ಟಿಇಜಿಸಿ-ಭಾರತದ ಇ-ಕ್ರೀಡಾ ಚಾಂಪಿಯನ್‍ಶಿಪ್ 2020 ಮತ್ತೆ ಆರಂಭ

ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನಿಂದಾಗಿಜಾಗತಿಕವಾಗಿ ಹಲವಾರು ಉದ್ದಿಮೆಗಳು ವ್ಯಾಪಕವಾಗಿ ಹಾನಿಗೊಳಗಾಗಿದ್ದರೂ, ಇ-ಕ್ರೀಡಾ ಉದ್ದಿಮೆಯು ಹಿಂದೆಂದೂ ಕಾಣದರೀತಿಯಲ್ಲಿ ವರ್ಧಿಸಿತ್ತು. ಏತನ್ಮಧ್ಯೆ, ಭಾರತದ ಅತಿದೊಡ್ಡ ಇ-ಕ್ರೀಡಾ ಕಾರ್ಯಕ್ರಮಗಳ ಪೈಕಿ ಒಂದಾದ ತೈವಾನ್‍ಎಕ್ಸೆಲೆನ್ಸ್‍ಗೇ ಮಿಂಗ್‍ಕ ಪ್ (ಟಿಇಜಿಸಿ) ತನ್ನ ಏಳನೇ ಆವೃತ್ತಿಯೊಂದಿಗೆ ಹಿಂದಿರುಗಿದೆ. ಈ ಬಾರಿ, 'ಹೊಸ ಸಾಮಾನ್ಯ'ದಎಲ್ಲಾ ನಿಯಮಗಳನ್ನು ಪಾಲಿಸುವ ಒಂದು ವಿಶಿಷ್ಟ ಫಾರ್ಮಾಟ್‍ನಲ್ಲಿ; ಆದರೂ, ಅದು ಅಷ್ಟೇ ಚುರುಕಾಗಿರುವ ಭರವಸೆಯನ್ನೂ ನೀಡುತ್ತಿದೆ!]

ಈ ವರ್ಷದ ವಿನೂತನ ಫಾರ್ಮಾಟ್, ಹೊಸ ಅವತಾರದಲ್ಲಿ, ನಿಖರ ಕೌತುಕತೆಯ ಪುನರಾಗಮನವನ್ನು ನೋಡಲಿದೆ. ಅಭಿಮಾನಿಗಳ ಕಿಕ್ಕಿರಿಯುವಿಕೆ ಹಾಗು ರೆಫೆರೀಗಳ ಮೇಲುಸ್ತುವಾರಿ ಇರುವ ಕ್ರೀಡಾಂಗಣದಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಿಸುವ ಬದಲು, ಆಟಗಾರರು'ಆನ್‍ಲೈನ್ ಮಾತ್ರ' ಆವೃತ್ತಿಯಲ್ಲಿ ಪರಸ್ಪರರ ವಿರುದ್ಧ ಸೆಣೆಸಾಡಿ ದೂರದಿಂದಲೇ ಆಟದಲ್ಲಿ ಭಾಗವಹಿಸಿ ಸಂವಾದಿಸಲಿದ್ದಾರೆ.

ವಿಶ್ವದಾದ್ಯಂತ, ಸಾಮಾಜಿಕ ಅಂತರದ ಕ್ರಮಗಳು ಗ್ರಾಹಕ ಹಾಗು ವ್ಯಾಪಾರ ಚಟುವಟಿಕೆಗಳನ್ನು ಕನಿಷ್ಟಗೊಳಿಸುತ್ತಿರುವಂತಹ ಸಮಯದಲ್ಲಿ ಸಾಮಾಜಿಕ ಸಂವಾದಗಳನ್ನು ನಿರೀಕ್ಷಿಸುತ್ತಿರುವ ಮನೆಯಲ್ಲಿ ಕುಳಿತಿರುವ ಜನರಿಗೆ ಗೇಮಿಂಗ್ ಒಂದು ತೊಡಗಿಸಿಕೊಳ್ಳುವಂತಹ ಸುಪ್ರಸಿದ್ಧ ಆಯ್ಕೆಯಾಗಿದೆ. ವರದಿಗಳ ಪ್ರಕಾರ, 2020ರ ಜಾಗತಿಕಗೇಮ್ಸ್ ಮಾರುಕಟ್ಟೆಯು 159.3 ಬಿಲಿಯನ್ ಡಾಲರುಗಳ ಆದಾಯವನ್ನುಉತ್ಪತ್ತಿ ಮಾಡಿ, ವರ್ಷದಿಂದ ವರ್ಷಕ್ಕೆಆರೋಗ್ಯಕರವಾದ +9.3% ಬೆಳವಣಿಗೆಯನ್ನು ಸಾಧಿಸಿತ್ತು. ಕೋವಿಡ್-19 ಲಾಕ್‍ಡೌನ್ ಕ್ರಮಗಳ ಕಾರಣದಿಂದಾಗಿ, ಎಲ್ಲಾ ಗೇಮ್ಸ್ ವರ್ಗಗಳೂ ತೊಡಗಿಕೊಳ್ಳುವಿಕೆಗಳಲ್ಲಿ ಮತ್ತು ಆದಾಯ ಉತ್ಪತ್ತಿಯಲ್ಲಿ ಹೆಚ್ಚಳಿಕೆ ಕಂಡವು.

