ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಲಾರ್ಡ್ಸ್ 200: ಸಚಿನ್, ವಾರ್ನ್ ತಂಡದ ಸಂಭ್ರಮ

By Mahesh

ಲಂಡನ್, ಜು.6: ಕ್ರಿಕೆಟ್ ಜಗತ್ತಿನ ಮಾಜಿ ಹಾಗೂ ಹಾಲಿ ದಿಗ್ಗಜರು ಒಟ್ಟಿಗೆ ಕಲೆತು ಮೈದಾನವೊಂದರ ಹುಟ್ಟುಹಬ್ಬವನ್ನು ಆಚರಿಸಿದ ಬಗೆ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಛೇ ರೀತಿ ಪಂದ್ಯಗಳು ಇನ್ನಷ್ಟು ನಡೆಯಬಾರದೆ ಎಂದು ಬಯಸಿದ್ದಾರೆ.

ಕ್ರಿಕೆಟ್ ಜಗತ್ತಿನ ಮಾಜಿ ಹಾಗೂ ಹಾಲಿ ಕ್ರಿಕೆಟ್ ಕಲಿಗಳು ಒಟ್ಟಾಗಿ ಬೆರೆತು ಜು.5 ರಂದು ಲಾರ್ಡ್ಸ್ ಮೈದಾನದಲ್ಲಿ ಏಕದಿನ ಕ್ರಿಕೆಟ್ ಪಂದ್ಯವನ್ನಾಡಿದರು. 'ಕ್ರಿಕೆಟ್ ದೇವರು' ಸಚಿನ್ ಅವರ XI ವಿರುದ್ಧ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ XI ಸೆಣಸಾಟ ರೋಚಕವಾಗಿತ್ತು.

ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡದ ಎರಡೂ ತಂಡಗಳು ಸಂತಸದಿಂದ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದರು. ವಾರ್ನ್ ತಂಡದ ಯುವರಾಜ್ ಸಿಂಗ್ ಶತಕಕ್ಕೆ ಬದಲಾಗಿ ಸಚಿನ್ ತಂಡದ ಫಿಂಚ್ ಭರ್ಜರಿ ಶತಕ ಗಳಿಸಿ ತಂಡಕ್ಕೆ ಜಯ ತಂದಿತ್ತರು. 294 ರನ್‌ಗಳ ಸವಾಲನ್ನು ಎದುರಿಸಿದ ಸಚಿನ್ ಪಡೆ ಕೇವಲ ಮೂರು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಪಂದ್ಯದ ರೋಚಕ ಕ್ಷಣಗಳ ಚಿತ್ರಾವಳಿ ಇಲ್ಲಿದೆ ತಪ್ಪದೇ ನೋಡಿ..

ಎಂಸಿಸಿ ತಂಡಕ್ಕೆ ಸಚಿನ್ ತೆಂಡೂಲ್ಕರ್ ನಾಯಕ

ಎಂಸಿಸಿ ತಂಡಕ್ಕೆ ಸಚಿನ್ ತೆಂಡೂಲ್ಕರ್ ನಾಯಕ

ಎಂಸಿಸಿ ತಂಡದೊಡನೆ ನಾಯಕ ಸಚಿನ್ ತೆಂಡೂಲ್ಕರ್ ಗ್ರೂಪ್ ಫೋಟೋ

ಶೇಷ ವಿಶ್ವ ತಂಡಕ್ಕೆ ವಾರ್ನ್ ನಾಯಕ

ಶೇಷ ವಿಶ್ವ ತಂಡಕ್ಕೆ ವಾರ್ನ್ ನಾಯಕ

ನಾಯಕ ಶೇನ್ ವಾರ್ನ್ ಜತೆ ರೆಸ್ಟ್ ಆಫ್ ದಿ ವರ್ಲ್ಡ್ ತಂಡ

ಯುವರಾಜ್ ಸಿಂಗ್ ಆಗಮನ

ಯುವರಾಜ್ ಸಿಂಗ್ ಆಗಮನ

ಭಾರತದ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಲಾರ್ಡ್ಸ್ ಮೈದಾನಕ್ಕೆ ಆಗಮಿಸುತ್ತಿದ್ದಾರೆ.

