ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾಲು ಮುರಿದಾಗ ಅಂಬೆಗಾಲಲ್ಲೇ ಓಡಿದ ಕ್ರೀಡಾಪಟು: ಮನಮಿಡಿಯುವ ವಿಡಿಯೋ

Japanese woman crawls to reach her partner in relay race after leg fracture

ಟೋಕಿಯೋ, ನವೆಂಬರ್ 13: ರಿಲೇ ರೇಸ್‌ನಲ್ಲಿ ಓಡುತ್ತಿದ್ದ ವೇಳೆ ಕಾಲು ಮುರಿದರೂ ಓಟಗಾರ್ತಿ ಛಲ ಬಿಡದೆ ಅಂಬೆಗಾಲಿನಲ್ಲಿ ಸಾಗಿ ತನ್ನ ಸಹ ಓಟಗಾರ್ತಿಗೆ ರಿಲೇ ಹಸ್ತಾಂತರ ಮಾಡಿದ ಅಪೂರ್ವ ಕ್ಷಣದ ವಿಡಿಯೋ ವೈರಲ್ ಆಗಿದೆ.

ಸುಮಾರು 20 ದಿನಗಳ ಹಿಂದಿನ ಈ ವಿಡಿಯೋ ಈಗ ಎಲ್ಲಡೆ ವ್ಯಾಪಕವಾಗಿ ಹರಿದಾಡುತ್ತಿದೆ.

ಜಪಾನ್‌ನಲ್ಲಿ ಅ.22ರಂದು ಪ್ರಿನ್ಸೆಸ್ ಏಕಿದೆನ್ ರೇಸ್ ಕ್ರೀಡಾಕೂಟ ನಡೆಯುತ್ತಿತ್ತು. ಆಗ ರಿಲೇ ಸ್ಪರ್ಧೆ ವೇಳೆ 19 ವರ್ಷದ ರೀ ಈಡಾಳ ಕಾಲು ಸಮಸ್ಯೆಗೆ ಒಳಗಾಗಿ ಆಕೆ ಓಡಲಾಗದೆ ಕುಸಿದು ಬಿದ್ದಳು.

ಆದರೆ, ಆಕೆ ಆಟದಿಂದ ಹಿಂದಕ್ಕೆ ಸರಿಯಲಿಲ್ಲ. ಛಲದಿಂದ ಅಂಬೆಗಾಲಿಕ್ಕಿಕೊಂಡು ಸಾಧ್ಯವಾದಷ್ಟು ವೇಗವಾಗಿ ತನ್ನ ಸಹ ಆಟಗಾರ್ತಿಗೆ ರಿಲೇ ಬಾವುಟ ಹಸ್ತಾಂತರ ಮಾಡಲು ಪ್ರಯತ್ನಿಸಿದಳು.

41 ಕಿ.ಮೀ. ರೇಸ್‌ನಲ್ಲಿ ರೀ ಈಡಾ ತನ್ನ ಭಾಗದ ಸುಮಾರು 3.5 ಕಿ.ಮೀ. ಓಟ ಮುಗಿಸುವ ವೇಳೆಗೆ ಆಕೆಯ ಬಲಗಾಲು ಮುರಿದು ಹೋಯಿತು. ಹೀಗಾಗಿ ಆಕೆ ಅಂದಾಜು 200 ಮೀಟರ್ ದೂರ ಅಂಬೆಗಾಲಿಟ್ಟುಕೊಂಡೇ ಸಾಗಿ ತನ್ನ ಸಹ ಆಟಗಾರ್ತಿಯನ್ನು ತಲುಪಿದಳು.

ನೋವಿನಲ್ಲಿಯೂ ಆಟದ ಛಲ ಬಿಡದ ಆಕೆಯ ಬಗ್ಗೆ ಟ್ವಿಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಕೆಯನ್ನು ನಿಜವಾದ ಚಾಂಪಿಯನ್ ಎಂದು ಬಣ್ಣಿಸಿದ್ದಾರೆ.

Story first published: Tuesday, November 13, 2018, 17:22 [IST]
Other articles published on Nov 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X