ಅರ್ಜುನ ಪ್ರಶಸ್ತಿ ವಿಜೇತ ಈಜುಪಟು ಪ್ರಶಾಂತ ಅಮಾನತು

Posted By:
Para Swimmer Prasanta Karmakar suspended

ಬೆಂಗಳೂರು, ಮಾರ್ಚ್ 02: ಮಹಿಳಾ ಈಜುಪಟುಗಳು ಈಜಾಟವಾಡುವಾಗ ಅನುಮತಿ ಇಲ್ಲದೆ ವೀಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು ಪ್ರಶಾಂತ ಕರ್ಮಾಕರ್ ಅವರನ್ನು ಅಮಾನತುಗೊಳಿಸಲಾಗಿದೆ.

ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯು, 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಪ್ರಶಸ್ತಿ ವಜೇತ ಪ್ಯಾರಾ ಈಜುಗಾರ ಪ್ರಶಾಂತ ಕರ್ಮಾಕರ್ ಅವರನ್ನು ಮೂರು ವರ್ಷಗಳ ಅವಧಿಗೆ ಅಮಾನತು ಮಾಡಿ, ಆದೇಶ ಹೊರಡಿಸಿದೆ.

2016ರ ರಿಯೋ ಪ್ಯಾರಾಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಬಳಿಕ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕರ್ಮಾಕರ್ ಅವರು ಮಹಿಳೆಯರ ಈಜುವುದನ್ನು ವೀಡಿಯೋ ಚಿತ್ರೀಕರಣ ಮಾಡಿದ್ದನ್ನು ಅಪರಾಧ ಎಂದು ಪರಿಗಣಿಸಲಾಗಿದೆ.

2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಪಡೆದ ಕರ್ಮಾಕರ್, 2003ರ ವಿಶ್ವ ಈಜು ಚಾಂಪಿಯನ್ ಶಿಪ್ ನಲ್ಲಿ ಪದಕ ಗೆದ್ದುಕೊಂಡಿದ್ದರು. 2006, 2010 ಮತ್ತು 2014ರ ಏಷ್ಯನ್ ಗೇಮ್ಸ್‌ನಲ್ಲಿ ಸತತ ಮೂರು ಪದಕಗಳನ್ನು ಜಯಿಸಿದ್ದರು. ಇದಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ 37ಕ್ಕೂ ಅಧಿಕ ಪದಕಗಳನ್ನು ಕರ್ಮಾಕರ್ ಗೆದ್ದಿದ್ದಾರೆ.

2011ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2015ರಲ್ಲಿ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿಗೆ ಕರ್ಮಾಕರ್ ಭಾಜನರಾಗಿದ್ದಾರೆ.

Story first published: Friday, March 2, 2018, 13:01 [IST]
Other articles published on Mar 2, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