ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಕೊರೊನಾವೈರಸ್ ತಡೆಗೆ ಕ್ರೀಡಾಪಟುಗಳಿಗೆ ವಿಶೇಷ ಬೆಡ್!

Tokyo olympics: Anti-sex beds provided to athletes to prevent sex in tokyo

ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರವೇ ಬಾಕಿಯಿದೆ. ಈಗಾಗಲೇ ಹಲವಾರು ದೇಶಗಳ ಕ್ರೀಡಾಪಟುಗಳು ಟೋಕಿಯೋಗೆ ಆಗಮಿಸಿದ್ದು ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಆದರೆ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟ ಹಿಂದಿನ ಟೂರ್ನಿಗಳಿಗಿಂತ ವಿಭಿನ್ನವಾಗಿರಲಿದೆ. ಅದಕ್ಕೆ ಕಾರಣ ಕೊರೊನಾವೈರಸ್. ಈ ಮಾರಕ ಸಾಂಕ್ರಾಮಿಕ ರೋಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಟೋಕಿಯೋ ಒಲಿಂಪಿಕ್ಸ್ ಆಯೋಜಕರು ಎಲ್ಲಾ ದೃಷ್ಟಿಕೋನದಿಂದಲೂ ಆಲೋಚಿಸಿ ಕ್ರಮಗಳನ್ನು ಕೈಗೊಂಡಿದ್ದಾರೆ.

ಹೌದು, ಕೊರೊನಾವೈರಸ್‌ನ ಹರಡುವಿಕೆ ತಡೆಗಟ್ಟುವುದು ಆಯೋಜಕರ ಪಾಲಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ. ಹೀಗಾಗಿ ಸಾಕಷ್ಟು ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ಒಂದು ಆಟಗಾರರ ಬೆಡ್‌ಗಳ ವ್ಯವಸ್ಥೆ. ಆಟಗಾರರು ಲೈಂಗಿಕ ಚಟುವಟಿಕೆಗಳಲ್ಲಿ ಭಾಗಿಯಾದರೆ ವೈರಸ್‌ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದು ಎಂಬ ಕಾರಣದಿಂದಾಗಿ ಬೆಡ್‌ಗಳ ವ್ಯವಸ್ಥೆಯಲ್ಲಿ ವಿಚಿತ್ರ ವಿನ್ಯಾಸಗಳನ್ನು ಮಾಡಲಾಗಿದೆ.

ಟೋಕಿಯೋ ಒಲಿಂಪಿಕ್ಸ್ ಅಥ್ಲೆಟಿಕ್ಸ್ ವಿಲೇಜ್‌ನ ಚಿತ್ರಣ ನೀಡಿದ ಶರತ್ ಕಮಲ್: ವಿಡಿಯೋಟೋಕಿಯೋ ಒಲಿಂಪಿಕ್ಸ್ ಅಥ್ಲೆಟಿಕ್ಸ್ ವಿಲೇಜ್‌ನ ಚಿತ್ರಣ ನೀಡಿದ ಶರತ್ ಕಮಲ್: ವಿಡಿಯೋ

ಕ್ರೀಡಾಪಟುಗಳು ಲೈಂಗಿಕ ಚಟುವಟಿಕೆಯಲ್ಲಿ ತೊಡಗದಂತೆ ಮಾಡಲು ಕಡಿಮೆ ಸಾಮರ್ಥ್ಯದ ಸೆಕ್ಸ್ ನಿರೋಧಕ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ರಟ್ಟಿನಿಂದ ಮಾಡಿದ ಹಾಸಿಗೆಗಳನ್ನು ಕ್ರೀಡಾಂಗಣದ ಕ್ರೀಡಾಪಟುಗಳ ಕೋಣೆಗಳಲ್ಲಿ ಇರಿಸಲಾಗಿದೆ. ಆಟಗಾರರ ನಡುವೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಹಾಸಿಗೆ ಗರಿಷ್ಠ 200 ಕೆಜಿ ತೂಕವನ್ನು ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಸಂಘಟಕರು ತಮ್ಮ ಹೇಳಿಕೆಯಲ್ಲಿ ಈ ಮೊದಲೇ ತಿಳಿಸಿದ್ದರು.

ಇನ್ನು ಆಯೋಜಕರ ಈ ಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳನ್ನು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕೆಲ ಕ್ರೀಡಾಪಟುಗಳು ಬೆಡ್‌ಗಳ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಆಯೋಜಕರ ಈ ಕ್ರಮದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ಈ ನಿರ್ಧಾರಕ್ಕೆ ಟೀಕಿಸಿದ್ದಾರೆ.

ಕೊರೊನಾವೈರಸ್‌ನ ತಡೆಯುವ ದೃಷ್ಟಿಯಿಂದ ಟೋಕಿಯೋ ಒಲಿಂಪಿಕ್ಸ್ ಆಯೋಜಕರು ಇಷ್ಟೆಲ್ಲಾ ಮುಂದಾಲೋಚನೆಗಳನ್ನು ಮಾಡಿ ಕ್ರಮಗಳನ್ನು ಕೈಗೊಂಡಿದ್ದರೂ ಕ್ರೀಡಾಗ್ರಾಮದಲ್ಲಿ ಕೊರೊನಾವೈರಸ್ ತಡೆಯಲು ಸಾಧ್ಯವಾಗಿಲ್ಲ ಎಂಬುದು ಮಾತ್ರ ಸತ್ಯ. ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೆಲವೇ ಗಂಟೆಗಳು ಬಾಕಿಯಿರುವಾಗ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ದೃಢಪಡುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ.

Story first published: Monday, July 19, 2021, 14:44 [IST]
Other articles published on Jul 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X