ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚಿತ್ರಗಳಲ್ಲಿ: ದೇಶದ ಗೌರವ ಹೆಚ್ಚಿಸಿದವರ ಜೊತೆ ಮೋದಿ

By Mahesh

ನವದೆಹಲಿ, ಅ.15: ದಕ್ಷಿಣ ಕೊರಿಯಾದ ಇಂಚೋನ್‌ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸನ್ಮಾನಿಸಿದರು. ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳು ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದರು.

ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಗೌರವ ತಂದು ಕೊಟ್ಟಿರುವ ಕ್ರೀಡಾಪಟುಗಳನ್ನು ಅಭಿನಂದಿಸಿದ ಪ್ರಧಾನಿಯವರು, ರಾಜಕಾರಣಿಗಳಂತೆ ಕ್ರೀಡಾಳುಗಳು ಸಹ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡಾಪಟುಗಳ 'ಉತ್ಸಾಹ' ಮತ್ತು 'ಕ್ರೀಡಾಸ್ಫೂರ್ತಿ'ಗಳ ಒಗ್ಗೂಡುವಿಕೆಯಿಂದ ಕ್ರೀಡಾ ಕ್ಷೇತ್ರದಲ್ಲಿ ದೇಶಕ್ಕೆ ಉತ್ತಮ ಫಲಿತಾಂಶಗಳು ಲಭಿಸುತ್ತವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ದೇಶದ ವಿಜ್ಞಾನಿಗಳ 'ಮಂಗಳಯಾನ' ಯಶಸ್ಸನ್ನು ಉದಾಹರಣೆಯಾಗಿ ನೀಡಿದ ಅವರು, ಕ್ರೀಡಾಪಟುಗಳ ಇಂತಹದೇ ಸಾಧನೆಗಳು ಎಲ್ಲ ಭಾರತೀಯರಿಗೆ ಗೌರವ ಮತ್ತು ಹೆಮ್ಮೆಯನ್ನು ತಂದು ಕೊಡುತ್ತವೆ ಎಂದರು. [ಚಿನ್ನ ಗೆದ್ದ ಭಾರತದ ಕ್ರೀಡಾಳುಗಳು]

ಚಿನ್ನದ ಪದಕ ವಿಜೇತರಾದ ಯೋಗೇಶ್ವರ್ ದತ್, ಸಾನಿಯಾ ಮಿರ್ಜಾ, ಮೇರಿ ಕೋಮ್, ಕಬಡ್ಡಿ ಪುರುಷರ ಹಾಗೂ ಮಹಿಳೆಯರ ತಂಡ ಹಾಗೂ ಇನ್ನಿತರ ಅಥ್ಲೀಟ್ ಗಳು ಪ್ರಧಾನಿ ಜೊತೆ ಉಪಹಾರ ಸೇವಿಸಿ ನಂತರ ಗ್ರೂಪ್ ಫೋಟೋಗೆ ಪೋಸ್ ನೀಡಿದರು.

ಚಿನ್ನದ ಪದಕ ವಿಜೇತರಿಗೆ 20 ಲಕ್ಷ ರು ಹಾಗೂ ಬೆಳ್ಳಿ ಪದಕ ವಿಜೇತರಿಗೆ 10 ಲಕ್ಷ ರು ಹಾಗೂ ಕಂಚಿನ ಪದಕ ವಿಜೇತರಿಗೆ 6 ಲಕ್ಷ ರು ನೀಡಲಾಗಿದೆ ಎಂದು ಕ್ರೀಡಾ ಸಚಿವ ಸರ್ಬಾನಂದ ಸೋನಾವಲ್ ಹೇಳಿದ್ದಾರೆ., ಪ್ರಧಾನಿ ಜೊತೆ ಕ್ರೀಡಾಪಟುಗಳ ಚಿತ್ರ ಇಲ್ಲಿದೆ ನೋಡಿ...

ಭಾರತದ ಬಾಕ್ಸರ್ ಗಳು

ಭಾರತದ ಬಾಕ್ಸರ್ ಗಳು

ಭಾರತದ ಬಾಕ್ಸರ್ ಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಖಾತೆ ಸಚಿವ ಸರ್ಬಾನಂದ ಸೋನಾವಲ್ ಗ್ರೂಪ್ ಫೋಟೋ.ಚಿನ್ನದ ಪದಕ ಗೆದ್ದ ಮೇರಿ ಕೋಮ್ ಅವರನ್ನು ಕಾಣಬಹುದು.

ಟೆನಿಸ್ ತಂಡದ ಆಟಗಾರರು

ಟೆನಿಸ್ ತಂಡದ ಆಟಗಾರರು

ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಖಾತೆ ಸಚಿವ ಸರ್ಬಾನಂದ ಸೋನಾವಲ್ ಅವರ ಜೊತೆ ಟೆನಿಸ್ ತಂಡ

ಶೂಟರ್ಸ್ ಗಳು

ಶೂಟರ್ಸ್ ಗಳು

ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಖಾತೆ ಸಚಿವ ಸರ್ಬಾನಂದ ಸೋನಾವಲ್ ಅವರ ಜೊತೆ ಶೂಟರ್ಸ್ ಗಳು

ಕುಸ್ತಿಪಟುಗಳು

ಕುಸ್ತಿಪಟುಗಳು

ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಖಾತೆ ಸಚಿವ ಸರ್ಬಾನಂದ ಸೋನಾವಲ್ ಅವರ ಜೊತೆ ಕುಸ್ತಿಪಟುಗಳು

ಈಜುಪಟುಗಳು

ಈಜುಪಟುಗಳು

ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಖಾತೆ ಸಚಿವ ಸರ್ಬಾನಂದ ಸೋನಾವಲ್ ಅವರ ಜೊತೆ ಈಜುಪಟುಗಳು

ಮಹಿಳಾ ಕಬಡ್ಡಿ ತಂಡ

ಮಹಿಳಾ ಕಬಡ್ಡಿ ತಂಡ

ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಖಾತೆ ಸಚಿವ ಸರ್ಬಾನಂದ ಸೋನಾವಲ್ ಅವರ ಜೊತೆ ಮಮತಾ ಪೂಜಾರಿ ನೇತೃತ್ವದ ಮಹಿಳಾ ಕಬಡ್ಡಿ ತಂಡ

ಪುರುಷರ ಕಬಡ್ಡಿ ತಂಡ

ಪುರುಷರ ಕಬಡ್ಡಿ ತಂಡ

ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಖಾತೆ ಸಚಿವ ಸರ್ಬಾನಂದ ಸೋನಾವಲ್ ಅವರ ಜೊತೆ ಪುರುಷರ ಕಬಡ್ಡಿ ತಂಡ.

ರೋಯಿಂಗ್ ತಂಡ

ರೋಯಿಂಗ್ ತಂಡ

ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಖಾತೆ ಸಚಿವ ಸರ್ಬಾನಂದ ಸೋನಾವಲ್ ಅವರ ಜೊತೆ ರೋಯಿಂಗ್ ತಂಡ

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X