಿದೆ:
* ಎಚ್ ಎನ್ ಗಿರೀಶ( ಪ್ಯಾರಾಲಂಪಿಕ್)
* ಮಮತಾ ಪೂಜಾರಿ (ಕಬಡ್ಡಿ)
* ಅಖಿಲೇಶ್ ವರ್ಮ(ಆರ್ಚರಿ)
* ಟಿಂಕೂ ಲೂಕಾ(ಅಥ್ಲೆಟಿಕ್ಸ್)
*ಆರ್ ಅಶ್ವಿನ್ (ಕ್ರಿಕೆಟ್)
* ಜೈ ಭಗವಾನ್ (ಬಾಕ್ಸಿಂಗ್)
* ಗೀತು ಆನ್ ಜೋಸ್(ಬ್ಯಾಸ್ಕೆಟ್ ಬಾಲ್)
* ವಿ ಡಿಜು(ಬಾಡ್ಮಿಂಟನ್)
* ಸಾಜಿ ಥಾಮಸ್ (ರೋಯಿಂಗ್)
* ಹೀನಾ ಸಿಧು(ಶೂಟಿಂಗ್)
* ಅನಿರ್ಬಾಬ್ ಲಹಿರಿ(ಗಾಲ್ಫ್)
* ಅನಾಕ ಅಲಂಕಮಣಿ(ಸ್ಕ್ವಾಶ್)
* ಟಾಮ್ ಜೋಸೆಫ್ (ವಾಲಿಬಾಲ್)
* ರೇಣುಬಾಲಾ ಚಾನು(ವೇಟ್ ಲಿಫ್ಟಿಂಗ್)
* ಸುನಿಲ್ ರಾಣಾ(ವೇಟ್ ಲಿಫ್ಟಿಂಗ್)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X