ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರಾಷ್ಟ್ರಪತಿಗಳಿಂದ ಕ್ರೀಡಾ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ನವದೆಹಲಿ, ಮಾರ್ಚ್ 11: ಕ್ರೀಡಾರಂಗದಲ್ಲಿ ವಿಶಿಷ್ಟ ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸೋಮವಾರ(ಮಾರ್ಚ್ 11) ದಂದು 9 ಮಂದಿ ಕ್ರೀಡಾ ಸಾಧಕರನ್ನು ಗೌರವಿಸಿದರು.

ಪರ್ವತಾರೋಹಿ ಬಚೇಂದ್ರಿ ಪಾಲ್‌ಗೆ ಭಾರತ ಸರ್ಕಾರದಿಂದ ಪದ್ಮಭೂಷಣ ಗೌರವ ಲಭಿಸಿದ್ದರೆ, ಭಾರತದ ಕ್ರಿಕೆಟಿಗ ಗೌತಮ್ ಗಂಭೀರ್, ಫುಟ್ಬಾಲ್ ಸ್ಟಾರ್ ಸುನಿಲ್ ಛೆಟ್ರಿ, ಕುಸ್ತಿಪಟು ಬಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಭಾರತದ ನಾಲ್ಕನೇ ಅತ್ಯುನ್ನತ ಗೌರವವಾದ 'ಪ್ರದ್ಮಶ್ರೀ' ಪಟ್ಟಿಯಲ್ಲಿ ಛೆಟ್ರಿ, ಗಂಭೀರ್, ಪೂನಿಯಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರ ಒಟ್ಟು 94 ಹೆಸರುಗಳು ಸೇರಿವೆ.

ಚಾಹಲ್ ಗಿಂತ ಕುಲದೀಪ್ ಎದುರಿಸುವುದು ಕಷ್ಟ : ಮ್ಯಾಥ್ಯೂ ಹೇಡನ್ ಚಾಹಲ್ ಗಿಂತ ಕುಲದೀಪ್ ಎದುರಿಸುವುದು ಕಷ್ಟ : ಮ್ಯಾಥ್ಯೂ ಹೇಡನ್

ಈ ವರ್ಷ ಪ್ರಕಟಗೊಂಡಿರುವ ಪದ್ಮಶ್ರೀ ಪಟ್ಟಿಯಲ್ಲಿ ದ್ರೋಣವಲ್ಲಿ ಹಾರಿಕಾ (ಚೆಸ್), ಶರತ್ ಕಮಲ್ (ಟೇಬಲ್ ಟೆನ್ನಿಸ್), ಬೊಂಬಾಯ್ಲಾ ದೇವಿ ಲೈಶ್ರಾಮ್ (ಬಿಲ್ಲುಗಾರಿಕೆ), ಅಜಯ್ ಠಾಕೂರ್ (ಕಬಡ್ಡಿ) ಮತ್ತು ಪ್ರಶಾಂತಿ ಸಿಂಗ್ (ಬಾಸ್ಕೆಟ್ ಬಾಲ್) ಹೆಸರುಗಳಿದ್ದು, ಈ ಸಾಧಕರು ಗೌರವಕ್ಕೆ ಪಾತ್ರರಾಗಿದ್ದಾರೆ.

70ನೇ ಗಣರಾಜ್ಯೋತ್ಸವ ಮುನ್ನಾದಿನ ಕೇಂದ್ರ ಸರ್ಕಾರವು 2019ರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಒಟ್ಟಾರೆ, ವಿವಿಧ ರಂಗದ 112ಕ್ಕೂ ಅಧಿಕ ಸಾಧಕರಿಗೆ ಪದ್ಮ ಪ್ರಶಸ್ತಿಗಳು ಲಭಿಸಿವೆ. 4 ಮಂದಿ ಸಾಧಕರಿಗೆ ಪದ್ಮ ವಿಭೂಷಣ ಹಾಗೂ 14 ಮಂದಿಗೆ ಪದ್ಮಭೂಷಣ ಮತ್ತು 94 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿವೆ.

ಕಬಡ್ಡಿ ಆಟಗಾರ ಅಜಯ್ ಠಾಕೂರ್

ಟೀಂ ಇಂಡಿಯಾದ ನಾಯಕ, ವೃತ್ತಿಪರ ಕಬಡ್ಡಿ ಆಟಗಾರ ಅಜಯ್ ಠಾಕೂರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ ರಾಷ್ಟ್ರಪತಿ ಕೋವಿಂದ್.

ಏಕದಿನ: ಜೊತೆಯಾಟಕ್ಕಾಗಿ ರೋಹಿತ್-ಧವನ್ ದಾಖಲೆ

ಶರತ್ ಕಮಲ್ (ಟೇಬಲ್ ಟೆನ್ನಿಸ್)

ಕಳೆದ 16 ವರ್ಷಗಳಲ್ಲಿ 60ಕ್ಕೂ ಅಧಿಕ ಅಂತಾರಾಷ್ಟ್ರೀಯ ಪದಕ ಗೆದ್ದಿರುವ ಟೇಬಲ್ ಟೆನ್ನಿಸ್ ಆಟಗಾರ ಶರತ್ ಕಮಲ್ ಅವರಿಗೆ ಪದ್ಮಶ್ರೀ ಪ್ರದಾನ.

ದ್ರೋಣವಲ್ಲಿ ಹಾರಿಕಾ (ಚೆಸ್)

ರಾಷ್ಟ್ರಪತಿ ಕೋವಿಂದ್ ಅವರಿಂದ ಹಾರಿಕಾ ದ್ರೋಣವಲ್ಲಿ ಅವರು ಮಹಿಳಾ ಚೆಸ್ ತಂಡವನ್ನು ಅನೇಕ ಟೂರ್ನಮೆಂಟ್ ಗಳಲ್ಲಿ ಸಮರ್ಥವಾಗಿ ಮುನ್ನಡೆಸಿದ್ದಾರೆ. ಹಾರಿಕಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಕುಸ್ತಿಪಟು ಬಜರಂಗ್ ಪೂನಿಯಾ

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 65 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿಗಳು.

Story first published: Monday, March 11, 2019, 17:06 [IST]
Other articles published on Mar 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X