ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇದೆಂಥಾ ದುಸ್ಥಿತಿ: ಶೌಚಾಲಯದಲ್ಲಿ ಬೇಯಿಸಿದ ಆಹಾರ ಇಟ್ಟು ಕಬಡ್ಡಿ ಆಟಗಾರರಿಗೆ ಬಡಿಸಿದ ವಿಡಿಯೋ ವೈರಲ್

UP: Kabaddi Players Served Food Kept In Toilet In Saharanpur Stadium, Probe Ordered

ಉತ್ತರಪ್ರದೇಶದ ಸಹರಾನ್‌ಪುರ ಕ್ರೀಡಾಂಗಣದಲ್ಲಿ ಕಬಡ್ಡಿ ಆಟಗಾರರಿಗಾಗಿ ಬೇಯಿಸಿದ ಅನ್ನವನ್ನು ತುಂಬಿದ ದೊಡ್ಡ ತಟ್ಟೆಯನ್ನು ಶೌಚಾಲಯ ಕಟ್ಟಡದ ನೆಲದ ಮೇಲೆ ಇಡಲಾಗಿದೆ ಮತ್ತು ಅಲ್ಲಿಂದಲೇ ಕಬಡ್ಡಿ ಆಟಗಾರರಿಗೆ ಅನ್ನವನ್ನು ಬಡಿಸಲಾಗಿದೆ. ಇದೀಗ ಶೌಚಾಲಯದ ನೆಲದ ಮೇಲೆ ಅಕ್ಕಿ ತಟ್ಟೆಯನ್ನು ಹಾಕಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸಹರಾನ್‌ಪುರ ಜಿಲ್ಲೆಯಲ್ಲಿ ಕಳೆದ ಶುಕ್ರವಾರ ಆರಂಭವಾದ ಮೂರು ದಿನಗಳ ರಾಜ್ಯ ಮಟ್ಟದ U-17 ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸುಮಾರು 200 ಆಟಗಾರರಿಗೆ ಬೇಯಿಸಿದ ಅನ್ನವನ್ನು ಬಡಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಜೂನಿಯರ್ ಕಬಡ್ಡಿ ಆಟಗಾರರೊಬ್ಬರು ಆರೋಪಿಸಿದ್ದಾರೆ.

ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಸಹರಾನ್‌ಪುರದ ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಅವುಗಳನ್ನು 'ಆಧಾರರಹಿತ' ಎಂದು ಹೇಳಿದ್ದಾರೆ. ಇಲ್ಲಿನ ಪಂದ್ಯಾವಳಿಯಲ್ಲಿ ಆಟಗಾರರಿಗೆ ನೀಡುವ ಆಹಾರ ಉತ್ತಮ ಗುಣಮಟ್ಟದ್ದಾಗಿದೆ ಎಂದು ಸಕ್ಸೇನಾ ಹೇಳಿದ್ದಾರೆ.

UP: Kabaddi Players Served Food Kept In Toilet In Saharanpur Stadium, Probe Ordered

ಪೂರಿ, ಅನ್ನ, ದಾಲ್ ಮತ್ತು ಸಬ್ಜಿ ಸೇರಿದಂತೆ ಆಹಾರವನ್ನು ಈಜುಕೊಳದ ಬಳಿ ಸಾಂಪ್ರದಾಯಿಕ ಇಟ್ಟಿಗೆ ಒಲೆಯಲ್ಲಿ ದೊಡ್ಡ ಪಾತ್ರೆಗಳಲ್ಲಿ ಬೇಯಿಸಲಾಗುತ್ತದೆ ಎಂದು ಜೂನಿಯರ್ ಆಟಗಾರ್ತಿ ಹೇಳಿದರು. "ಬೇಯಿಸಿದ ಅನ್ನವನ್ನು ದೊಡ್ಡ ತಟ್ಟೆಯಲ್ಲಿ ತೆಗೆದುಕೊಂಡು ಬಂದು ಅದರ ಗೇಟ್ ಬಳಿ ಇರುವ ಶೌಚಾಲಯದ ನೆಲದ ಹಾಸಿನ ಮೇಲೆ ಇರಿಸಲಾಯಿತು," ಎಂದು ಆಟಗಾರ್ತಿ ಆರೋಪಿಸಿದರು.

"ಅನ್ನದ ತಟ್ಟೆಯ ಪಕ್ಕದಲ್ಲಿ 'ಪೂರಿ'ಗಳನ್ನು ಸಹ ನೆಲದ ಮೇಲೆ ಮೇಲೆ ಇರಿಸಲಾಗಿತ್ತು. ನಂತರ ಊಟಕ್ಕೆ ಕಬಡ್ಡಿ ಆಟಗಾರರಿಗೆ ಅದೇ ಅನ್ನವನ್ನು ಬಡಿಸಲಾಯಿತು," ಎಂದು ಆಟಗಾರರೊಬ್ಬರು ಆರೋಪಿಸಿದ್ದಾರೆ.

ಈ ವಿಷಯವನ್ನು ಕೆಲವು ಆಟಗಾರರು ಕ್ರೀಡಾಂಗಣದ ಅಧಿಕಾರಿಯ ಮುಂದೆ ಪ್ರಸ್ತಾಪಿಸಿದಾಗ, ಅಧಿಕಾರಿಗಳು ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾ ಅವರಿಗೆ ಮಾಹಿತಿ ನೀಡಿದರು. ಅವರು ಅಡುಗೆ ಮಾಡುವವರಿಗೆ ಛೀಮಾರಿ ಹಾಕಿದರು. ಸ್ಥಳದ ಕೊರತೆಯಿದ್ದು, ಸ್ಟೇಡಿಯಂನ ಸ್ವಿಮ್ಮಿಂಗ್ ಪೂಲ್ ಬಳಿ ಆಹಾರವನ್ನು ಬೇಯಿಸಲಾಗಿದೆ ಎಂದು ಸಕ್ಸೇನಾ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Story first published: Tuesday, September 20, 2022, 15:36 [IST]
Other articles published on Sep 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X