ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಂಡರ್-20 ಅಥ್ಲೆಟಿಕ್ಸ್ 10 ಕಿ.ಮೀ. ವಾಕ್‌ ರೇಸ್‌ನಲ್ಲಿ ಅಮಿತ್ ಖತ್ರಿಗೆ ಚಿನ್ನ

Indias Amit Khatri wins silver in 10km race walk at U-20 Athletics Meet

ನೈರೋಬಿ: ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ಅಂಡರ್-19 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಥ್ಲೀಟ್ ಅಮಿತ್ ಖತ್ರಿ ಪುರುಷರ 10 ಕಿ.ಮೀ. ವಾಕ್ ರೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಶನಿವಾರ (ಆಗಸ್ಟ್ 21) ನಡೆದ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡನೇ ಪದಕ ದೊರೆತಿದೆ.

ಆಂಗ್ಲರು ಭಾರತದ ಆ ಆಟಗಾರನನ್ನು ಕೆಣಕಿ ತಪ್ಪು ಮಾಡಿದ್ರು; ಕೊಹ್ಲಿ ಕೋಪಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಪನೇಸರ್ಆಂಗ್ಲರು ಭಾರತದ ಆ ಆಟಗಾರನನ್ನು ಕೆಣಕಿ ತಪ್ಪು ಮಾಡಿದ್ರು; ಕೊಹ್ಲಿ ಕೋಪಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಪನೇಸರ್

ಕೆಲ ದಿನಗಳ ಹಿಂದಷ್ಟೇ 4X400 ಮೀಟರ್ ಮಿಕ್ಸ್ಡ್ ರಿಲೇ ಸ್ಪರ್ಧೆಯಲ್ಲಿ ಭಾರತೀಯ ತಂಡಕ್ಕೆ ಕಂಚಿನ ಪದಕ ಲಭಿಸಿತ್ತು. ಈಗ ಟೂರ್ನಿಯಲ್ಲಿ ಎರಡನೇ ಪದಕ ದೊರೆತಿದೆ. ಪುರುಷರ 10 ಕಿ.ಮೀ. ವಾಕ್ ರೇಸ್‌ನಲ್ಲಿ ಖತ್ರಿ ಅವರು 42:17.94 ನಿಮಿಷ ಕಾಲಾವಧಿಯೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಈ ವಿಭಾಗದಲ್ಲಿ ಪ್ರಥಮ ಸ್ಥಾನ ಆತಿಥೇಯ ದೇಶ ಕೀನ್ಯಾದ ಪಾಲಾಗಿದೆ. ಕೀನ್ಯಾದ ಹೆರಿಸ್ಟೋನ್ ವನ್ಯೋನಿ ಅವರು 42:10.84 ನಿಮಿಷ ಕಾಲಾವಧಿಯೊಂದಿಗೆ ಬಂಗಾರ ಗೆದ್ದಿದ್ದಾರೆ. ಸ್ಪರ್ಧೆಯ ಕೊನೇ ಹಂತದವರೆಗೂ ಖತ್ರಿ ಮುಂಚೂಣಿಯಲ್ಲಿದ್ದರು. ಆದರೆ ಕೊನೇ ಎರಡು ಸುತ್ತುಗಳು ಬಾಕಿಯಿದ್ದಾಗ ವನ್ಯೋನಿ ಮುನ್ನಡೆ ಪಡೆದುಕೊಂಡು ಬಂಗಾರ ಗೆದ್ದರು.

ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!

ಸ್ಪೇನ್ ದೇಶದ ಪೌಲ್ ಮೆಗ್‌ಗ್ರಾತ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. 42:26.11 ನಿಮಿಷ ಕಾಲಾವಧಿಯೊಂದಿಗೆ ಮೆಗ್‌ಗ್ರಾತ್ ಕಂಚು ಗೆದ್ದಿದ್ದಾರೆ. ಚಿನ್ನ ಗೆದ್ದ ವನ್ಯೋನಿ ಮತ್ತು ಬೆಳ್ಳಿ ಗೆದ್ದ ಖತ್ರಿ ಇಬ್ಬರೂ ಈ ಸ್ಪರ್ಧೆಯಲ್ಲಿ ತಮ್ಮ ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆ ತೋರಿದ್ದಾರೆ.

Story first published: Saturday, August 21, 2021, 16:02 [IST]
Other articles published on Aug 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X