ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕ್ರೀಡಾಪಟುಗಳೇ ಮತದಾರರಲ್ಲಿ ಸ್ಫೂರ್ತಿ ತುಂಬಿ : ನರೇಂದ್ರ ಮೋದಿ

Narendra Modi calls upon sports celebrities to inspire voters

ಬೆಂಗಳೂರು, ಮಾರ್ಚ್ 13 : ಕಳೆದ ಲೋಕಸಭೆ ಚುನಾವಣೆ ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ಜಯ ದೊರಕಿಸಿಕೊಡುವುದರೊಂದಿಗೆ ಇತಿಹಾಸ ನಿರ್ಮಿಸಿತ್ತು. ಜೊತೆಗೆ ಒಟ್ಟಾರೆಯಾಗಿ ಶೇ.66.38ರಷ್ಟು ಮತದಾನವಾಗಿದ್ದು ಕೂಡ ಭಾರತೀಯ ಚುನಾವಣಾ ಇತಿಹಾಸದಲ್ಲಿ ಒಂದು ದಾಖಲೆಯೆ.

ಭಾರತೀಯ ಮತದಾರರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು, ತಮ್ಮ ಅತ್ಯಮೂಲ್ಯವಾದ ಹಕ್ಕನ್ನು ಚಲಾಯಿಸಬೇಕು. ಹಾಗೆ ಮಾಡಲು ಸೆಲೆಬ್ರಿಟಿಗಳು ಜನರನ್ನು ಪ್ರೇರೇಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

ಮತದಾನದ ಅರಿವು ಮೂಡಿಸಲು ಸೆಲೆಬ್ರಿಟಿಗಳಿಗೆ ಮೋದಿ ಮನವಿ

ಮೋದಿಯವರು ತಮ್ಮ ರಾಜಕೀಯ ದ್ವೇಷಿಗಳನ್ನು ಕೂಡ ಮತ ಚಲಾವಣೆಗೆ ಜನರನ್ನು ಪ್ರೇರೇಪಿಸಬೇಕೆಂದು ಟ್ವೀಟ್ ಮಾಡಿದ್ದಾರೆ. ಅವರು ರಾಜಕೀಯ ಕ್ಷೇತ್ರದ ನಾಯಕರು ಮಾತ್ರವಲ್ಲ, ಸಿನೆಮಾ ಕ್ಷೇತ್ರ, ಕ್ರೀಡಾ ಕ್ಷೇತ್ರ, ಮಾಧ್ಯಮ ಕ್ಷೇತ್ರದ ಮಿತ್ರರಿಗೂ ಈ ಬಗ್ಗೆ ಕರೆ ನೀಡಿದ್ದು, ನಿಮ್ಮಂಥ ಪ್ರಭಾವಿಗಳು ಜನರನ್ನು ಮತಗಟ್ಟೆಗೆ ಎಳೆತರಬೇಕು ಎಂದು ಹೇಳಿದ್ದಾರೆ.

ಮತ ಚಲಾಯಿಸುವುದು ನಿಮ್ಮ ಹಕ್ಕು ಮಾತ್ರವಲ್ಲ ನಿಮ್ಮ ಕರ್ತವ್ಯ ಕೂಡ ಎಂದಿರುವ ಅವರು, ನಿಮ್ಮ ನಿಮ್ಮ ವಿಶಿಷ್ಟ ಶೈಲಿಯಲ್ಲಿ ಜನರಿಗೆ ಮತದಾನ ಮಾಡಲು ಪ್ರೇರೇಪಿಸಿ. ಸ್ವಲ್ಪ ಶಕ್ತಿ ಪ್ರಯೋಗಿಸಿ, ವೋಟಿಂಗ್ ಅನ್ನು ಸೂಪರ್ ಹಿಟ್ ಕಥೆಯನ್ನಾಗಿ ಮಾಡಿ ಎಂದು ತಮ್ಮ ಎಂದಿನ ವಿಶಿಷ್ಟ ಶೈಲಿಯಲ್ಲಿ ಮೋದಿಯವರು ಕರೆ ನೀಡಿದ್ದಾರೆ.

ಇದರಲ್ಲಿ ಧೋನಿ, ಕೊಹ್ಲಿ, ಸೆಹ್ವಾಗ್, ಅನಿಲ್, ಸಚಿನ್, ನೆಹ್ವಾಲ್, ಸಿಂಧು, ಸುಶೀಲ್, ಪೋಗಟ್ ಸಹೋದರಿಯರು, ಕಿಡಾಂಬಿ ಸೇರಿದಂತೆ ಹಲವಾರು ಕ್ರೀಡಾ ತಾರೆಯರು ಕೂಡ ಇರುವುದು ವಿಶೇಷ. ಯಾರ್ಯಾರಿಗೆ ಕರೆ ನೀಡಿದ್ದಾರೆ ನೋಡೋಣ.

