ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಐ ಫಿಟ್ನೆಸ್ ಅಕಾಡೆಮಿಂದ ಕರ್ನಾಟಕದಲ್ಲಿ ಬಾಡಿ ಬಿಲ್ಡರ್ಸ್ ಪ್ರತಿಭಾ ಶೋಧ

iFITNESS plans to talent scout body builders from all over Karnataka

ಬೆಂಗಳೂರು, ಜೂನ್ 27: ವಿಶ್ವದರ್ಜೆಯ ಪರಿಕರಗಳು ಹಾಗೂ ಅತ್ಯುತ್ತಮ ತರಬೇತಿಯ ಫಿಟ್ನೆಸ್ ತಜ್ಞರನ್ನು ಹೊಂದಿರುವ ಬೆಂಗಳೂರು ಮೂಲದ ಫಿಟ್ನೆಸ್ ಹೌಸ್ ಐ ಫಿಟ್‍ನೆಸ್, ಈಗ ಕರ್ನಾಟಕದ ಉತ್ಸಾಹಿ ಬಾಡಿ ಬಿಲ್ಡರ್ ಗಳನ್ನು ಹುಡುಕಿ, ಅವರುಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಸಿದ್ಧಪಡಿಸುವ ಗುರಿಯನ್ನು ಹೊಂದಿದೆ. ಈ ಉದ್ದೇಶದಿಂದಲೇ ಐ ಫಿಟ್ನೆಸ್ ಸಂಸ್ಥೆ ತನ್ನ ಐ ಫಿಟ್ನೆಸ್ ಟ್ರೇನಿಂಗ್ ಅಕಾಡೆಮಿಯ ಮೂಲಕ ಕರ್ನಾಟಕ ಪೂರ್ತಿ ಪ್ರತಿಭಾ ಶೋಧ ನಡೆಸಿ ಉತ್ಸಾಹಿ ಬಾಡಿ ಬಿಲ್ಡರ್ ಗಳನ್ನು ಹುಡುಕುವ ಯೋಜನೆ ರೂಪಿಸಿದೆ.

ಪ್ರತಿಭಾ ಶೋಧದ ಮೂಲಕ ಆಯ್ಕೆಯಾದ ಬಾಡಿ ಬಿಲ್ಡರ್ ಗಳಿಗೆ, ವಿಶ್ವದರ್ಜೆಯ ವ್ಯವಸ್ಥೆಗಳನ್ನು ಹೊಂದಿರುವ, ಪರಿಕರಗಳಿರುವ ಹಾಗೂ ಗುಣಮಟ್ಟದ, ಉದ್ದೇಶಿತ ಟ್ರೇನರ್ ಗಳನ್ನು ಹೊಂದಿರುವ ಅಕಾಡೆಮಿಯಲ್ಲಿ ಗರಿಷ್ಠ ದರ್ಜೆಯ ತರಬೇತಿಯನ್ನು ನೀಡಲಾಗುತ್ತದೆ. ಈ ಉದ್ದೇಶಿತ ಯೋಜನೆಗಾಗಿ, ಅಮೂಲಾಗ್ರವಾಗಿ ರೂಪುರೇಷೆ ನಡೆಸಿ ಟ್ರೇನಿಂಗ್ ವಿಧಾನಗಳನ್ನು ಸಿದ್ಧಪಡಿಸಲಾಗಿದ್ದು, ಆ ಮೂಲಕ ಬಾಡಿ ಬಿಲ್ಡಿಂಗ್ ಕೌಶಲವನ್ನು ಬೆಳೆಸುವುದು ಮೂಲ ಉದ್ದೇಶವೆನಿಸಿದೆ. ಪೋಷಕಾಂಶ ಆಹಾರಗಳ ಬಗ್ಗೆ ಕೌನ್ಸೆಲಿಂಗ್ ಕೂಡ ಇದರ ಭಾಗವಾಗಿ ಇರಲಿದೆ.

iFITNESS plans to talent scout body builders from all over Karnataka

ಇದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ, ಕಾಯ್ ಗ್ರೀನ್ (ಪ್ರೆಡೇಟರ್ ಎಂದು ಪ್ರಸಿದ್ಧವಾಗಿ ಕರೆಯಲಾಗುತ್ತದೆ) ಹಾಗೂ ಐ ಫಿಟ್ನೆಸ್ ನಿರ್ದೇಶಕ ಅರವಿಂದ್ ಕುಮಾರ್ ಡಿ ಪೊರ್ವಾಲ್, "ಇಂದಿನ ಯುವ ಜನಾಂಗ, ಬಾಡಿ ಬಿಲ್ಡಿಂಗ್‍ಅನ್ನು ವೃತ್ತಿಪರವಾಗಿ ನೋಡುವ ಆಲೋಚನೆಯಲ್ಲಿದ್ದಾರೆ. ಇದನ್ನು ಕ್ರೀಡೆಯ ಆಯಾಮದಲ್ಲಿ ನೋಡುವ ರೀತಿ ಇತ್ತೀಚಿಗೆ ತೀರಾ ಹೆಚ್ಚಾಗಿ ಕಾಣುತ್ತಿದೆ' ಎಂದರು.

