ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ತಂಡದ ಅಧಿಕೃತ ಕಿಟ್ ಬಿಡುಗಡೆ

By ಪ್ರತಿನಿಧಿ

ನವದೆಹಲಿ: ಟೋಕಿಯೋ 2020 ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ 50 ದಿನಗಳು ಮಾತ್ರವೇ ಬಾಕಿ ಇದ್ದು, ಜಪಾನಿನ ಟೋಕಿಯೋದಲ್ಲಿ 2021ರ ಜುಲೈ 23 ರಿಂದ ಆಗಸ್ಟ್ 8 ರವರೆಗೆ ಆಯೋಜನೆ ಆಗಿರುವ 32ನೇ ಒಲಿಂಪಿಯಾಡ್‌ನಲ್ಲಿ ಭಾಗವಹಿಸುವ ಭಾರತೀಯ ತಂಡಕ್ಕೆ ಆಕರ್ಷಕ ಸಾಂಪ್ರದಾಯಿಕ ಮತ್ತು ಅಧಿಕೃತ ಕ್ರೀಡಾ ದಿರಿಸುಗಳನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅನಾವರಣ ಮಾಡಿದೆ.

ವಿರಾಟ್ ಕೊಹ್ಲಿ, ರವಿ ಶಾಸ್ತ್ರಿ ಮಾತುಕತೆಯ ಆಡಿಯೋ ತುಣುಕು ಲೀಕ್!

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಕಿರಣ್ ರಿಜಿಜು ಅವರು ಟೊಕಿಯೋ 2020ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತದ ತಂಡದ ಅಧಿಕೃತ ಕಿಟ್ ಅನ್ನು ಐ.ಎ.ಒ. ಅಧ್ಯಕ್ಷ ಡಾ. ನರೀಂದರ್ ಧ್ರುವ ಬಟ್ರಾ ಮತ್ತು ಮಹಾ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಸಮಕ್ಷಮದಲ್ಲಿ ಬಿಡುಗಡೆ ಮಾಡಿದರು.

ಪ್ರಮುಖ ಕ್ರೀಡಾಪಟುಗಳು ಭಾಗಿ

ಪ್ರಮುಖ ಕ್ರೀಡಾಪಟುಗಳು ಭಾಗಿ

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ರವಿ ಮಿತ್ತಲ್, ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕ ಸಂದೀಪ ಪ್ರಧಾನ್, ಭಾರತೀಯ ತಂಡದ ಶೆಫ್ ಡೇ ಮಿಶನ್ ಬಿ.ಪಿ. ಬೈಶ್ಯಾ, ಸಂಸತ್ ಸದಸ್ಯ ಮತ್ತು ಡೆಪ್ಯುಟಿ ಶೆಫ್ ಡೆ ಮಿಶನ್ ಡಾ. ಪ್ರೇಮ ಚಂದ ವರ್ಮಾ, ಕ್ರೀಡಾಳುಗಳಾದ ಭಜರಂಗ ಪುನಿಯಾ, ರವಿ ಕುಮಾರ, ದೀಪಕ್ ಪುನಿಯಾ, ಸುಮಿತ್, ಸೀಮಾ ಬಿಸ್ಲಾ ಮತ್ತು ನೀರಜ್ ಚೋಪ್ರಾ ಅವರು ಕ್ರೀಡಾ ಸಚಿವರ ನಿವಾಸದಲ್ಲಿ ನಡೆದ ಕಿಟ್ ಅನಾವರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಅಧಿಕೃತ ಶೈಲಿ ಪಾಲುದಾರ 'ರೇಮಂಡ್', ಸಮಾರಂಭದ ಕಿಟ್ ಗಳನ್ನು ಮತ್ತು ಅಧಿಕೃತ ಕ್ರೀಡಾ ಉಡುಪು ಪಾಲುದಾರ ಲಿ-ನಿಂಗ್ ಕ್ರೀಡಾ ದಿರಿಸುಗಳನ್ನು ಮತ್ತು ಟೋಕಿಯೋಗೆ ತೆರಳುವ ಕ್ರೀಡಾಳುಗಳ ಪ್ರವಾಸೀ ಹಾಗು ಆಟದ ಕಿಟ್ ಗಳನ್ನು ಪೂರೈಸುತ್ತವೆ. ಭಾರತದ ರಾಷ್ಟ್ರೀಯ ಬಣ್ಣಗಳಿಂದ ಉತ್ತೇಜನ ಪಡೆದಿರುವ ಲಿ-ನಿಂಗ್ ಅಧಿಕೃತ ಕ್ರೀಡಾ ಕಿಟ್ ಅನ್ನು ವಿನ್ಯಾಸ ಮಾಡಿದೆ. ಅದರಲ್ಲಿ ವಿಶಿಷ್ಟ ಗ್ರಾಫಿಕ್ಸ್ ಗಳನ್ನು ಅಳವಡಿಸಿಕೊಂಡಿದೆ. ಅದು ಭಾರತೀಯ ಒಲಿಂಪಿಕ್ ತಂಡದ ಹೆಮ್ಮೆ ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತದೆ. ಅಧಿಕೃತ ಕಿಟ್ ನ ವಿನ್ಯಾಸಗಳನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಸಂಸ್ಥೆಯು ವಿನ್ಯಾಸಗಾರ್ತಿ ಇದಿತ್ರಿ ಗೋಯಲ್ ಅವರ ಸಹಾಯದೊಂದಿಗೆ ರೂಪಿಸಿದೆ.

