ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ಗೆ ಭಾರತದ ಪ್ರಥಮ ಮಹಿಳಾ ಸ್ವಿಮ್ಮರ್ ಆಗಿ ಮಾನಾ ಪಟೇಲ್ ಆಯ್ಕೆ

Maana Patel is the first Indian woman to qualify for the Tokyo 2020 Olympics

ನವದೆಹಲಿ, ಜುಲೈ 2: ಭಾರತದ ಭರವಸೆಯ ಈಜುಪಟು ಮಾನಾ ಪಟೇಲ್ ಶುಕ್ರವಾರ ಐಡಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ 2020ಗೆ ಆಯ್ಕೆಯಾದ ಭಾರತದ ಮೊದಲ ಸ್ವಿಮ್ಮರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರಾಗಿದ್ದಾರೆ. ಯೂನಿವರ್ಸಾಲಿಟಿ ಕೋಟಾದಲ್ಲಿ ಮಾನಾ ಪಟೇಲ್ ಈ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಈ ಮೂಲಕ 21ರ ಹರೆಯದ ಮಾನಾ ಪಟೇಲ್ ಸ್ಮಿಮ್ಮರ್‌ಗಳಾದ ಸಜನ್ ಪ್ರಕಾಶ್ ಹಾಗೂ ಶ್ರೀಹರಿ ನಟರಾಜನ್ ಅವರನ್ನು ಒಳಗೊಂಡ ಭಾರತದ ಸ್ವಿಮ್ಮಿಂಗ್ ಸ್ಕ್ವಾಡ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ತಿಂಗಳ ಜುಲೈ 23ರಿಂದ ಆಗಸ್ಟ್ 8ರ ವರೆಗೆ ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ಈ ಮಹತ್ವದ ಕ್ರೀಡಾಕೂಟ ನಡೆಯಲಿದೆ.

ಮಾನಾ ಮಟೇಲ್ 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಪುರುಷ ಸ್ಪರ್ಧಿಗಳಾದ ಸುಜನ್ ಪ್ರಕಾಶ್ ಹಾಗೂ ಶ್ರೀಹರಿ ನಟರಾಜ್ ಕ್ರಮವಾಗಿ 200 ಮೀಟರ್ ಬಟರ್‌ಫ್ಲೈ ಹಾಗೂ 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಇಬ್ಬರೂ ಕಳೆದ ತಿಂಗಳು ರೋಮ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಗೊಟ್ಟಿಸಿಕೊಂಡಿದ್ದಾರೆ.

"ಇದೊಂದು ಅದ್ಭುತವಾದ ಅನುಭವ. ಒಲಿಂಪಿಕ್ಸ್ ಬಗ್ಗೆ ನಾನು ನನ್ನ ಸಹ ಈಜುಗಾರರಿಂದ ಸಾಕಷ್ಟು ಕೇಳಿದ್ದೇನೆ ಹಾಗೂ ಟೆಲಿವಿಶನ್‌ನಲ್ಲಿ ಸಾಕಷ್ಟು ಬಾರಿ ನೋಡಿದ್ದೇನೆ. ಅದರ ಚಿತ್ರಗಳನ್ನು ಕೂಡ ತುಂಬಾ ಬಾರಿ ನೋಡಿದ್ದೇನೆ. ಆದರೆ ಈ ಬಾರಿ ನಾನು ಅದರಲ್ಲಿ ಭಾಗಿಯಾಗಲಿದ್ದು ವಿಶ್ವಶ್ರೇಷ್ಠ ಸ್ಪರ್ಧಿಗಳೊಂದಿಗೆ ಪೈಪೋಟಿಗೆ ಇಳಿಯುವುವುದು ನನಗೆ ರೋಮಾಂಚನವನ್ನುಂಟು ಮಾಡುತ್ತಿದೆ" ಎಮದು ಗುಜರಾತ್ ಮೂಲದ ಮಾನಾ ಪಟೇಲ್ ಒಲಿಂಪಿಕ್ಸ್.ಕಾಮ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಇನ್ನು ಮಾನಾ ಪಟೇಲ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿರುವುದಕ್ಕೆ ಭಾರತದ ಕ್ರೀಡಾ ಸಚಿವ ಕಿರಣ್ ರಿಜಿಜು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕ್ರೀಡಾ ಸಚಿವರು "ಬ್ಯಾಕ್‌ಸ್ಟ್ರೋಮ್ ಸ್ವಿಮ್ಮರ್ ಮಾನಾ ಪಟೇಲ್ ಭಾರತ ಪ್ರಥಮ ಮಹಿಳಾ ಹಾಗೂ ಮೂರನೇ ಸ್ವಿಮ್ಮರ್ ಆಗಿ ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಅಭಿನಂದನೆಗಳು ಮಾನಾ. ಉತ್ತಮ ಸಾಧನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

Story first published: Friday, July 2, 2021, 17:01 [IST]
Other articles published on Jul 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X