ಖೇಲ್ ರತ್ನ, ಅರ್ಜುನ, ದ್ರೋಣ, ಧ್ಯಾನ್ ಚಂದ್ ಪ್ರಶಸ್ತಿ ಪ್ರದಾನ

Written By: Staff

ನವದೆಹಲಿ, ಆಗಸ್ಟ್ 29 : 2017ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.

ವಿವಿಧ ಕ್ರೀಡೆಗಳಲ್ಲಿ ಸಾಧನೆಯನ್ನು ಗಮನಿಸಿ ನೀಡಲಾಗುವ ಖೇಲ್ ರತ್ನ, ಅರ್ಜುನ, ದ್ರೋಣ, ಧ್ಯಾನ್ ಚಂದ್ ಪ್ರಶಸ್ತಿಗಳನ್ನು ಇಂದು (ಆ.29) ರಾಷ್ಟ್ರಪತಿ ಭವನ ದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆಟಗಾರರಿಗೆ ನೀಡಿದರು.

ದ್ರೋಣಾಚಾರ್ಯ ಪ್ರಶಸ್ತಿಗೆ ಕಡೆಗಣನೆ, ಕನ್ನಡಿಗನಿಗೆ ಅನ್ಯಾಯ

ಇಬ್ಬರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, 7 ಮಂದಿ ಕೋಚ್ ಗಳಿಗೆ ದ್ರೋಣಾಚಾರ್ಯ ಪ್ರಶಸ್ತಿ, 17 ಮಂದಿ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಹಾಗೂ ಮೂವರಿಗೆ ಧ್ಯಾನ್ ಚಂದ್ ಪ್ರಶಸ್ತಿ ನೀಡಲಾಯಿತು.

ಸರ್ದಾರ್ ಸಿಂಗ್ ಗೆ ಖೇಲ್ ರತ್ನ

ಸರ್ದಾರ್ ಸಿಂಗ್ ಗೆ ಖೇಲ್ ರತ್ನ

ಭಾರತೀಯ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಹಾಗೂ ಪ್ಯಾರಲಂಪಿಯನ್ ದೇವೇಂದ್ರ ಝಂಝಾರಿಯಾ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದರು

ಯಾವ ಪ್ರಶಸ್ತಿ ಏನೇನು ಒಳಗೊಂಡಿರಲಿದೆ?

ಯಾವ ಪ್ರಶಸ್ತಿ ಏನೇನು ಒಳಗೊಂಡಿರಲಿದೆ?

ರಾಜೀವ್ ಗಾಂಧಿ ಖೇಲ್ ಪ್ರಶಸ್ತಿಯು ಫಲಕ, 7.5 ಲಕ್ಷ ರು ನಗದು ಹೊಂದಿರುತ್ತದೆ. ಅರ್ಜುನ, ದ್ರೋಣಾಚಾರ್ಯ ಹಾಗೂ ಧ್ಯಾನ್ ಚಂದ್ ಪ್ರಶಸ್ತಿಯು 5 ಲಕ್ಷ ರು ನಗದು ಹೊಂದಿದೆ.

ನಿತಾ ಅಂಬಾನಿಗೆ ಪ್ರಶಸ್ತಿ

ನಿತಾ ಅಂಬಾನಿಗೆ ಪ್ರಶಸ್ತಿ

ರಿಲಯನ್ಸ್ ಫೌಂಡೇಷನ್ 2017 ಯೂತ್ ಸ್ಪೋರ್ಟ್ಸ್ ರಾಷ್ಟ್ರೀಯ ಖೇಲ್ ಪ್ರೋತ್ಸಾಹ ಪ್ರಶಸ್ತಿಯನ್ನು ನಿತಾ ಅಂಬಾನಿ ಪಡೆದುಕೊಂಡರು.

ಕ್ರಿಕೆಟಿಗ ಚೇತೇಶ್ವರ ಪೂಜಾರ ಗೈರು

ಕ್ರಿಕೆಟಿಗ ಚೇತೇಶ್ವರ ಪೂಜಾರ ಗೈರು

ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಭಾರತ ತಂಡದ ಬ್ಯಾಟ್ಸ್ ಮನ್‌ ಚೇತೇಶ್ವರ್ ಪೂಜಾರ ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರಾಗಿದ್ದರು. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್‌ನಲ್ಲಿ ನಾಟಿಂಗ್ ಹ್ಯಾಮ್‌ಶೈರ್ ಪರವಾಗಿ ಆಡುತ್ತಿರುವುದರಿಂದ ಅವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ.

Story first published: Tuesday, August 29, 2017, 19:27 [IST]
Other articles published on Aug 29, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