ಮೈದಾನದಲ್ಲಿ ಉಭಯ ತಂಡದ ನಾಯಕರು

ಮೈದಾನದಲ್ಲಿ ಉಭಯ ತಂಡದ ನಾಯಕರು

ಮೈದಾನದಲ್ಲಿ ಉಭಯ ತಂಡದ ನಾಯಕರು ಟಾಸ್ ಗೆ ಮುನ್ನ ಪಿಚ್ ಪರೀಕ್ಷೆ ನಡೆಸಿದರು

 ಶ್ರೀಲಂಕಾದ ಸ್ಪಿನ್ನರ್ ಮುರಳಿ ಆಗಮನ

ಶ್ರೀಲಂಕಾದ ಸ್ಪಿನ್ನರ್ ಮುರಳಿ ಆಗಮನ

ಲಾರ್ಡ್ಸ್ ಮೈದಾನಕ್ಕೆ ಶ್ರೀಲಂಕಾದ ಸ್ಪಿನ್ನರ್ ಮುರಳಿ ಆಗಮನ

ವಾರ್ನ್ ತಂಡಕ್ಕೆ ಮೊದಲ ಬ್ಯಾಟಿಂಗ್ ಅವಕಾಶ

ವಾರ್ನ್ ತಂಡಕ್ಕೆ ಮೊದಲ ಬ್ಯಾಟಿಂಗ್ ಅವಕಾಶ

ವಾರ್ನ್ ತಂಡಕ್ಕೆ ಮೊದಲ ಬ್ಯಾಟಿಂಗ್ ಅವಕಾಶ ಲಭಿಸಿತು. ಆಡಂ ಗಿಲ್ ಕ್ರಿಸ್ಟ್ ಹಾಗೂ ಸೆಹ್ವಾಗ್ ಭರ್ಜರಿ ಆರಂಭ ಪಡೆದರೂ ಮುಂದುವರೆಸಲಿಲ್ಲ. ಸಚಿನ್ ತಂಡದ ಸ್ಪಿನ್ನರ್ ಅಜ್ಮಲ್ ಅಡ್ಡಗೋಡೆಯಾದರು.

ಶತಕ ಸಂಭ್ರಮದಲ್ಲಿ ಯುವರಾಜ್ ಸಿಂಗ್

ಶತಕ ಸಂಭ್ರಮದಲ್ಲಿ ಯುವರಾಜ್ ಸಿಂಗ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶೇನ್ ವಾರ್ನ್ ನಾಯಕತ್ವದ ರೆಸ್ಟ್ ಆಫ್ ದ ವರ್ಲ್ಡ್ ತಂಡ 12 ಓವರ್‌ಗಳಲ್ಲಿ ಕೇವಲ 68 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ ಸಿಡಿಸಿದ ಶತಕ(132)ದ ನೆರವಿನೊಂದಿಗೆ 7 ವಿಕೆಟ್‌ಗೆ 293 ರನ್ ಕಲೆಹಾಕಿತು. ಯುವಿ ಮೊತ್ತದಲ್ಲಿ 6 ಸಿಕ್ಸರ್ 8 ಬೌಂಡರಿಗಳು ಸೇರಿದ್ದವು.

ಬ್ರೆಟ್ ಲೀ ಬಿರುಸಿನ ಬೌಲಿಂಗ್

ಬ್ರೆಟ್ ಲೀ ಬಿರುಸಿನ ಬೌಲಿಂಗ್

ಬ್ರೆಟ್ ಲೀ ಬಿರುಸಿನ ಬೌಲಿಂಗ್ ಮಾಡಿದರೂ ಆಷ್ಟಾಗಿ ಯಶ ಪಡೆಯಲಿಲ್ಲ. ಒಂದು ಹಂತದಲ್ಲಿ ವಾರ್ನ್ ಗೆ ಎಸೆದ ಫುಲ್ ಟಾಸ್ ಭೀಕರವಾಗಿ ಪರಿಣಮಿಸಿತು. ಆದರೆ, ವಾರ್ನ್ ಸೂಕ್ತ ಸಮಯಕ್ಕೆ ಬ್ಯಾಟ್ ಅಡ್ಡ ಇಟ್ಟು ಬಚಾವಾದರು.

