ಟೋಕಿಯೋ ಒಲಿಂಪಿಕ್ಸ್: ಪದಕದ ಮೇಲೆ ರೆಸ್ಲರ್‌ಗಳ ಕಣ್ಣು: ಭಾರತೀಯ ರೆಸ್ಲಿಂಗ್ ತಂಡದ ಬಲಾಬಲ

ನವದೆಹಲಿ, ಜುಲೈ 14: ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೆ ಈಗ ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿ ಉಳಿದಿದೆ. ವಿಶ್ವದ ಅತ್ಯಂತ ಪ್ರತಿಷ್ಟಿತ ಟೂರ್ನಿಯಲ್ಲಿ ಭಾಗಿಯಾಗಲು ಭಾರತೀಯ ಕ್ರೀಡಾಪಟುಗಳು ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಪ್ರತಿ ಬಾರಿಯ ಒಲಿಂಪಿಕ್ಸ್‌ನಂತೆಯೇ ಈ ಬಾರಿಯೂ ಭಾರತೀಯ ರೆಸ್ಲರ್‌ಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಈ ಬಾರಿಯ ಒಲಿಂಪಿಕ್ಸ್ ಟೂರ್ನಿಗೆ ಭಾರತೀಯ ರೆಸ್ಲಿಂಗ್ ತಂಡದ 7 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಈ ತಂಡದಲ್ಲಿರುವ ವಿನೀಶ್ ಫೋಗಟ್ ಮತ್ತು ಭಜರಂಗ್ ಪುನಿಯಾ ಬಲಿಷ್ಠ ರೆಸ್ಲರ್‌ಗಳಾಗಿ ಖ್ಯಾತರಾಗಿದ್ದಾರೆ. ಅನ್ಶು ಮಲಿಕ್ ಹಾಗೂ ಸೋನಮ್ ಮಲಿಕ್‌ರಂತಾ ಯುವ ರೆಸ್ಲರ್‌ಗಳು ಕೂಡ ಇದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದಟೋಕಿಯೋ ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದ

ಹಾಗಾದರೆ ಭಾರತವನ್ನು ಪ್ರತಿನಿಧಿಸುವ ರೆಸ್ಲರ್‌ಗಳು ಯಾರು? ಅವರ ಬಲ ಹಾಗೂ ದೌರ್ಬಲ್ಯಗಳೇನು? ಮುಂದೆ ಓದಿ..

ಭಜರಂಗ್ ಪುನಿಯಾ (65 KG)
ಸಾಮರ್ಥ್ಯ: ಸ್ಟ್ಯಾಮಿನಾ, ಶಕ್ತಿ, ದಾಳಿ
ದೌರ್ಬಲ್ಯ: ಕಾಲಿನ ರಕ್ಷಣೆ, ಆರಂಭಿಕ ಹಂತಗಳನ್ನು ಹಿನ್ನಡೆ
ಪ್ರಮುಖ ಫಲಿತಾಂಶ: ಮೂರು ಬಾರಿ ವಿಶ್ವ ಪದಕ ವಿಜೇತ, ಏಳು ಬಾರಿ ಏಷ್ಯಾದ ಪದಕ ವಿಜೇತ

ರವಿ ದಾಹಿಯಾ (57 KG)
ಸಾಮರ್ಥ್ಯ: ಪಟ್ಟುಹಿಡಿದು ದಾಳಿ ನಡೆಸುವ ಸಾಮರ್ಥ್ಯ
ದೌರ್ಬಲ್ಯ: ಆರಂಭಿಕ ಹಂತದಲ್ಲಿ ಅಂಕಗಳಿಸಿದರು ಆ ಪ್ರದರ್ಶನ ಮುಂದುವರಿಸುವಲ್ಲಿ ಎಡವುವುದು
ಪ್ರಮುಖ ಫಲಿತಾಂಶಗಳು: 2019 ವಿಶ್ವ ಕಂಚಿನ ಪದಕ, ಎರಡು ಬಾರಿ ಏಷ್ಯನ್ ಚಾಂಪಿಯನ್

ದೀಪಕ್ ಪುನಿಯಾ (86 KG)
ಸಾಮರ್ಥ್ಯ: ಹೊಂದಿಕೊಳ್ಳುವಿಕೆ, ಬಲ, ಸ್ಟ್ಯಾಮಿನಾ, ದಾಳಿ
ದೌರ್ಬಲ್ಯ: ರಕ್ಷಣೆಯಲ್ಲಿ ಹಿನ್ನಡೆ
ಪ್ರಮುಖ ಫಲಿತಾಂಶಗಳು: 2019 ವಿಶ್ವ ಬೆಳ್ಳಿ ಪದಕ, 2020 ಏಷ್ಯನ್ ಕಂಚಿನ ಪದಕ ವಿಜೇತ

ವಿನೀಶ್ ಫೋಗಟ್ (53 KG)
ಸಾಮರ್ಥ್ಯ: ಶಕ್ತಿ, ಯುದ್ಧತಂತ್ರದಲ್ಲಿ ತೀಕ್ಷ್ಣತೆ
ದೌರ್ಬಲ್ಯ: ಪ್ರತಿದಾಳಿಯಲ್ಲಿ ಅಂಕಗಳನ್ನು ಕಳೆದುಕೊಳ್ಳುವುದು
ಮುಖ ಫಲಿತಾಂಶಗಳು: 2019 ವಿಶ್ವ ಕಂಚಿನ ವಿಜೇತ, 2021ರ ಏಷ್ಯನ್ ಚಾಂಪಿಯನ್

ಸೀಮಾ ಬಿಸ್ಲಾ (50 KG)
ಸಾಮರ್ಥ್ಯ: ಪುನರಾಗಮನ ಮಾಡುವ ಸಾಮರ್ಥ್ಯ, ಶಕ್ತಿ
ದೌರ್ಬಲ್ಯ: ಬೃಹತ್ ವೇದಿಕೆಯಲ್ಲಿ ಅನುಭವದ ಕೊರತೆ, ರಕ್ಷಣೆ
ಪ್ರಮುಖ ಫಲಿತಾಂಶಗಳು: 2021ರ ಏಷ್ಯನ್ ಕಂಚಿನ ಪದಕ ವಿಜೇತ

ಅನ್ಶು ಮಲಿಕ್ (57 KG)
ಸಾಮರ್ಥ್ಯ: ಯುದ್ಧತಂತ್ರದಲ್ಲಿ ನೈಪುಣ್ಯತೆ, ಆಕ್ರಮಣಕಾರಿ ಶೈಲಿ
ದೌರ್ಬಲ್ಯ: ಅನುಭವದ ಕೊರತೆ
ಪ್ರಮುಖ ಫಲಿತಾಂಶಗಳು: 2021 ಏಷ್ಯನ್ ಚಾಂಪಿಯನ್

ಸೋನಮ್ ಮಲಿಕ್ (62 KG)
ಸಾಮರ್ಥ್ಯ: ತಂತ್ರ, ಪ್ರತಿದಾಳಿಗಳಲ್ಲಿ ಅಂಕಗಳಿಸುವ ಸಾಮರ್ಥ್ಯ
ದೌರ್ಬಲ್ಯ: ಅನುಭವದ ಕೊರತೆ
ಪ್ರಮುಖ ಫಲಿತಾಂಶಗಳು: 2021 ಏಷ್ಯನ್ ಚಾಂಪಿಯನ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, July 14, 2021, 18:44 [IST]
Other articles published on Jul 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X