ತಂದೆಯ ಕೂರಿಸಿ 1200 km ಸೈಕಲ್ ತುಳಿದ ಬಾಲಕಿಗೆ ಸೈಕಲ್ ಫೆಡ್‌.ನಿಂದ ಕರೆ

ಪಾಟ್ನಾ, ಮೇ 22: ಕೊರೊನಾವೈರಸ್‌ ಲಾಕ್‌ಡೌನ್‌ನಿಂದ ಭಾರತದಲ್ಲಿ ಅನೇಕ ಜನರ ಬದುಕು ಸಂಕಷ್ಟಕ್ಕೆ ಸಲುಕಿದೆ. ಬದುಕಿನ ಅನಿವಾರ್ಯತೆಗೆ ರಾಜ್ಯ ಬಿಟ್ಟು ಹೊರ ರಾಜ್ಯಗಳಲ್ಲಿ ವಾಸವಿರುವವರು, ವಲಸೆ ಕಾರ್ಮಿಕರ ಕಣ್ಣೀರ ಕತೆಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇಯಿವೆ.

ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳು

ವಲಸೆ ಕಾರ್ಮಿಕರರಿಗೆ ಸಂಬಂಧಿಸಿ ಇಲ್ಲೊಂದು ಮನಮುಟ್ಟುವ ಕತೆಯಿದೆ. 15ರ ಹರೆಯದ ಬಾಲಕಿ, ಜ್ಯೋತಿ ಕುಮಾರಿ ಎಂಬಾಕೆ ತನ್ನ ತಂದೆಯನ್ನು ಸೈಕಲ್‌ನಲ್ಲಿ ಕೂರಿಸಿ 1200 ಕಿ.ಮೀ ದೂರ ಸೈಕಲ್ ತುಳಿದಿದ್ದಾಳೆ. ತಾವು ದುಡಿಯುತ್ತಿದ್ದ ಜಾಗದಿಂದ ಸ್ವಂತ ಊರಿಗೆ ತೆರಳುವ ಸಲುವಾಗಿ ಬಾಲಕಿ ದಿಟ್ಟ ನಡೆ ತೋರಿದ್ದಾಳೆ.

'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್

ಜ್ಯೋತಿ ಮತ್ತವಳ ತಂದೆ ಲಾಕ್‌ಡೌನ್‌ಗೆ ಮೊದಲು ಹರ್ಯಾಣದ ಗುರುಗ್ರಾಮದಲ್ಲಿ ವಾಸವಿದ್ದರು. ಆದರೆ ದೇಶದಾದ್ಯಂತ ಲಾಕ್‌ಡೌನ್ ವಿಧಿಸಲಾಗಿದ್ದರಿಂದ ತಂದೆಯ ಜೊತೆಗೆ ತನ್ನೂರು ಬಿಹಾರಕ್ಕೆ ತೆರಳಲು ಬಾಲಕಿ ದಿಟ್ಟ ನಿರ್ಧಾರಕ್ಕೆ ಬಂದಳು. ತಂದೆಯನ್ನು ಕೂರಿಸಿ ಸೈಕಲ್ ಪೆಡಲ್ ಮಾಡುತ್ತ ಹೊರಟಳು ಕೂಡ. 7 ದಿನಗಳಲ್ಲಿ ಬಾಲಕಿ ತಾನು ತಲುಪಬೇಕಾದ ಊರು ತಲುಪಿದ್ದಾಳೆ.

ಐಸಿಸಿ ಮುಖ್ಯಸ್ಥರ ಸ್ಥಾನಕ್ಕೆ ಸೌರವ್ ಗಂಗೂಲಿ ಸೂಕ್ತ ವ್ಯಕ್ತಿ: ಗ್ರೇಮ್ ಸ್ಮಿತ್

ಬದುಕಿನಲ್ಲಿನ ನಮ್ಮ ಅವಿರತ ಹೋರಾಟ, ದಿಟ್ಟತನ ನಮ್ಮ ಬದುಕನ್ನು ಬದಲಿಸಬಲ್ಲದು ಅನ್ನೋದಕ್ಕೆ ಜ್ಯೋತಿಯ ದಿಟ್ಟ ನಡೆಯೇ ನಿದರ್ಶನವಾಗಬಲ್ಲದು. ತಂದೆಯನ್ನು ಹೊತ್ತು 1200 ಕಿ.ಮೀ. ದೂರ ಸೈಕಲ್ ತುಳಿದು ಗಟ್ಟಿತನ ಮೆರೆದ ಬಾಲಕಿಗೆ ಭಾರತದ ಸೈಕಲ್ ಫೆಡರೇಶನ್‌ನಿಂದ ಟ್ರಯಲ್ಸ್‌ಗಾಗಿ ಕರೆ ಬಂದಿದೆ. ಮುಂದಿನ ತಿಂಗಳು ಬಾಲಕಿ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವುದರಲ್ಲಿದ್ದಾರೆ.

ಐಪಿಎಲ್ ಈ ವರ್ಷವೇ ನಡೆಯುವ ಬಗ್ಗೆ ಆಸಿಸ್ ಕ್ರಿಕೆಟಿಗ ಭರವಸೆ

'8ನೇ ತರಗತಿಯ ಈ ಹುಡುಗಿ ಟ್ರಯಲ್ಸ್ ಪಾಸ್ ಮಾಡಿದರೆ, ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿರುವ 'ಸ್ಟೇಟ್ ಆಫ್‌ ದ ಆರ್ಟ್ ನ್ಯಾಷನಲ್' ಸೈಕ್ಲಿಂಗ್ ಅಕಾಡೆಮಿಯಲ್ಲಿ ಅಭ್ಯಾಸಕ್ಕೆ ಆಯ್ಕೆಯಾಗಲಿದ್ದಾಳೆ,' ಎಂದು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಓಂಕಾರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, May 22, 2020, 8:37 [IST]
Other articles published on May 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X