ದೇಶದ ಸಾಧನೆ ಬಗ್ಗೆ ಭರವಸೆಯಿದೆ

ದೇಶದ ಸಾಧನೆ ಬಗ್ಗೆ ಭರವಸೆಯಿದೆ

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು "ಟೋಕಿಯೋ ಒಲಿಂಪಿಕ್ಸ್ ಗೆ ಬರೇ 50 ದಿನಗಳಷ್ಟೇ ಉಳಿದಿವೆ. ಈಗ ಪ್ರತೀ ದಿನ, ಪ್ರತೀ ಸೆಕೆಂಡ್ ಕೂಡಾ ಬಹಳ ಮುಖ್ಯ. ಭಾರತೀಯ ಒಲಿಂಪಿಕ್ ತಂಡದ ಅಧಿಕೃತ ಕಿಟ್ ಅನಾವರಣ ಬಹಳ ಮುಖ್ಯ ಸಂಗತಿ. ಇದು ಇಂದು ಅನಾವರಣಗೊಳ್ಳುತ್ತಿರುವುದಕ್ಕೂ ಬಹಳ ಮಹತ್ವ ಇದೆ. ನಮ್ಮ ಕ್ರೀಡಾಳುಗಳು ಅತಿ ದೊಡ್ಡ ಕ್ರೀಡಾ ಕಾರ್ಯಕ್ರಮಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಎಂದು ಹೇಳಲು ನನಗೆ ಸಂತೋಷವಿದೆ. ನಮ್ಮ ಪ್ರಧಾನ ಮಂತ್ರಿ ಅವರು ಹೇಳಿದಂತೆ ಇಡೀ ದೇಶ ನಮ್ಮ ಕ್ರೀಡಾಳುಗಳ ಬೆನ್ನಿಗೆ ನಿಂತು ಟೋಕಿಯೋದಲ್ಲಿ ಅತ್ಯುತ್ತಮವಾದುದನ್ನು ಸಾಧಿಸಲು ಕ್ರೀಡಾಳುಗಳಿಗೆ ಉತ್ತೇಜನ ನೀಡುತ್ತದೆ. ಭಾರತೀಯ ತಂಡಕ್ಕೆ ಪ್ರತಿಯೊಬ್ಬ ಭಾರತೀಯರೂ ನಗುಮೊಗದಿಂದ ಶುಭ ಹಾರೈಸಬೇಕು ಎಂದು ಮನವಿ ಮಾಡುತೇನೆ'' ಎಂದರು.

