ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜಗತ್ತನ್ನು ಚಕಿತಗೊಳಿಸಿದ ವೆಲ್ಲಿಂಗ್ಟನ್ ಸ್ಟೇಡಿಯಮ್‌ನ ಆ ಒಂದು ಫೋಟೋ!

Rugby: Image of New Zealand Fans Enjoying Sport at Wellington Stadium stuns world

ಕಳೆದ 8 ತಿಂಗಳಲ್ಲಿ ಇಡೀ ಜಗತ್ತಿನ ಜೀವನಶೈಲಿಯೇ ಬದಲಾಗಿಬಿಟ್ಟಿದೆ. ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಮಾಸ್ಕ್ ಅನಿವಾರ್ಯವಾಗಿದೆ. ಜಗತ್ತನ್ನು ಹೆಮ್ಮಾರಿಯಂತೆ ಕಾಡುತ್ತಿರುವ ಕೊರೊನಾ ವೈರಸ್ ಎಲ್ಲಿ ಪಕ್ಕದ ವ್ಯಕ್ತಿಯಿಂದ ತಮಗೆ ಆವರಿಸುವುದೋ ಎಂಬ ಆತಂಕದಲ್ಲಿ ಜನರಿದ್ದಾರೆ. ಆದರೆ ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ಕ್ರೀಡಾಂಗಣದಲ್ಲಿ ಆ ಆತಂಕ, ಭಯ ಯಾವುದೂ ಇರಲಿಲ್ಲ. ಅಲ್ಲಿ ಮಾಸ್ಕ್ ಇರಲಿಲ್ಲ, ಸಾಮಾಜಿಕ ಅಂತರದ ಕಟ್ಟುಪಾಡುಗಳು ಇರಲಿಲ್ಲ.

ಅದು ವೆಲ್ಲಿಂಗ್ಟನ್‌ನ ಕ್ರೀಡಾಂಗಣದಲ್ಲಿ ನಡೆದ ರಗ್ಬಿ ಪಂದ್ಯ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದ ರಗ್ಬಿ ತಂಡಗಳು ಇಲ್ಲಿ ಭಾನುವಾರ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು ವೀಕ್ಷಿಸಲು ವೆಲ್ಲಿಂಗ್ಟನ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಪ್ರೇಕ್ಷಕರು ಸೇರಿದ್ದರು. ಜಗತ್ತು ಕೊರೊನಾ ವೈರಸ್‌ನ ಆತಂಕದಲ್ಲಿದ್ದರೆ 31,000 ಜನರು ಸೇರಿದ್ದ ವೆಲ್ಲಿಂಗ್ಟನ್ ರಗ್ಬಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಕೇಕೆ, ಕರತಾಡನ ಮುಗಿಲುಮುಟ್ಟಿತ್ತು.

ಐಎಸ್‌ಎಲ್‌ಗೆ ಮುನ್ನ 7 ಆಟಗಾರರು, ಸಹ ಕೋಚ್‌ಗೆ ಕೊರೊನಾ ಪಾಸಿಟಿವ್ಐಎಸ್‌ಎಲ್‌ಗೆ ಮುನ್ನ 7 ಆಟಗಾರರು, ಸಹ ಕೋಚ್‌ಗೆ ಕೊರೊನಾ ಪಾಸಿಟಿವ್