ಇಂತಹ ಪರಿಸ್ಥಿತಿಯಲ್ಲಿ, ಟಿಇಜಿಸಿ, ಈ ವರ್ಷದ ವರ್ಚುವಲ್(ಕಾಲ್ಪನಿಕ)ಆವೃತ್ತಿಯಲ್ಲಿ ಗೇಮಿಂಗ್ ಅಭಿಮಾನಿಗಳಿಗೆ ಅಪಾರ ಕೌತುಕತೆಯನ್ನುತರುವ ವಾಗ್ದಾನ ನೀಡುತ್ತಿದೆ. ಎಲ್ಲಾಅರ್ಹತಾ ಸುತ್ತುಗಳನ್ನೂ ಆನ್‍ಲೈನ್‍ನಲ್ಲೇ ನಡೆಸಲಿದ್ದು, ಪ್ರತಿಯೊಂದು ಅರ್ಹತಾ ಸುತ್ತಿನಲ್ಲಿಗೆದ್ದ ವಿಜೇತ ತಂಡವು ಭರ್ಜರಿ ಅಂತಿಮ ಪಂದ್ಯದಲ್ಲಿ ಸ್ಪರ್ಧಿಸಲಿದ್ದುಇದೂ ಕೂಡ ಆನ್‍ಲೈನ್‍ನಲ್ಲೇ ನಡೆಯಲಿದೆ. ಟಿಇಜಿಸಿಯ 7ನೆ ಸೀಸನ್ ಭಾರತದೆಲ್ಲೆಡೆಯಿಂದ ಆಕಾಂಕ್ಷೆಯುಳ್ಳ ಆಟಗಾರರು ನಿರ್ಗಮನ ಸುತ್ತುಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ.

ಅರ್ಹತಾಸುತ್ತಿನ ಪಂದ್ಯಗಳು ಅಕ್ಟೋಬರ್ 29ರಿಂದ ಆರಂಭವಾಗಲಿದ್ದು ನವಂಬರ್ 29ರಂದು ಅಂತ್ಯಗೊಳ್ಳುತ್ತವೆ. ಭರ್ಜರಿಅಂತಿಮ ಪಂದ್ಯವನ್ನುಡಿಸಂಬರ್ 12 ಹಾಗು 13ರಂದು ನಡೆಸಲಾಗುತ್ತದೆ.ಆಟಗಾರರು ಮೂರು ಆಟಗಳ ಕೌಂಟರ್-ಸ್ಟ್ರೈಕ್: ಗ್ಲೋಬಲ್ ಅಫೆನ್ಸಿವ್(ಸಿಎಸ್:ಜಿಒ), ಕ್ಲ್ಯಾಶ್‍ಆಫ್‍ಕ್ಲ್ಯಾನ್ಸ್(ಸಿಒಸಿ) ಮತ್ತುರೈನ್ಬೊ 6 ಸೀಜ್(ಆರ್6)ದಲ್ಲಿ ಭಾಗವಹಿಸಬಹುದಾಗಿದ್ದು, ರೂ. 10 ಲಕ್ಷಗಳ ಬೃಹತ್ ಬಹುಮಾನ ಮೊತ್ತಇದರಲ್ಲಿದೆ.ಪಂದ್ಯಗಳಿಗೆ ನೋಂದಣಿಯುಅಕ್ಟೋಬರ್ 18ರಿಂದ ಆರಂಭವಾಗಲಿದೆ.

ಈ ವರ್ಷ ಟಿಇಜಿಸಿ, ಔರಸ್, ಅಪೇಸರ್, ಅವೇರ್‍ಮೀಡಿಯಾ, ಡಿ-ಲಿಂಕ್, ಇನ್-ವಿನ್, ಎಮ್‍ಎಸ್‍ಐ, ಆಪೆÇ್ಟಮಾ, ಪ್ರಿಡೇಟರ್, ರಿಪಬ್ಲಿಕ್‍ಆಫ್‍ಗೇಮರ್ಸ್, ಸಿಲಿಕಾನ್ ಪವರ್, ಟೀಮ್‍ಗ್ರೂಪ್, ಥರ್ಮಲ್‍ಟೇಕ್, ಟ್ರ್ಯಾನ್ಸೆಂಡ್, ಎಕ್ಸ್‍ಪಿಜಿ ಮತ್ತುಝೋವೀ ಮುಂತಾದ ಕೆಲವು ಅತ್ಯುತ್ತಮ ಪ್ರಶಸ್ತಿ ವಿಜೇತತೈವಾನ್ ಬ್ರ್ಯಾಂಡುಗಳ ಬೆಂಬಲ ಪಡೆಯಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, October 26, 2020, 12:18 [IST]
Other articles published on Oct 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X