ವೈರಲ್ ವಿಡಿಯೋ : ನಿಕ್ಕಿಗೆ ಪ್ರಪೋಸ್ ಮಾಡಿದ ಜಾನ್ ಸೀನಾ

Posted By: ರಾಜ

ಒರ್ಲಾಂಡೋ, ಏಪ್ರಿಲ್ 04: ಬಹುಕಾಲದ ಗೆಳತಿ, ಪ್ರೇಯಸಿ ರೆಸ್ಲರ್ ನಿಕ್ಕೆಬೆಲ್ಲಾರಿಗೆ ಚಾಂಪಿಯನ್ ರೆಸ್ಲರ್ ಜಾನ್ ಸೀನಾ ಅವರು ರಿಂಗ್ ನಲ್ಲೇ ಪ್ರಪೋಸ್ ಮಾಡಿದ ವಿಡಿಯೋ ಸಕತ್ ವೈರಲ್ ಆಗಿದೆ.

ರೆಸ್ಲ್ ಮೇನಿಯಾ 33ರ ಟ್ಯಾಗ್ ಟೀಮ್ ಪಂದ್ಯದಲ್ಲಿ ದಿ ಮಿಜ್ ಹಾಗೂ ಮಾರ್ಸ್‌ ಜೋಡಿಯನ್ನು ಜಾನ್ ಸೀನಾ ಹಾಗೂ ನಿಕ್ಕಿ ಬೆಲ್ಲಾ ಜೋಡಿ ಸುಲಭವಾಗಿ ಸೋಲಿಸಿತು. ನಂತರ ಸೀನಾ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡರು.

Video: WWE - John Cena proposes to Nikki Bella at Wrestlemania 33

ಒರ್ಲಾಂಡೋದದ ವಿಶ್ವ ಕ್ಯಾಂಪಿಂಗ್ ಸ್ಟೇಡಿಯಂನಲ್ಲಿ 75 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಜಾನ್ ಸೀನಾ ಅವರು ಮಂಡಿಯೂರಿ ತಮ್ಮ ಪ್ರೇಮ ನಿವೇದಿಸಿದರು. ಅಚ್ಚರಿಯಿಂದ ಸೀನಾರನ್ನು ನೋಡುತ್ತಿದ್ದ ನಿಕ್ಕಿ ಬೆಲ್ಲಾ ಅವರು ಭಾವನಾತ್ಮಕರಾಗಿ 'ಯೆಸ್' ಎಂದು ಹೇಳಿದರು. ಬಳಿಕ ಸೀನಾ ಅವರನ್ನು ಬಿಗಿದಪ್ಪಿ ಮುತ್ತಿಟ್ಟು ಸಂಭ್ರಮಿಸಿದರು.

ಸೀನಾ ಹಾಗೂ ನಿಕ್ಕಿ ನಡುವಿನ ಪ್ರೇಮ ಹೊಸ ವಿಷಯವಲ್ಲ. ಇಬ್ಬರಿಗೂ ಇತ್ತೀಚೆಗೆ ನಿಶ್ಚಿತಾರ್ಥವಾಗಿದೆ. ಆದರೆ, ಅಭಿಮಾನಿಗಳ ಸಮ್ಮುಖದಲ್ಲಿ ರಿಂಗ್ ನಲ್ಲಿ ಪ್ರಪೋಸ್ ಮಾಡುವುದು ನನ್ನ ಬಯಕೆಯಾಗಿತ್ತು ಎಂದು ಸೂಪರ್ ಸ್ಟಾರ್ ರೆಸ್ಲರ್ ಜಾನ್ ಸೀನಾ ಹೇಳಿದ್ದಾರೆ. ವಿಡಿಯೋ ನೋಡಿ:

ನಿಕ್ಕೆಗೆ ಪ್ರಪೋಸ್ ಮಾಡುವ ವಿಡಿಯೋ ಸರಿ ಸುಮಾರು 40 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. 4ಸಾವಿರಕ್ಕೂ ಅಧಿಕ ಕಾಮೆಂಟ್ ಗಳು ಬಂದಿವೆ.

ಸಟರ್ಡೇ ನೈಟ್ ಲೈವ್, ಅಮೆರಿಕನ್ ಗ್ರಿಟ್, ಇಎಸ್ ಪಿವೈ ಮುಂತಾದ ಕಾರ್ಯಕ್ರಮಗಳನ್ನು ನಿರೂಪಿಸಿ ಯಶಸ್ವಿಯಾಗಿದ್ದು, ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿರುವ ಸೀನಾ ಅವರು ಈ ಬಾರಿ ಈ ಬಾರಿ ದಿ ಅಂಡರ್ ಟೇಕರ್ ಹಾಗೂ ಆಂಡ್ರೆ ದಿ ಜೈಂಟ್ ವಿರುದ್ಧ ಸೆಣೆಸುವ ಸುಳಿವು ನೀಡಿದ್ದರು.

Story first published: Tuesday, April 4, 2017, 22:48 [IST]
Other articles published on Apr 4, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