ನ್ಯೂಜಿಲೆಂಡ್ ವಿಶ್ವದಲ್ಲಿ ಕೊರೊನಾ ವೈರಸ್‌ನಿಂದ ಮೊದಲ ರಾಷ್ಟ್ರ ಎಂದು ತನ್ನನ್ನು ಘೋಷಿಸಿಕೊಂಡಿತ್ತು. ಪುಟ್ಟ ರಾಷ್ಟ್ರದಲ್ಲಿ ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ತೆಗದುಕೊಂಡಿದ್ದ ಕಠಿಣ ಕ್ರಮಗಳು ಭಾರೀ ಯಶಸ್ವಿಯಾಗಿತ್ತು. ಕೊರೊನಾ ಭಯದಿಂದ ದೂರವಾಗುವಂತೆ ಮಾಡಿತ್ತು. ಕೊರೊನ ವೈರಸ್‌ ಜಗತ್ತನ್ನು ಆವರಿಸಿದ ನಂತರ ಕ್ರೀಡಾಕೂಟವೊಂದಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರು ಸೇರಿದ್ದು ಇದೇ ಮೊದಲು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಪಂದ್ಯದ ಪ್ರೇಕ್ಷಕರ ಗ್ಯಾಲರಿಯಿಂದ ತೆಗೆದ ಫೋಟೋ ವಿಶ್ವಮಟ್ಟದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ.

ಫ್ರೆಂಚ್ ಓಪನ್ ಫೈನಲ್: ಜೋಕೊವಿಕ್ ಮಣಿಸಿ ರೋಜರ್ ಫೆಡರರ್‌ಗೆ ಸಮನಾದ ರಫೆಲ್ ನಡಾಲ್ಫ್ರೆಂಚ್ ಓಪನ್ ಫೈನಲ್: ಜೋಕೊವಿಕ್ ಮಣಿಸಿ ರೋಜರ್ ಫೆಡರರ್‌ಗೆ ಸಮನಾದ ರಫೆಲ್ ನಡಾಲ್

ಸುದೀರ್ಘ ಕಾಲದ ಲಾಕ್‌ಡೌನ್ ಬಳಿಕ ಜಗತ್ತಿನಲ್ಲಿ ಸಾಕಷ್ಟು ಮುಂಜಾಗ್ರಥಾ ಕ್ರಮಗಳ ಮೂಲಕ ಅಂತಾರಾಷ್ಟ್ರೀಯ ಕ್ರೀಡೆಗಳಿಗೆ, ಲೀಗ್ ಕ್ರೀಡೆಗಳಿಗೆ ಚಾಲನೆಯನ್ನು ನೀಡಲಾಗಿದೆ. ಆದರೆ ಇದಕ್ಕಾಗಿ ಸಾಕಷ್ಟು ನಿರ್ಬಂಧಗಳನ್ನು ವಿಧಿಸಲಾಗಿದೆ. ಕ್ರಿಕೆಟ್, ಫೂಟ್ಬಾಲ್ ಸೇರಿದಂತೆ ಬಹುತೇಕ ಪಂದ್ಯಗಳು ಪ್ರೇಕ್ಷಕರಿಲ್ಲದೇ ಆಡಿಸಲಾಗುತ್ತಿದೆ. ಕೊರೊನಾ ವೈರಸ್‌ನ ಆತಂಕದ ಕಾರಣದಿಂದಾಗಿಯೇ ಐಪಿಎಎಲ್‌ಅನ್ನು ಯುಎಇನಲ್ಲಿ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಆಡಿಸಲಾಗುತ್ತಿದೆ.

reddit.com ಈ ಚಿತ್ರವನ್ನು ಭಾನುವಾರ ಹಂಚಿಕೊಂಡಿದ್ದು, ಇದಕ್ಕೆ "ಇದು ನಡೆದಿದ್ದು ಇಂದು, ಸಾಮಾಜಿಕ ಅಂತರದ ಅಗತ್ಯವಿಲ್ಲ. ಮಾಸ್ಕ್‌ನ ಕಟ್ಟುಪಾಡುಗಳಿಲ್ಲ" ಎಂದು ತಲೆಬರಹ ನೀಡಿತ್ತು. ಇದು ಅಮೆರಿಕಾ ಸೇರಿದಂತೆ ಬಹುತೇಕ ರಾಷ್ಟ್ರಗಳಿಗೆ ಹೊಟ್ಟೆಕಿಚ್ಚು ಪಡುವಂತೆ ಮಾಡಿದೆ.

Story first published: Tuesday, October 13, 2020, 10:10 [IST]
Other articles published on Oct 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X