ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್‌ನಲ್ಲಿ ಪ್ರಣತಿ ನಾಯಕ್‌ಗೆ ಕಂಚಿನ ಪದಕ

Pranati Nayak wins bronze at Asian Artistic Gymnastic Championship

ಉಲಾನ್‌ಬತಾರ್, ಜೂನ್ 21: ಮಂಗೋಲಿಯಾದ ಉಲಾನ್‌ಬತಾರ್ ನಲ್ಲಿ ಶುಕ್ರವಾರ (ಜೂನ್ 21) ನಡೆದ ಸೀನಿಯರ್ ಏಷ್ಯನ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ನ ಮಹಿಳಾ ವಾಲ್ಟ್ ವಿಭಾಗದಲ್ಲಿ ಭಾರತದ ಪ್ರಣತಿ ನಾಯಕ್ ಕಂಚಿನ ಪದಕ ಜಯಿಸಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

6ನೇ ಸ್ಥಾನದೊಂದಿಗೆ ವಾಲ್ಟ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ಪ್ರಣತಿ, ಒಟ್ಟು 13.384 ಅಂಕಗಳನ್ನು ಕಲೆಹಾಕುವುದರೊಂದಿಗೆ ಕಂಚು ಜಯಿಸಿದರು. ಮೊದಲ ಮತ್ತು ದ್ವಿತೀಯ ಯತ್ನದಲ್ಲಿ ನಾಯಕ್, ಕ್ರಮವಾಗಿ 13.400 ಮತ್ತು 13.367 ಅಂಕ ಗಳಿಸಿದ್ದರು.

ಪಾಕ್‌ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣಕೊಟ್ಟ ಹಫೀಝ್‌!ಪಾಕ್‌ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣಕೊಟ್ಟ ಹಫೀಝ್‌!

ಇದೇ ವಿಭಾಗದ ಪ್ರಥಮ ಸ್ಥಾನ ಚಿನಾದ ಯು ಲಿನ್ಮಿನ್ ಪಾಲಾಯಿತು. ಲಿನ್ಮಿನ್ 14.350 ಅಂಕ ಸಂಪಾದಿಸಿದ್ದರು. ದ್ವಿತೀಯ ಸ್ಥಾನ ಗಳಿಸಿದ ಜಪಾನ್ ಜಿಮ್ನಾಸ್ಟ್, 13.584 ಅಂಕಗಳೊಂದಿಗೆ ಬೆಳ್ಳಿಗೆ ಕೊರಳೊಡ್ಡಿದರು. ಪ್ರಣತಿ ಅವರನ್ನು ಭಾರತ ಜಿಮ್ನಾಸ್ಟ್ ಫೆಡರೇಷನ್‌ನ ಉಪಾಧ್ಯಕ್ಷ ರಿಯಾಝ್ ಭಾತಿ ಅಭಿನಂದಿಸಿದ್ದಾರೆ.

ವಿಶ್ವಕಪ್: ತೆಂಡೂಲ್ಕರ್, ಲಾರಾ ವಿಶ್ವದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ!ವಿಶ್ವಕಪ್: ತೆಂಡೂಲ್ಕರ್, ಲಾರಾ ವಿಶ್ವದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ!

'ನಾನು ಪ್ರಣತಿಗೆ ಸುಮಾರು 16 ವರ್ಷಗಳಿಂದಲೂ ತರಬೇತಿ ನೀಡುತ್ತಿದ್ದೇನೆ. ಇದು ನನ್ನ ಪಾಲಿಗೆ ಮತ್ತು ದೇಶದ ಮಟ್ಟಿಗೂ ಹೆಮ್ಮೆಯ ವಿಚಾರವೆ. ಪದಕ ಗೆದ್ದು ಖುಷಿ ಹಂಚಿದ್ದಕ್ಕಾಗಿ ಪ್ರಣತಿಗೆ ಅಭಿನಂದನೆಗಳು' ಎಂದು ಪ್ರಣತಿಯ ಕೋಚ್ ಮಿನಾರ ಬೇಗಂ ಹರ್ಷ ವ್ಯಕ್ತಪಡಿಸಿದ್ದಾರೆ.

Story first published: Friday, June 21, 2019, 18:54 [IST]
Other articles published on Jun 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X