ಬಜೆಟ್‌ನಲ್ಲಿ ಕ್ರೀಡೆಗೆಷ್ಟು ಕೊಟ್ಟಿದ್ದಾರೆ ಅರುಣ್ ಜೇಟ್ಲಿ

Posted By:

ನವ ದೆಹಲಿ, ಫೆಬ್ರವರಿ 01: ಕುಣಿದು, ಕುಪ್ಪಳಿಸಿ ಸಂತೋಷ ಪಡುವಷ್ಟು ಅನುದಾನವನ್ನೇನೂ ಕ್ರೀಡೆಗೆ ಬಜೆಟ್‌ನಲ್ಲಿ ನೀಡಲಾಗಿಲ್ಲ. ಕ್ರೀಡಾ ಇಲಾಖೆಯೊಂದಿದೆ ಅದಕ್ಕೂ ಹಣ ಕೊಡಬೇಕು ಎಂಬ ಕಾರಣದಿಂದ ಒಂದಷ್ಟು ಅನುದಾನವನ್ನು ನೀಡಿದ್ದಾರೆ ಅಷ್ಟೆ.

ಈ ಬಾರಿ ಕ್ರೀಡಾ ಇಲಾಖೆಗೆ 2196.35 ಕೋಟಿ ಹಣ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಉತ್ತಮವೇ. ಕಳೆದ ವರ್ಷ ಕ್ರೀಡೆಗೆ ನೀಡಲಾಗಿದ್ದ ಅನುದಾನದ ಒಟ್ಟು ಮೊತ್ತ 1938.16 ಕೋಟಿ.

2196.35 ಕೋಟಿ ಅನುದಾನವನ್ನು ಭಾರತೀಯ ಕ್ರೀಡಾ ಇಲಾಖೆಯ ಹಲವು ವಿಭಾಗಗಳಿಗೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗಿದ್ದು, 302.18 ಕೋಟಿ ಅನುದಾನವನ್ನು ಅಸಿಸ್ಟೆಂಟ್ ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಷನ್‌ಗೆ ಮೀಸಲಿಡಲಾಗಿದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ವಿತರಿಸಲೆಂದು 23 ಕೋಟಿಯನ್ನು ಮೀಸಲಿಡಲಾಗಿದೆ.

Union Budget 2018 Arun Jaitley gives 2196.35 crore rupees to sports

ರಾಷ್ಟ್ರೀಯ ಕ್ರೀಡಾಪಟುಗಳ ಕಲ್ಯಾಣ ನಿಧಿಗೆ 374 ಕೋಟಿ ಹಂಚಲಾಗಿದೆ. ಖೆಲೊ ಇಂಡಿಯಾಗೆ 520.09 ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ಖೆಲೊ ಇಂಡಿಯಾಗಿ ನೀಡಿದ್ದು 350 ಕೋಟಿ ಅಷ್ಟೆ ಈ ಬಾರಿ 200 ಕೋಟಿ ಹೆಚ್ಚಿಗೆ ನೀಡಲಾಗಿದೆ.

ಜಮ್ಮು ಕಾಶ್ಮೀರ ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ 50 ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ 75 ಕೋಟಿ ನೀಡಲಾಗಿತ್ತು. ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರಕ್ಕೆ 429.56 ಕೋಟಿ ಅನುದಾನ ನೀಡಲಾಗಿದೆ. ಕಳೆದ ವರ್ಷ 495.73 ಕೋಟಿ ನೀಡಲಾಗಿತ್ತು.

Story first published: Thursday, February 1, 2018, 18:53 [IST]
Other articles published on Feb 1, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