ಧೋನಿ, ಕೊಹ್ಲಿ, ಶರ್ಮಾಗೂ ಮೋದಿ ಮನವಿ

ಆತ್ಮೀಯ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೆ, ನೀವೆಲ್ಲ ಕ್ರಿಕೆಟ್ ಅಂಗಳದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದೀರಿ. ಆದರೆ ಈ ಬಾರಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 130 ಕೋಟಿ ಭಾರತೀಯರನ್ನು ಪ್ರೇರೇಪಿಸಿ ಮತ್ತು ಅವರಿಂದಲೇ ಹೊಸ ಮತದಾನದ ದಾಖಲೆ ನಿರ್ಮಾಣವಾಗುವಂತೆ ಅವರಲ್ಲಿ ಸ್ಫೂರ್ತಿ ಉಕ್ಕುವಂತೆ ಮಾಡಿ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತ ಚಲಾಯಿಸಿದರೆ ಆಗ ಪ್ರಜಾಪ್ರಭುತ್ವವೇ ಗೆಲ್ಲುತ್ತದೆ.

ಅನಿಲ್, ಲಕ್ಷ್ಮಣ್, ಸೆಹ್ವಾಗ್ ಜನರನ್ನು ಬಡಿದೆಬ್ಬಿಸಿ

ಪ್ರೀತಿಯ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್, ನೀವು ಕ್ರಿಕೆಟ್ ಅಂಗಳದಲ್ಲಿ ತೋರಿರುವ ಹೀರೋಯಿಸಂ ಕೋಟ್ಯಂತರ ಅಭಿಮಾನಿಗಳನ್ನು ಪ್ರೇರೇಪಿಸಿದೆ. ಎಲ್ಲರೂ ಮತ್ತೆ ಬನ್ನಿ, ಈಗ ಕೋಟ್ಯಂತರ ಭಾರತೀಯರನ್ನು ಮತ್ತೆ ಪ್ರೇರೇಪಿಸುವಂಥ ಸಮಯ ಬಂದಿದೆ. ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಬೇಕು. ಭಾರೀ ಸಂಖ್ಯೆಯಲ್ಲಿ ಯುವಕ, ಯುವತಿಯರು ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಅವರನ್ನು ಬಡಿದೆಬ್ಬಿಸಿ.

ಬಜರಂಗ್, ಶಂಕರ್, ಬಾಜಪೇಯಿ

ಆತ್ಮೀಯ ಬಜರಂಗ್ ಪೂನಿಯಾ, ಶಂಕರ್ ಮಹಾದೇವನ್, ಮನೋಜ್ ಬಾಜಪೇಯಿ ಅವರೆ, ನಿಮ್ಮಲ್ಲಿರುವ ಪ್ರತಿಭೆ ಮತ್ತು ನೈಪುಣ್ಯತೆ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದೆ ಮತ್ತು ಭಾರತ ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ನಿಮ್ಮ ದನಿಯನ್ನು ಎಲ್ಲರೂ ಗೌರವಿಸುತ್ತಾರೆ. ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ದಯವಿಟ್ಟು ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿ ಮಾಡಿ, ಜನರು ಮತ ಚಲಾಯಿಸುವಂತೆ ಪ್ರೇರೇಪಿಸಿ.

ಚುನಾವಣಾ ಕುಸ್ತಿಗೆ ಹೆಚ್ಚು ಜನ ಬರಲಿ

ಪೋಗಟ್ ಸಹೋದರಿಯರಾದ ಗೀತಾ ಪೋಗಟ್, ಬಬಿತಾ ಪೋಗಟ್, ರಿತು ಪೋಗಟ್ ಮತ್ತು ವಿನೇಶ್ ಪೋಗಟ್, ನೀವೆಲ್ಲ ಭಾರತೀಯ ಕ್ರೀಡೆಯಲ್ಲಿ ಅದ್ಭುತ ಪ್ರತಿಭೆಯ ಪ್ರದರ್ಶನ ಮಾಡಿದ್ದೀರಿ. ನಾನು ನಿಮ್ಮನ್ನೆಲ್ಲ ಕುಸ್ತಿ ಅಂಗಳದಲ್ಲಿ ನೋಡಿದ್ದೇನೆ. ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, 'ಚುನಾವಣೆಯ ಕುಸ್ತಿ'ಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಮತ ಚಲಾಯಿಸಲು ಬರುವಂತೆ ಅವರನ್ನೆಲ್ಲ ಪ್ರೇರೇಪಿಸಿ.

