ಕೊಲೆ ಕೇಸ್ : ಬ್ಲೇಡ್ ರನ್ನರ್ ಆಸ್ಕರ್ ಗೆ 5 ವರ್ಷ ಶಿಕ್ಷೆ

Posted By:

ಜೋಹಾನ್ಸ್ ಬರ್ಗ್, ಅ.21: ಪ್ರೇಮಿಗಳ ದಿನದಂದೇ ತನ್ನ ಗೆಳತಿಯನ್ನು ಕೊಂದು ಅಪರಾಧಿ ಎನಿಸಿರುವ 'ಬ್ಲೇಡ್ ರನ್ನರ್' ಒಲಿಂಪಿಕ್ ಚಿನ್ನದ ಪದಕ ವಿಜೇತ ಆಸ್ಕರ್ ಪಿಸ್ಟೋರಿಸ್ ಅವರಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿದೆ.

ಆಸ್ಕರ್ ಅವರು ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ, ಆಕಸ್ಮಿಕವಾಗಿ ನಡೆದ ಹತ್ಯಾ ಪ್ರಕರಣ, ಅದರೆ, ಇದು ಖಂಡನೀಯ ಹತ್ಯೆ .ಆಸ್ಕರ್ ಅವರಿಗೆ ಐದು ವರ್ಷ ಶಿಕ್ಷೆ ನೀಡಲಾಗಿದೆ ಎಂದು ಪ್ರಿಟೋರಿಯಾ ನ್ಯಾಯಾಲಯ ಮಹಿಳಾ ಜಡ್ಜ್ ಥೊಕೊಳಿಲೆ ಮಸಿಪಾ ಘೋಷಿಸಿದ್ದಾರೆ. ತೀರ್ಪು ಪ್ರಕಟಣೆಯ ವೇಳೆ ರೀವಾ ಸ್ಟೀನ್‌ಕಾಂಪ್‌ಳ ಸಹೋದರಿ ಕಿಮ್ ಮತ್ತು ಗಿನಾ ಮೈಯರ್ಸ್ ಸೇರಿದಂತೆ ಪಿಸ್ಟೋರಿಯಸ್ ಪೋಷಕರು ಹಾಜರಿದ್ದರು.

ಎರಡು ಕಾಲುಗಳಿಲ್ಲದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಪ್ರಿಟೋರಿಯಾದಲ್ಲಿರುವ ತನ್ನ ಮನೆಯಲ್ಲಿ ಗೆಳೆತಿ ಟಿವಿ ಸ್ಟಾರ್ ಹಾಗೂ ಎಫ್‌ಎಚ್‌ಎಂನ ಮಾಜಿ ರೂಪದರ್ಶಿ ರೀವಾ ಸ್ಟೀನ್‌ಕ್ಯಾಂಪ್ (30)ರನ್ನು ಫೆ.14ರಂದು ಗುಂಡಿಕ್ಕಿ ಕೊಲೆ ಮಾಡಿದ ಆರೋಪ ಹೊತ್ತಿದ್ದರು. ಪಿಸ್ಟೋರಿಯಸ್ ಕೊಲೆಗೈಯುವ ಮೊದಲು ರೀವಾಗೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ಬಾತ್‌ರೂಮ್‌ನಲ್ಲಿ ಯಾರೋ ಆಗಂತುಕರು ಇದ್ದಾರೆ ಎಂದು ಭಾವಿಸಿ ತಾನು ಗುಂಡು ಹಾರಿಸಿದ್ದಾಗಿ ವಿಚಾರಣೆ ವೇಳೆ ಪಿಸ್ಟೋರಿಯಸ್‌ ಹೇಳಿಕೊಂಡಿದ್ದರು. ಆದರೆ ಪ್ರಿಯತಮೆ ಜೊತೆ ವಾಗ್ವಾದದ ವೇಳೆ ಆತ ಗುಂಡು ಹಾರಿಸಿದ್ದಾಗಿ ಸರಕಾರಿ ವಕೀಲರು ವಾದಿಸಿದ್ದರು. ಈ ಬಗ್ಗೆ ವಾದ ಪ್ರತಿ ವಾದವನ್ನು ಆಲಿಸಿ ನಂತರ ಪ್ರಿಟೋರಿಯಾ ನ್ಯಾಯಾಲಯ ಮಹಿಳಾ ಜಡ್ಜ್ ಥೊಕೊಳಿಲೆ ಮಸಿಪಾ ಅವರು ಸುದೀರ್ಘವಾದ ತೀರ್ಪು ನೀಡಿದ್ದಾರೆ.

