ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಾನೀ ಪದಕವನ್ನು ನನ್ನ ದೇಶಕ್ಕೆ ಅರ್ಪಿಸುತ್ತಿದ್ದೇನೆ: ಮೀರಾಬಾಯ್ ಚಾನು

I dedicate this medal to my country, says Silver winner Weightlifter Mirabai Chanu

ಟೋಕಿಯೋ: 5 ವರ್ಷಗಳ ಹಿಂದೆ ರಿಯೋ ಒಲಿಂಪಿಕ್ಸ್ ನಲ್ಲಿ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯ್ ಚಾನು ಒಂದೇ ಒಂದು ಲಿಫ್ಟ್ ಯಶಸ್ವಿಯಾಗಿಸಿರಲಿಲ್ಲ. ಆವತ್ತು ಚಾನು ಒತ್ತಡದಿಂದ ಬಳಲಿದ್ದರು. ಆದರೆ ಅದೇ ಚಾನು ಟೋಕಿಯೋ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಬೆಳ್ಳಿಯ ಪದಕ ಗೆದ್ದಿದ್ದಾರೆ. ಇದು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಲಭಿಸಿದ ಮೊದಲನೇ ಪದಕ.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದಿಂದ ಈ ಮೂವರು ಆಟಗಾರರು ಔಟ್, ಬದಲಿ ಆಟಗಾರರ ಸೇರ್ಪಡೆಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದಿಂದ ಈ ಮೂವರು ಆಟಗಾರರು ಔಟ್, ಬದಲಿ ಆಟಗಾರರ ಸೇರ್ಪಡೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೀರಾಬಾಯ್ ಚಾನು ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 115 ಕೆಜಿ ಭಾರ ಎತ್ತುವ ಮೂಲಕ ಚಾನು ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದೇ ವಿಭಾಗದಲ್ಲಿ ಚಿನ್ನದ ಪದಕ ಚೀನಾದ ಹೌ ಝಿಹುಯ್ (94kg+116kg) ಪಾಲಾಗಿದೆ.

"ಇದು ನಿಜಕ್ಕೂ ನನ್ನ ಪಾಲಿಗೆ ಕನಸು ನನಸಾದಂತೆ. ಈ ಪದಕವನ್ನು ನಾನು ನನ್ನ ದೇಶಕ್ಕೆ ಅರ್ಪಿಸುತ್ತಿದ್ದೇನೆ ಮತ್ತು ನನಗಾಗಿ ಪ್ರಾರ್ಥಿಸಿದ ಬಿಲಿಯನ್‌ ಭಾರತೀಯರಿಗೆ ನನ್ನ ಧನ್ಯವಾದಗಳು. ಆ ನಿಮ್ಮ ಪ್ರಾರ್ಥನೆ ನನ್ನನ್ನು ಇಲ್ಲೀವರೆಗೆ ಕರೆತಂದಿತು," ಎಂದು ಪದಕ ಗೆದ್ದ ಬಳಿಕ ಚಾನು ಹೇಳಿದ್ದಾರೆ.

ಭಾರತ vs ಶ್ರೀಲಂಕಾ: ಟಿ20 ಸಿರೀಸ್, ಯಾವಾಗ? ಎಲ್ಲಿ? ನೇರಪ್ರಸಾರದ ಮಾಹಿತಿಭಾರತ vs ಶ್ರೀಲಂಕಾ: ಟಿ20 ಸಿರೀಸ್, ಯಾವಾಗ? ಎಲ್ಲಿ? ನೇರಪ್ರಸಾರದ ಮಾಹಿತಿ

ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಭಾರತಕ್ಕೆ ಪದಕ ಗೆದ್ದ ಬಳಿಕ (2000ರ ಸಿಡ್ನಿ ಒಲಿಂಪಿಕ್ಸ್, ಕಂಚು) ಭಾರತಕ್ಕೆ ವೇಟ್ ಲಿಫ್ಟಿಂಗ್‌ನಲ್ಲಿ ಪದಕ ಗೆಲ್ಲುತ್ತಿರುವ ಎರಡನೇ ಭಾರತೀಯ ಮೀರಾಬಾಯ್ ಚಾನು.

Story first published: Saturday, July 24, 2021, 17:41 [IST]
Other articles published on Jul 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X