ಅಧಿಕೃತ ಕಿಟ್ ಅನಾವರಣ ಕಾರ್ಯಕ್ರಮದಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ. ನರೀಂದರ್ ಧ್ರುವ ಬಟ್ರಾ ಅವರು ಟೊಕಿಯೋ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಪಡೆದ ಕ್ರೀಡಾಳುಗಳನ್ನು ಅಭಿನಂದಿಸಿದರು. ಭಾರತೀಯ ಕ್ರೀಡಾಳುಗಳು ಟೋಕಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅತ್ಯಂತ ಎತ್ತರದಲ್ಲಿ ಹಾರಿಸುತ್ತಾರೆ ಮತ್ತು ತಾವು ಮಿಂಚಿ ದೇಶ ಹೆಮ್ಮೆ ಪಡುವಂತೆ ಮಾಡುತ್ತಾರೆ ಎಂಬ ಬಗ್ಗೆ ತಮಗೆ ಭರವಸೆ ಇದೆ ಎಂದರು.

ಯಾವ ಯಾವ ತಂಡಗಳು ಸ್ಪರ್ಧಿಸಲಿವೆ?

ಯಾವ ಯಾವ ತಂಡಗಳು ಸ್ಪರ್ಧಿಸಲಿವೆ?

ಕಾರ್ಯಕ್ರಮದಲಿ ಧನ್ಯವಾದ ಸಮರ್ಪಣೆ ಮಾಡಿದ ಐ.ಒ.ಎ. ಮಹಾ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು, "ನಾವು ಹಲವು ಮಂದಿ ಯುವಕರು ಮತ್ತು ಅನುಭವೀ ಪ್ರತಿಭೆಗಳನ್ನು ಒಳಗೊಂಡ ಅತ್ಯುತ್ತಮ ಭಾರತೀಯ ತಂಡವನ್ನು ಕಳುಹಿಸುತ್ತಿದ್ದೇವೆ. ಕತ್ತಿವರಸೆ ಪಟು ಸಿ.ಎ. ಭವಾನಿ ದೇವಿ ಅವರು ಕ್ರೀಡಾ ಕೂಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕತ್ತಿವರಸೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಎಲ್ಲಾ ಕ್ರೀಡಾಳುಗಳು ಕಠಿಣ ತರಬೇತಿಗೆ ಒಳಗಾಗಿದ್ದಾರೆ ಮತ್ತು ಟೋಕಿಯೋ ಒಲಿಂಪಿಕ್ಸ್ ಗಾಗಿ ಪ್ರೋತ್ಸಾಹಿಸಲ್ಪಟ್ಟಿದ್ದಾರೆ ಮತ್ತು ನಮ್ಮ ಕ್ರೀಡಾಳುಗಳು ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ, ದೇಶಕ್ಕೆ ಪ್ರಶಸ್ತಿ-ಪದಕಗಳನ್ನು ತರುತ್ತಾರೆ ಎಂಬ ಬಗ್ಗೆ ತಮಗೆ ಭರವಸೆ ಇದೆ" ಎಂದವರು ಹೇಳಿದರು.

ಟೊಕಿಯೋ ಒಲಿಂಪಿಕ್ಸ್ ಗೆ ಭಾರತವು ಬಲಿಷ್ಟ ತಂಡವನ್ನು ಕಳುಹಿಸುತ್ತಿದೆ ಮತ್ತು ಇದುವರೆಗೆ ಬಾಕ್ಸಿಂಗ್, ಹಾಕಿ, ಕುಸ್ತಿ, ದೋಣಿ ಸ್ಪರ್ಧೆ, ಅಥ್ಲೆಟಿಕ್ಸ್, ಬಿಲ್ಲುಗಾರಿಕೆ, ಕುದುರೆ ಓಟ, ಕತ್ತಿವರಸೆ, ಹುಟ್ಟು ಹಾಕುವಿಕೆ, ಶೂಟಿಂಗ್ ಮತ್ತು ಟೆಬಲ್ ಟೆನ್ನಿಸ್ ಸಹಿತ 11 ಕ್ರೀಡಾ ವಿಭಾಗಗಳಲ್ಲಿ ಕ್ರೀಡಾಳುಗಳು ಅರ್ಹತೆ ಪಡೆದಿದ್ದಾರೆ. ಇನ್ನಷ್ಟು ವಿಭಾಗಗಳಿಂದ ಇನ್ನಷ್ಟು ಕ್ರೀಡಾಳುಗಳು ಅರ್ಹತೆ ಪಡೆಯುವ ನಿರೀಕ್ಷೆ ಇದೆ.

