ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

3 ಚಿನ್ನ ಗೆದ್ದ ಇಶಾ ಸಿಂಗ್‌ಗೆ 2 ಕೋಟಿ ರೂ. ಬಹುಮಾನ ಘೋಷಿಸಿದ ತೆಲಂಗಾಣ ಮುಖ್ಯಮಂತ್ರಿ

Telangana Chief Minister KCR has announced a cash reward of Rs 2 crore for shooter Esha Singh
Photo Credit: twitter/Esha singh

ಜರ್ಮನಿಯಲ್ಲಿ ಇತ್ತೀಚೆಗೆ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಇಶಾ ಸಿಂಗ್ ಮೂರು ಚಿನ್ನದ ಪದಕ ಗೆದ್ದು ಗಮನ ಸೆಳೆದಿದ್ದರು. ಇಶಾ ಸಿಂಗ್ ಅವರ ಈ ಸಾಧನೆಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಎರಡು ಕೋಟಿ ರೂಪಾಯಿಯ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಈ ನಗದು ಬಹುಮಾನದ ಜೊತೆಗೆ ತೆಲಂಗಾಣ ಸರ್ಕಾರ ನಿವೇಶನವನ್ನು ನೀಡಲು ಕೂಡ ನಿರ್ಧರಿಸಿದೆ. ಬಂಜಾರ ಹಿಲ್ಸ್ ಅಥವಾ ಜುಬಿಲಿ ಹಿಲ್ಸ್‌ನಲ್ಲಿ ಇಶಾ ಸಿಂಗ್‌ಗೆ ತೆಲಂಗಾಣ ಸರ್ಕಾರ ನಿವೇಶನ ನೀಡಲಿದೆ. ಜರ್ಮನಿಯ ಸುಹ್ಲ್‌ನಲ್ಲಿನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್ ಇಶಾ ಸಿಂಗ್ ಮೂರು ಸ್ಪರ್ಧೆಗಳಲ್ಲಿ ಚಿನ್ನದ ಪದಕವನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಉಮ್ರಾನ್ ಮಲ್ಲಿಕ್‌ನನ್ನು ವಕಾರ್ ಯೂನಿಸ್‌ಗೆ ಹೋಲಿಕೆ ಮಾಡಿದ ಬ್ರೆಟ್‌ ಲೀಉಮ್ರಾನ್ ಮಲ್ಲಿಕ್‌ನನ್ನು ವಕಾರ್ ಯೂನಿಸ್‌ಗೆ ಹೋಲಿಕೆ ಮಾಡಿದ ಬ್ರೆಟ್‌ ಲೀ

ಇನ್ನು ಇಶಾ ಸಿಂಗ್ ಅವರಲ್ಲದೆ ಟರ್ಕಿಯಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ನಿಖತ್ ಜರೀನ್ ಅವರಿಗೆ ಕೂಡ 2 ಕೋಟಿ ಬಹುಮಾನವನ್ನು ತೆಲಣಗಾಣ ಸರ್ಕಾರ ಘೋಷಣೆ ಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.

17ರ ಹರೆಯದ ಇಶಾ ಸಿಂಗ್ ಮಿಶ್ರ ತಂಡ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ಜೊತೆಗೆ ಚಿನ್ನದ ಪದಕ ಗೆದ್ದಿದ್ದರೆ, ಮಹಿಳಾ 10.ಮೀ ಏರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಮನು ಭಾಕರ್ ಜೊತೆಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಇನ್ನು ಮಹಿಳೆಯರ ಪಿಸ್ತೂಲ್ ಟೀಮ್ ವಿಭಾಗದಲ್ಲಿ ಮನು ಭಾಕರ್ ಹಾಗೂ ರಿತ್ಮಾ ಸಂಗ್ವಾನ್ ಜೊತೆಗೆ ಮೂರನೇ ಚಿನ್ನದ ಪದಕವನ್ನು ಗೆದ್ದು ಸಾಧನೆ ಮಾಡಿದ್ದಾರೆ.

IPL 2022: ವೇಗದ ಶತಕ, ಅರ್ಧಶತಕ, ಹೆಚ್ಚು ಸಿಕ್ಸ್ ಬಾರಿಸಿದ್ದು ಇವರೇ; ಚೆನ್ನೈ, ಮುಂಬೈ ಆಟಗಾರರೇ ಇಲ್ಲ!IPL 2022: ವೇಗದ ಶತಕ, ಅರ್ಧಶತಕ, ಹೆಚ್ಚು ಸಿಕ್ಸ್ ಬಾರಿಸಿದ್ದು ಇವರೇ; ಚೆನ್ನೈ, ಮುಂಬೈ ಆಟಗಾರರೇ ಇಲ್ಲ!

ಮತ್ತೊಂದೆಡೆ ಟರ್ಕಿಯಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತೀಯ ಬಾಕ್ಸರ್ ನಿಖತ್ ಜರೀನ್ 52 ಕೆಜಿ ವಿಭಾಗದಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುತಾಮಾಸ್ ವಿರುದ್ಧ ಸೆಣೆಸಾಟ ನಡೆಸಿ ಅಮೋಘ ಗೆಲುವು ಸಾಧಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು. ಚಿನ್ನದ ಪದಕಕ್ಕಾಗಿ ನಡೆದ ಈ ಹೋರಾಟದಲ್ಲಿ ಎದುರಾಳಿ ಜುಟಮಾಸ್ ಜಿಟ್‌ಪಾಂಗ್ ಅವರನ್ನು ಜರೀನ್ 5-0 ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಗೆಲುವಿನೊಂದಿಗೆ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಐದನೇ ಭಾರತೀಯ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ ನಿಖತ್ ಜರೀನ್.

ನಿಖತ್ ಜರೀನ್ ಅವರಿಗಿಂತ ಮುನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ ಭಾರತೀಯರ ಪೈಕಿ ಮೇರಿ ಕೋಮ್ ಅಗ್ರಸ್ಥಾನದಲ್ಲಿದ್ದು ಆರು ಬಾರಿ ಚಿನ್ನದ ಪದಕ ಗೆದ್ದಿದ್ದಾರೆ. ಸರಿತಾ ದೇವಿ, ಜೆನ್ನಿ ಆರ್‌ಎಲ್ ಮತ್ತು ಲೇಖಾ ಕೆಸಿ ಕೂಡ ಚಿನ್ನದ ಪದಕ ಗೆದ್ದಿರುವ ಭಾರತೀಯ ಮಹಿಳಾ ಬಾಕ್ಸರ್‌ಗಳಾಗಿದ್ದಾರೆ.

Story first published: Wednesday, June 1, 2022, 22:39 [IST]
Other articles published on Jun 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X