ಸಚಿನ್, ಲತಾ, ರಹಮಾನ್, ನಿಮ್ಮ ಮಾತು ದೇಶ ಕೇಳುತ್ತದೆ

ಯಾವಾಗ ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್, ಎಆರ್ ರಹಮಾನ್ ರಂಥ ವ್ಯಕ್ತಿಗಳು ಏನಾದರೂ ಹೇಳಿದರೆ ಇಡೀ ದೇಶವೇ ಅವರನ್ನು ಮೈಯೆಲ್ಲ ಕಿವಿಯಾಗಿ ಕೇಳುತ್ತದೆ. ನಾನು ವಿಧೇಯಕನಾಗಿ ಈ ಪ್ರಭಾವಿ ವ್ಯಕ್ತಿಗಳನ್ನು ಕೇಳಿಕೊಳ್ಳುವುದೇನೆಂದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಮತದಾನದ ಕರ್ತವ್ಯ ನಿಭಾಯಿಸುವಂತೆ ಅವರಲ್ಲಿ ಮನವಿ ಮಾಡಿಕೊಳ್ಳಿ. ಜನರ ಧ್ವನಿ ಎಲ್ಲರಿಗೂ ಕೇಳಬೇಕಿದ್ದರೆ ಮತದಾನ ಮಾಡುವುದು ಅತ್ಯಂತ ಅವಶ್ಯಕ.

ಶ್ರೀ, ಸಿಂಧು, ನೆಹ್ವಾಲ್ ಅವರಿಗೆ ಮೋದಿ ಮನವಿ

ಪ್ರೀತಿಯ ಶ್ರೀಕಾಂತ್ ಕಿಡಾಂಬಿ, ಪಿವಿ ಸಿಂಧು, ಸೈನಾ ನೆಹ್ವಾಲ್ ಅವರೆ, ಬ್ಯಾಡ್ಮಿಂಟನ್ ನ ಆತ್ಮವಿರುವುದು ಕೋರ್ಟ್ ನಲ್ಲಿ, ಪ್ರಜಾಪ್ರಭುತ್ವದ ಆತ್ಮವಿರುವುದು ವೋಟ್ ನಲ್ಲಿ. ನೀವು ಹೇಗೆ ದಾಖಲೆಗಳನ್ನು ಸ್ಮ್ಯಾಶ್ ಮಾಡುತ್ತೀರೋ, ದಾಖಲೆ ರೂಪದಲ್ಲಿ ಜನ ಮತದಾನ ಮಾಡುವಂತೆ ಅವರಲ್ಲಿ ಕೇಳಿಕೊಳ್ಳಿ. ಮತದಾನ ಪ್ರಮಾಣ ಹೆಚ್ಚಾಗುವಂತೆ ಜನರನ್ನು ಪ್ರೇರೇಪಿಸಿ ಮತ್ತು ಯುವ ಜನತೆಯಲ್ಲಿ ಸ್ಫೂರ್ತಿ ತುಂಬಿ.

ನೀರಜ್, ಯೋಗಿ, ಸುಶೀಲ್ ಮತ್ತೆ ದೇಶವನ್ನು ಗೆಲ್ಲಿಸಿ

ನೀರಜ್ ಚೋಪ್ರಾ (ಜಾವೇಲಿನ್ ಎಸೆತಗಾರ), ಯೋಗೇಶ್ವರ ದತ್ (ಕುಸ್ತಿಪಟು), ಸುಶೀಲ್ ಕುಮಾರ್ (ಕುಸ್ತಿಪಟು), ನಿಮ್ಮ ಬಗ್ಗೆ ನಮಗೆ, ಇಡೀ ದೇಶಕ್ಕೆ ಭಾರೀ ಅಭಿಮಾನವಿದೆ. ಅವರೆಲ್ಲ ಕ್ರೀಡೆಯಲ್ಲಿ ಭಾಗವಹಿಸಿದ್ದರಿಂದಲೇ ಭಾರತ ಗೆಲ್ಲಲು ಸಾಧ್ಯವಾಯಿತು. ನಾನು ನೀರಜ್, ಯೋಗೇಶ್ವರ ಮತ್ತು ಸುಶೀಲ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನೀವು ಜನರನ್ನು ಹೆಚ್ಚು ಮತದಾನ ಮಾಡಲು ಪ್ರೇರೇಪಿಸಿ, ಆಗ ಭಾರತ ಮತ್ತೆ ವಿಜಯಿಯಾಗುತ್ತದೆ.

Story first published: Wednesday, March 13, 2019, 11:46 [IST]
Other articles published on Mar 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X