Breaking: ಖೋ ಖೋ ಆಟಗಾರ ತೀರ್ಥಹಳ್ಳಿಯ ವಿನಯ್ ಇನ್ನಿಲ್ಲ: ಮೆದುಳು ಜ್ವರಕ್ಕೆ ಬಲಿಯಾದ ಕ್ರೀಡಾಪಟು

ಶ್ರೇಷ್ಠ ಖೋ ಖೋ ಆಟಗಾರ ತೀರ್ಥಹಳ್ಳಿ ಮೂಲದ ವಿನಯ್ ವಿಧಿವಶವಾಗಿದ್ದಾರೆ. ಮೆದುಳು ಜ್ವರದಿಂದ ಬಳಲುತ್ತಿದ್ದ ವಿನಯ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡರಾತ್ರಿ ವಿನಯ್ ಕೊನೆಯುಸಿರೆಳೆದಿದ್ದಾರೆ. ಖೋ ಖೋ ಆಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ವಿನಯ್ ಅತ್ಯುತ್ತಮ ಆಟಗಾರ ಎನಿಸಿಕೊಂಡಿದ್ದರು.

ಕಳೆದ ಒಂದು ವಾರದಿಂದ ವಿನಯ್ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗೆಂದು ವಿನಯ್ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜ್ವರ ತೀವ್ರವಾಗಿದ್ದು ಆಗಸ್ಟ್ 8ರಂದು ತಡರಾತ್ರಿ ವಿನಯ್ ವಿಧಿವಶವಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತಿಭಾವಂತ ಖೋ ಖೋ ಆಟಗಾರನಾಗಿದ್ದ ವಿನಯ್ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಖೋ ಖೋ ತಂಡದಲ್ಲಿ ಆಡುವ ಮೂಲಕ ಮಿಂಚಿದ್ದರು. ಈ ಕ್ರೀಡೆಯಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದರು. ವಿನಯ್ ಅವರ ಈ ಸಾಧನೆಗೆ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೂಡ ನೀಡಿತ್ತು. ಆದರೆ ಇದೀಗ ಶ್ರೇಷ್ಠ ಆಟಗಾರನ ಅಗಲಿಗೆ ಕ್ರೀಡಾ ಲೋಕಕ್ಕೆ ಆಘಾತ ನೀಡಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, August 9, 2022, 7:57 [IST]
Other articles published on Aug 9, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X