15 ವರ್ಷ ಶಿಕ್ಷೆ ಭೀತಿ ಎದುರಿಸಿದ್ದ ಆಸ್ಕರ್

15 ವರ್ಷ ಶಿಕ್ಷೆ ಭೀತಿ ಎದುರಿಸಿದ್ದ ಆಸ್ಕರ್

ದಕ್ಷಿಣ ಆಫ್ರಿಕಾದ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಟ್ರಾಕ್ ಸ್ಟಾರ್ ಬ್ಲೇಡ್ ರನ್ನರ್ ಖ್ಯಾತಿ ವಿಕಲಚೇತನ ಆಸ್ಕರ್ ಪಿಸ್ಟೋರಿಯಸ್ ಗೆಳತಿ ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುಮಾರು 15 ವರ್ಷಗಳ ಜೈಲುಶಿಕ್ಷೆ ಭೀತಿ ಎದುರಿಸಿದ್ದರು. ಆಸ್ಕರ್ ಅವರಿಗೆ 10 ವರ್ಷ ಶಿಕ್ಷೆ ನೀಡುವಂತೆ ಪ್ರತಿವಾದಿಗಳು ಕೋರಿದ್ದರು.

ಅದರೆ, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಿಂದ ಮುಕ್ತರಾಗಿದ್ದ ಆಸ್ಕರ್, ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಿಂದ ಪಾರಾಗಿದ್ದು, 5 ವರ್ಷಗಳ ಕಾಲ ಶಿಕ್ಷೆ ಪಡೆದುಕೊಂಡಿದ್ದಾರೆ.

ಗೆಳತಿ ಹತ್ಯೆ ಪ್ರಕರಣ: ತೀರ್ಪಿನಲ್ಲಿ ಏನಿದೆ?

ಗೆಳತಿ ಹತ್ಯೆ ಪ್ರಕರಣ: ತೀರ್ಪಿನಲ್ಲಿ ಏನಿದೆ?

2013ರ 'ವ್ಯಾಲಂಟೈನ್ಸ್‌ ಡೇ'ಯಂದು ಪಿಸ್ಟೋರಿಯಸ್‌ ತನ್ನ ಪ್ರಿಯತಮೆ ರೇವಾ ಸ್ಟೀನ್‌ಕ್ಯಾಂಪ್‌ ಅವರರನ್ನು ಗುಂಡಿಟ್ಟು ಕೊಂದ ಆರೋಪ ಸಾಬೀತಾಗಿದೆ. ಗೆಳತಿ ಕೊಂದು ಆಸ್ಕರ್ ಅಪರಾಧಿಯಾಗಿದ್ದಾರೆ.

* ಅದರೆ, ಇದು ನಿರ್ಲಕ್ಷ್ಯದಿಂದ ಆದ ಹತ್ಯೆ, ಉದ್ದೇಶಪೂರ್ವಕವಾದ ಕೊಲೆಯಲ್ಲ ಖಂಡನೀಯ ಹತ್ಯೆ
* ಆಗುಂತಕರ ದಾಳಿ ನಿರೀಕ್ಷೆಯಲ್ಲಿದ್ದ ಆಸ್ಕರ್ ಅವರು ಗೆಳತಿಯನ್ನೇ ಆಗುಂತಕರು ಎಂದು ತಿಳಿದು ಹಲ್ಲೆ ಮಾಡಿ ಗುಂಡಿಕ್ಕಿ ಕೊಂದಿದ್ದಾರೆ. ತಲೆ, ಕೈ, ಸೊಂಟಕ್ಕೆ ಗುಂಡು ತಗುಲಿದೆ.
* ಈ ಪ್ರಕರಣದಲ್ಲಿ ಅಪರಾಧಿಯಾಗಿರುವ ಆಸ್ಕರ್ ಅವರ ಶಿಕ್ಷೆ ಪ್ರಮಾಣ ಕುರಿತಂತೆ ವಿಚಾರಣೆ ಹಾಗೂ ತೀರ್ಪು ಅಕ್ಟೋಬರ್ 13 ರಂದು ನಡೆದಿತ್ತು.
* ಅಕ್ಟೋಬರ್ 20,21ರಂದು ಅಂತಿಮ ತೀರ್ಪು ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವುದಾಗಿ ನ್ಯಾ. ಮಸಿಪಾ ಘೋಷಿಸಿದ್ದರು.