ಕ್ಲೀನ್ ಬೋಲ್ಡ್ ಆದ ವೀರೇಂದರ್ ಸೆಹ್ವಾಗ್

ಕ್ಲೀನ್ ಬೋಲ್ಡ್ ಆದ ವೀರೇಂದರ್ ಸೆಹ್ವಾಗ್

ಆರಂಭಿಕರಾದ ವೀರೇಂದ್ರ ಸೆಹ್ವಾಗ್ (22) ಮತ್ತು ಗಿಲ್‌ಕ್ರಿಸ್ಟ್ (29) ಮೊದಲ ವಿಕೆಟ್ 54 ರನ್ ಕಲೆ ಹಾಕಿದರು.

ಯುವರಾಜ್ ಸಿಂಗ್ ಆಕರ್ಷಕ ಬ್ಯಾಟಿಂಗ್ ಭಂಗಿ

ಯುವರಾಜ್ ಸಿಂಗ್ ಆಕರ್ಷಕ ಬ್ಯಾಟಿಂಗ್ ಭಂಗಿ

ಯುವಿ ಹೊರತುಪಡಿಸಿದರೆ, ಪಾಲ್ ಕಾಲಿಂಗ್‌ವುಡ್ (40) ಮತ್ತು ಪೀಟರ್ ಸಿಡ್ಲ್ (ಅಜೇಯ 33) ಕೊಂಚ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬ್ಯಾಟ್ಸ್‌ಮನ್‌ಗಳೆನಿಸಿದರು.

ಯುವರಾಜ್ ವಿಕೆಟ್ ಕಿತ್ತ ಸಚಿನ್

ಯುವರಾಜ್ ವಿಕೆಟ್ ಕಿತ್ತ ಸಚಿನ್

ಸಚಿನ್ ಬೌಲಿಂಗ್ ಮಾಡಿ ಶತಕವೀರ ಯುವರಾಜ್ ವಿಕೆಟ್ ಕಿತ್ತಿದ್ದು ವಿಶೇಷವಾಗಿತ್ತು. ಎಂಸಿಸಿ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಸಯೀದ್ ಅಜ್ಮಲ್ 45 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಬಹು ಜನಪ್ರಿಯಗೊಂಡ ಸೆಲ್ಫಿ ಫೋಟೋ

ಬಹು ಜನಪ್ರಿಯಗೊಂಡ ಸೆಲ್ಫಿ ಫೋಟೋ

ಪಂದ್ಯಕ್ಕೂ ಮುನ್ನ ಕ್ರಿಕೆಟ್ ದಿಗ್ಗಜರು ಒಟ್ಟಿಗೆ ಕಲೆತು ತೆಗೆದ ಸೆಲ್ಫಿ ಫೋಟೋ ಬಹು ಜನಪ್ರಿಯತೆ ಪಡೆದುಕೊಂಡಿದೆ.

ಸಯೀದ್ ಅಜ್ಮಲ್ 45/4

ಸಯೀದ್ ಅಜ್ಮಲ್ 45/4

ಎಂಸಿಸಿ ಪರ ಸಯೀದ್ ಅಜ್ಮಲ್ 45/4, ಬ್ರೆಟ್ ಲೀ 55/2, ಸಚಿನ್ ತೆಂಡೂಲ್ಕರ್ 33/1.

ಯುವರಾಜ್ ಸಿಂಗ್ ಶತಕಕ್ಕೆ ಫಿಂಚ್ ಉತ್ತರ

ಯುವರಾಜ್ ಸಿಂಗ್ ಶತಕಕ್ಕೆ ಸಚಿನ್ ತಂಡದ ಅರೋನ್ ಫಿಂಚ್ ತಕ್ಕ ಉತ್ತರ ನೀಡಿ ಪಂದ್ಯ ಗೆಲ್ಲಿಸಿದರು. ಸ್ಕೋರ್ ಕಾರ್ಡ್ ಹೀಗಿದೆ

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X