ಐ ಫಿಟ್ನೆಸ್, ಇಷ್ಟು ವರ್ಷದವರೆಗೂ ದೇಶದ ಬಾಡಿ ಬಿಲ್ಡರ್‍ಗಳಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿದ್ದೆವು. ಆದರೆ, ಈಗ ಬಾಡಿ ಬಿಲ್ಡಿಂಗ್ ವಲಯ ಇನ್ನಷ್ಟು ಪ್ರಗತಿ ಕಾಣಬೇಕೆಂಬ ಸಲುವಾಗಿ ವ್ಯವಸ್ಥಿತ ಹಾಗೂ ಉದ್ದೇಶಿತ ಯೋಜನೆಯನ್ನು ಸಿದ್ಧ ಮಾಡಿದ್ದೇವೆ. ವಿಶೇಷವೆಂದರೆ, ಈಗಾಗಲೇ ಕುಬ್ಜರ ಒಲಿಂಪಿಕ್ಸ್ ಎಂದೇ ಕರೆಯಲಾಗುವ ವಿಶ್ವ ಡ್ವಾರ್ಫ್ ಗೇಮ್ಸ್ ನ 7ನೇ ಆವೃತ್ತಿಯಲ್ಲಿ ರಾಜ್ಯದ ಡ್ವಾರ್ಫ್ ಅಥ್ಲೀಟ್‍ಗಳಿಗೆ ಐ ಫಿಟ್ನೆಸ್ ಟ್ರೇನಿಂಗ್ ಅಕಾಡೆಮಿಯಲ್ಲಿ ತರಬೇತಿ ನೀಡಲಾಗಿದೆ. ಈ ಗೇಮ್ಸ್ 2017ರಲ್ಲಿ ಕೆನಡದ ಆತಿಥ್ಯದಲ್ಲಿ ಗುಲೆಪ್ ವಿಶ್ವವಿದ್ಯಾಲಯದಲ್ಲಿ ನಡೆದಿತ್ತು ಎಂದು ಅರವಿಂದ್ ಕುಮಾರ್ ಹೇಳಿದರು.

iFITNESS plans to talent scout body builders from all over Karnataka

ಮಾಧ್ಯಮ ಗೋಷ್ಠಿಯಲ್ಲಿ ಭಾಗವಹಿಸಿದ್ದ ಕಾಯ್ ಗ್ರೀನ್, "ಭಾರತದಲ್ಲಿ ಬಾಡಿ ಬಿಲ್ಡಿಂಗ್‍ಅನ್ನು ಕ್ರೀಡೆಯನ್ನಾಗಿ ನೋಡುತ್ತಿದ್ದಾರೆ. ಇದು ನಿಜಕ್ಕೂ ನನಗೆ ಖುಷಿ ತಂದಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡರ್ ಗಳು ಯಶಸ್ಸು ಕಾಣಬೇಕಾದರೆ, ಫಿಟ್‍ನೆಸ್ ಮೂಲಸೌಕರ್ಯಗಳು ಹಾಗೂ ಇತರ ಬೆಂಬಲ ವ್ಯವಸ್ಥೆಗಳು ದೊಡ್ಡ ಪಾತ್ರವನ್ನು ನಿಭಾಯಿಸುತ್ತದೆ' ಎಂದು ಹೇಳಿದರು.

ಪ್ರೆಡೇಟರ್ ಎಂದೇ ಖ್ಯಾತವಾಗಿರುವ ಕಾಯ್ ಗ್ರೀನ್, ಅಮೆರಿಕದ ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಫೆಡರೇಷನ್‍ನ ವೃತ್ತಿಪರ ಬಾಡಿ ಬಿಲ್ಡರ್, ವೃತ್ತಿಪರ ಟ್ರೇನರ್, ಆರ್ಟಿಸ್ಟ್ ಹಾಗೂ ನಟ. 2009, 2010 ಹಾಗೂ 2016ರಲ್ಲಿ ಅರ್ನಾಲ್ಡ್ ಕ್ಲಾಸಿಕ್ ಟೂರ್ನಿಯ ವಿಜೇತರು. ಅದರೊಂದಿಗೆ 2012, 2013 ಹಾಗೂ 2014ರ ಮಿಸ್ಟರ್ ಒಲಿಂಪಿಯಾ ಸ್ಪರ್ಧೆಯ ಮೊದಲ ರನ್ನರ್‍ಅಪ್. ಸದ್ಯ ಕಾಯ್ ಗ್ರೀನ್ ಭಾರತ ಪ್ರವಾಸದಲ್ಲಿದ್ದು, ಬಾಡಿ ಬಿಲ್ಡಿಂಗ್ ಕ್ರೀಡೆಯನ್ನು ಪ್ರಸಿದ್ಧಿ ಮಾಡುವ ಹಾಗೂ ಬಾಡಿ ಬಿಲ್ಡಿಂಗ್ ಸಮುದಾಯದೊಂದಿಗೆ ಚರ್ಚೆ ಹಾಗೂ ಅನುಭವಗಳನ್ನು ಹಂಚಿಕೊಳ್ಳುವ ಕಾರ್ಯದಲ್ಲಿದ್ದಾರೆ.

Story first published: Thursday, June 27, 2019, 12:47 [IST]
Other articles published on Jun 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X