ಪ್ರೇಮದ ಕಾಣಿಕೆಗೆ ರಕ್ತಲೇಪನ

ಪ್ರೇಮದ ಕಾಣಿಕೆಗೆ ರಕ್ತಲೇಪನ

ಸುಮಾರು ಒಂದೂವರೆ ವರ್ಷದಿಂದ ಮಾಡೆಲ್ ರೀವಾ ಸ್ಟೀನ್ ಕ್ಯಾಂಪ್ ಜೊತೆ ಆಸ್ಕರ್ ಡೇಟಿಂಗ್ ನಲ್ಲಿದ್ದರು. ಸಾಯುವುದಕ್ಕೂ ಒಂದು ವಾರದ ಹಿಂದೆ ಆಸ್ಕರ್ ನೀಡಿದ್ದ ಉಡುಗೊರೆಗಳ ಬಗ್ಗೆ ಮೆಚ್ಚುಗೆ ಸೂಸುತ್ತಾ ರೀವಾ ಟ್ವೀಟ್ ಮಾಡಿದ್ದರು. ರೀವಾ ಹಾಗೂ ಆಸ್ಕರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ಹೀಗಾಗಿ ಆಕೆಯನ್ನು ಕೊಲ್ಲುವ ಯಾವುದೇ ಉದ್ದೇಶ ಆಸ್ಕರ್ ಗೆ ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು.

ವ್ಯಾಲೆಂಟೈನ್ಸ್ ಡೇ ಸರ್ಫ್ರೈಜ್ ಗಿಫ್ಟ್ ತರಲು ಶಾಪಿಂಗ್ ಹೋಗಿದ್ದ ರೀವಾ, ಕಳ್ಳ ಹೆಜ್ಜೆ ಇಡುತ್ತಾ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಶಬ್ದವಾಗಿದ್ದನ್ನು ಕೇಳಿಸಿಕೊಂಡ ಆಸ್ಕರ್ ಹಿಂದು ಮುಂದು ನೋಡದೆ, ಕಳ್ಳರು ಮನೆಗೆ ನುಗ್ಗಿರಬಹುದು ಎಂಬ ಶಂಕೆಯಿಂದ ಆಕೆಯನ್ನು ನೋಡದೆ ಗುಂಡು ಹಾರಿಸಿದ್ದಾರೆ

ಬ್ಲೇಡ್ ರನ್ನರ್ ಎಂದೇ ಖ್ಯಾತಿ ಗಳಿಸಿರುವ ಆಸ್ಕರ್

ಬ್ಲೇಡ್ ರನ್ನರ್ ಎಂದೇ ಖ್ಯಾತಿ ಗಳಿಸಿರುವ ಆಸ್ಕರ್

ಬ್ಲೇಡ್ ರನ್ನರ್ ಎಂದೇ ಖ್ಯಾತಿ ಗಳಿಸಿರುವ ಆಸ್ಕರ್ ಲಿಯನಾರ್ಡೊ ಕಾರ್ಲ್ ಪಿಸ್ಟೋರಿಸ್ ಒಬ್ಬ ಮಾದರಿ ಕ್ರೀಡಾಪಟುವಾಗಿದ್ದಾರೆ. ಆಸ್ಕರ್ ಅವರು ಕೃತಕ ಬಲಗಾಲು ಹೊಂದಿದ್ದು, ಬ್ಲೇಡ್(double below-knee amputations) ಹಾಕಿಕೊಂಡೇ ಲಂಡನ್ ಒಲಿಂಪಿಕ್ಸ್ ನ ಭಾಗವಹಿಸಿದ್ದರು. ಅಂಗವೈಕಲ್ಯವಿದ್ದವರು ಪ್ಯಾರಾಂಲಪಿಕ್ಸ್ ನಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಮಾಮೂಲಿ.

ಆದರೆ, ಆಸ್ಕರ್ ಅವರು ಎಲ್ಲರಂತೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ ವಿಶ್ವದ ಮೊಟ್ಟ ಮೊದಲ ಅಂಗವಿಕಲ ಕ್ರೀಡಾಪಟು ಎನಿಸಿದರು. 4X 400 ರಿಲೇ ತಂಡದಲ್ಲಿ ಭಾಗವಹಿಸಿ ಸೆಮಿಫೈನಲ್, ಫೈನಲ್ ತನಕ ತಲುಪಿದ್ದರು. ಆದರೆ, ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ನಂತರ ತಮ್ಮ ಪದಕ ದಾಹವನ್ನು ಪ್ಯಾರಾಲಿಂಪಿಕ್ಸ್ ನಲ್ಲಿ ತೀರಿಸಿಕೊಂಡರು. 400 ಮೀ ದೂರವನ್ನು 46.88 ಸೆಂಕಡುಗಳಲ್ಲಿ ಮುಟ್ಟಿ ಚಿನ್ನದ ಪದಕ ಗೆದ್ದು ಅದ್ಭುತ ಸಾಧನೆ ಮಾಡಿದ್ದರು

Story first published: Tuesday, October 21, 2014, 17:08 [IST]
Other articles published on Oct 21, 2014

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