ಐನೋಕ್ಸ್, ನಿಪ್ಪಾನ್ ಪ್ರಾಯೋಜಕತ್ವ

ಐನೋಕ್ಸ್, ನಿಪ್ಪಾನ್ ಪ್ರಾಯೋಜಕತ್ವ

ಎಡೆಲ್ ವೀಸ್ ಗುಂಪಿನ ಅಧ್ಯಕ್ಷ ಮತ್ತು ಸಿ.ಇ.ಒ. ರಾಕೇಶ್ ಶಾ ಮಾತನಾಡಿ'' ಒಲಿಂಪಿಕ್ಸ್ ತಾಳ್ಮೆ. ಪ್ರಾವೀಣ್ಯ, ಧೀರ್ಘಾವಧಿ ತರಬೇತಿ, ಕಠಿಣ ದುಡಿಮೆಯನ್ನು ಪ್ರತಿನಿಧಿಸುತ್ತದೆ. ಎಡೆಲ್ ವೀಸ್ ಕೂಡಾ ಇದನ್ನು ಅನುಸರಿಸುತ್ತದೆ. ಜಗತ್ತು ಇಂದು ಅಭೂತಪೂರ್ವವಾದಂತಹ ಜಾಗತಿಕ ಸಾಂಕ್ರಾಮಿಕದ ಸವಾಲನ್ನು ಎದುರಿಸುತ್ತಿದೆ, ಟೋಕಿಯೋ ಒಲಿಂಪಿಕ್ಸ್ ನಮಗೆ ಪುನರುಜ್ಜೀವದ, ದೃಢ ನಿಷ್ಠೆಯ ಮತ್ತು ಅನುಕಂಪದ ಮೌಲ್ಯಗಳನ್ನು ಹೊಸ ರೀತಿಯಲ್ಲಿ ನೆನಪಿಸಿಕೊಡುತ್ತದೆ. ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್ ಜೊತೆಯಲ್ಲಿ ಭಾರತೀಯ ಒಲಿಂಪಿಕ್ಸ್ ಕನಸನ್ನು ಬೆಂಬಲಿಸಲು ನಾವು ಅರ್ಹತೆ ಗಳಿಸಿರುವುದಕ್ಕೆ ನಮಗೆ ಸಂತೋಷವಿದೆ ಮತ್ತು ಟೋಕಿಯೋದಲ್ಲಿ ಭಾರತೀಯ ತಂಡ ಹೊಸ ಎತ್ತರಕ್ಕೇರುವುದನ್ನು ನೋಡಲು ಕಾತರರಾಗಿದ್ದೇವೆ" ಎಂದರು.

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಐ.ಒ.ಎ.ಯ ಜೊತೆಯಲ್ಲಿ ಎಡಲ್ ವೀಸ್ ಪ್ರಮುಖ ಪ್ರಾಯೋಜಕತ್ವ ವಹಿಸಿಕೊಂಡಿದೆ. ಐನೋಕ್ಸ್ ಗುಂಪು ಮನೋರಂಜನಾ ಪಾಲುದಾರನಾಗಿದ್ದರೆ, ನಿಪ್ಪಾನ್ ಪೈಂಟ್ ಸಹ ಪ್ರಾಯೋಜಕತ್ವ ವಹಿಸಿಕೊಂಡಿದೆ. ಪ್ರಖ್ಯಾತ ಹಿನ್ನೆಲೆ ಗಾಯಕ ಮತ್ತು ಸಂಕಲನಕಾರ ಮೋಹಿತ್ ಚೌಹಾಣ ಒಲಿಂಪಿಕ್ ಹಾಡು ಪ್ರಸ್ತುತ ಪಡಿಸುವುದರೊಂದಿಗೆ ಸಂಜೆಯ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಈ ಹಾಡನ್ನು ಅತ್ಯಂತ ದೊಡ್ಡ ಕ್ರೀಡಾಕೂಟವಾದ ಟೋಕಿಯೋ 2020 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಳುಗಳಿಗೆ ಅರ್ಪಣೆ ಮಾಡಲಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Friday, June 4, 2021, 16:58 [IST]
Other articles published on Jun 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X