ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮೇವೆದರ್ ಜೇಬಿಗಿಳಿಸಿದ್ದು 1900 ಕೋಟಿ ಹಣ, 1.5ಕೆಜಿ ಚಿನ್ನದ ಬೆಲ್ಟ್!

By Sachhidananda Acharya

ಲಾಸ್ ವೆಗಾಸ್, ಆಗಸ್ಟ್ 27: ಲಾಸ್ ವೆಗಾಸ್ ನಲ್ಲಿ ನಡೆದ ಬಾಕ್ಸಿಂಗ್ ಲೋಕದ ಮಹಾ ಕದನದಲ್ಲಿ ಅಮೆರಿಕಾದ ಫ್ಲಾಯ್ಡ್ ಮೇವೆದರ್ ಗೆದ್ದಿದ್ದಾರೆ. ಜತೆಗೆ ಸತತ 50 ಪಂದ್ಯಗಳನ್ನು ಗೆದ್ದು ಬಾಕ್ಸಿಂಗ್ ರಿಂಗ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಆದರೆ ಇಷ್ಟೇ ಅಲ್ಲ. ಮೇವದರ್ ಕಂಡು ಕೇಳರಿಯದ ಬಹುಮಾನವನ್ನೂ ಜೇಬಿಗಿಳಿಸಿಕೊಂಡಿದ್ದಾರೆ.

ಬಾಕ್ಸಿಂಗಿನ ಮಹಾ ಕದನ ಗೆದ್ದು ಹೊಸ ದಾಖಲೆ ಬರೆದ ಫ್ಲಾಯ್ಡ್ ಮೇವೆದರ್ಬಾಕ್ಸಿಂಗಿನ ಮಹಾ ಕದನ ಗೆದ್ದು ಹೊಸ ದಾಖಲೆ ಬರೆದ ಫ್ಲಾಯ್ಡ್ ಮೇವೆದರ್

ಐರಿಷ್ ನ ಕಾನರ್ ಮೆಕ್ ಗ್ರೆಗರ್ ರನ್ನು ಪಂದ್ಯದ 10ನೇ ಸುತ್ತಿನಲ್ಲಿ ಸೋಲಿಸಿದ ಬಾಕ್ಸಿಂಗ್ ರಿಂಗ್ ನ ಕಿಂಗ್ ಮೇವೆದರ್ 1.5 ಕೆಜಿ ತೂಕದ ಚಿನ್ನದ ಬೆಲ್ಟ್ ತಮ್ಮದಾಗಿಸಿಕೊಂಡಿದ್ದಾರೆ.

The story behind the money belt and the prize won by Floyd Mayweather

ಸಾಮಾನ್ಯವಾಗಿ ನೀಲಿ ಪಟ್ಟಿಯ ಬೆಲ್ಟ್ ಇದ್ದರೆ ಈ ಮಹಾಕದನಕ್ಕೆ ಮಾತ್ರ ವರ್ಲ್ಡ್ ಬಾಕ್ಸಿಂಗ್ ಕೌನ್ಸಿಲ್ ವಿಶೇಷ ಬೆಲ್ಟ್ ತಯಾರಿಸಿತ್ತು. ಮೂಲಗಳ ಪ್ರಕಾರ ಈ ಬೆಲ್ಟ್ ಬರೋಬ್ಬರಿ 1.5 ಕೆಜಿ ತೂಕದ 24 ಕ್ಯಾರೆಟ್ ಚಿನ್ನವನ್ನು ಒಳಗೊಂಡಿದೆ.

ಅಷ್ಟೇ ಆಗಿದ್ದರೆ ಪರವಾಗಿಲ್ಲ ಆದರೆ ಈ ಚಿನ್ನದ ಜತೆಗೆ 3,360 ವಜ್ರಗಳು, 600 ನೀಲಮಣಿಗಳು, 160 ಪಚ್ಚೆಕಲ್ಲುಗಳು ಈ ಬೆಲ್ಟ್ ನಲ್ಲಿವೆ. ಹೀಗೆ ಐತಿಹಾಸಿಕ ಕದನದಲ್ಲಿ ಗೆದ್ದಿದ್ದಲ್ಲದೆ ಅಪರೂಪದ ಬೆಲ್ಟನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ಸ್ಪರ್ಧಿಗಳ ಹೆಸರು, ಮನಿ ಬೆಲ್ಟ್ ಹಾಗೂ WWC ಎಂದು ವಜ್ರದಲ್ಲೇ ಬರೆಯಲಾಗಿದೆ.

The story behind the money belt and the prize won by Floyd Mayweather

ಅಷ್ಟೇ ಅಲ್ಲ ಸುಮಾರು 1900 (300 ಮಿಲಿಯನ್ ಡಾಲರ್) ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದಬಹುಮಾನವನ್ನೂ ಜೇಬಿಗಿಳಿಸಿಕೊಳ್ಳಲಿದ್ದಾರೆ. ಪಂದ್ಯದಲ್ಲಿ ಮೇವೆದರ್ ಕನಿಷ್ಠ 640 ಕೋಟಿ ರೂ. ಹಾಗೂ ಮೆಕ್ ಗ್ರೆಗರ್ ಗೆ 190 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಇದರ ಜತೆಗೆ ಟಿಕೆಟ್ ಬೆಲೆಯಲ್ಲೂ ಪಾಲು ಪಡೆಯಲಿರುವುದರಿಂದ ಮೇವೆದರ್ ಅಂದಾಜು 1900 ಕೋಟಿ ರೂ ಪಡೆಯಲಿದ್ದಾರೆ.

ಸೋತರೂ ಕಾನರ್ ಮೆಕ್ ಗ್ರೆಗರ್ ಕೂಡಾ ಅಂದಾಜು ಸಾವಿರ ಕೋಟಿಯಷ್ಟು ಹಣವನ್ನು ಪಂದ್ಯದಿಂದ ಪಡೆಯಲಿದ್ದಾರೆ. ಇವತ್ತು ನಡೆದ ಬಾಕ್ಸಿಂಗ್ ಹಣಾಹಣಿ ಬಾಕ್ಸಿಂಗ್ ಲೋಕದ ಶ್ರೀಮಂತ ಸ್ಫರ್ಧೆ ಎನ್ನಲು ಇದಕ್ಕಿಂತ ಹೆಚ್ಚು ಏನು ಬೇಕು?

2015ರಲ್ಲಿ ಮ್ಯಾನಿ ಫ್ಯಾಕಿಯೋ ವಿರುದ್ಧ ಗೆದ್ದಾಗಲೂ ಇದೇ ರೀತಿಯ ಬೆಲ್ಟನ್ನು ಫ್ಲಾಯ್ಡ್ ಮೇವೆದರ್ ಪಡೆದಿದ್ದರು. ಆದರೆ ಈ ಬಾರಿಯ ಬೆಲ್ಟನ್ನು ಅದಕ್ಕಿಂತ ಸುಂದರವಾಗಿ ವಿನ್ಯಾಸ ಮಾಡಲಾಗಿದೆ. ಜತೆಗೆ ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಮೊತ್ತವನ್ನು ಮೇವೆದರ್ ಪಡೆದಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X