ಮಾರ್ಗನ್ ಶತಕ ವ್ಯರ್ಥ, ಆಸೀಸ್ ಗೆ ಜಯ ತಂದಿದ್ದ ವಾರ್ನರ್

Posted By:

ಸಿಡ್ನಿ, ಜ.16: ಭಾರತ-ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯವೇ ಪ್ರೇಕ್ಷಕರಿಗೆ ಕಿಚ್ಚು ಹಬ್ಬಿಸಿದೆ. ವಾರ್ನರ್ ಶತಕದ ನೆರವಿನಿಂದ ಇಂಗ್ಲೆಂಡ್ ತಂಡದ ಸಾಧಾರಣ ಮೊತ್ತವನ್ನು ಆಸ್ಟ್ರೇಲಿಯಾ ಸ್ವಲ್ಪ ತಿಣುಕಾಡಿ ದಾಟಿದ್ದಲ್ಲದೆ ಬೋನಸ್ ಅಂಕವನ್ನು ಗಳಿಸಿದೆ.

| ವೇಳಾಪಟ್ಟಿ ಇಲ್ಲಿದೆ

ಇಂಗ್ಲೆಂಡ್ ತಂಡ ಒಡ್ಡಿದ್ದ 235 ರನ್ ಗಳ ಗುರಿಯನ್ನು ಆಸ್ಟ್ರೇಲಿಯಾ ತಂಡ 39.5 ಓವರ್ ಗಳಲ್ಲೇ ಮುಟ್ಟಿದರೂ 7 ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಮ್ಮ ಉತ್ತಮ ಲಯವನ್ನು ಮುಂದುವರೆಸಿ 115 ಎಸೆತಗಳಲ್ಲಿ 18 ಬೌಂಡರಿಗಳುಳ್ಳ 127 ರನ್ ಚೆಚ್ಚಿದರು.

ಆದರೆ, ಮತ್ತೊಂದು ತುದಿಯಲ್ಲಿ 37 ರನ್ ಗಳಿಸಿದ ಸ್ಟೀವ್ ಸ್ಮಿತ್ ಬಿಟ್ಟರೆ ಮಿಕ್ಕವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಹೀಗಾಗಿ ಇಂಗ್ಲೆಂಡ್ ಗೆಲುವಿನ ಕನಸು ಕಾಣತೊಡಗಿತ್ತು. ಅದರೆ, ವಾರ್ನರ್ 6ನೇಯವರಾಗಿ ಔಟಾದಾಗ ತಂಡದ ಮೊತ್ತ 227 ಆಗಿತ್ತು, ಆಸೀಸ್ ಗೆ ಗೆಲುವು ಖಾತ್ರಿ ಎನಿಸಿತ್ತು.

Warner hits ton as Australia notch bonus-point win

ಇಂಗ್ಲೆಂಡ್ ಪರ 8 ಓವರ್ ಗಳಲ್ಲಿ 40 ರನ್ನಿತ್ತು 4 ವಿಕೆಟ್ ಪಡೆದು ವೋಕ್ಸ್ ಉತ್ತಮ ಪ್ರದರ್ಶನ ನೀಡಿದರು. ಜೋರ್ಡನ್, ಸ್ಪಿನ್ನರ್ ಅಲಿ ತಲಾ 1 ವಿಕೆಟ್ ಕಿತ್ತರು.

ಇಂಗ್ಲೆಂಡ್ ಇನ್ನಿಂಗ್ಸ್ : ನಾಯಕ ಇಯಾನ್ ಮಾರ್ಗನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಾಗ ಉತ್ತಮ ಮೊತ್ತ ಗಳಿಸುವ ನಿರೀಕ್ಷೆಯಿತ್ತು. ಅದರೆ, ಆರಂಭಿಕ ಆಟಗಾರ ಬೆಲ್ ಉತ್ತಮ ಫಾರ್ಮ್ ನಲ್ಲಿದ್ದರೂ ಈ ಪಂದ್ಯದಲ್ಲಿ ಶೂನ್ಯ ಸುತ್ತಿದರು, ಅಲಿ 22, ಟೇಲರ್ 0, ಭರವಸೆ ಆಟಗಾರ ರೂಟ್ 5 ರನ್ ಗಳಿಸಿ ಔಟಾಗಿದ್ದು ನಾಯಕ ಮಾರ್ಗನ್ ಮೇಲೆ ಹೊರೆ ಬಿತ್ತು.

ಅದರೆ, 136 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 121ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಆಸೀಸ್ ನೀಡಿದ 19 ಎಕ್ ಸ್ಟ್ರಾ ರನ್ ಸೇರಿಸಿ 47.5 ಓವರ್ ಗಳಲ್ಲಿ 234ಸ್ಕೋರಿಗೆ ಇಂಗ್ಲೆಂಡ್ ಆಲೌಟ್ ಆಯಿತು. ಆಸೀಸ್ ಪರ ಪ್ಯಾಕ್ ಕಮಿನ್ಸ್ 9 ಓವರ್ ಗಳಲ್ಲಿ 43 ರನ್ನಿತ್ತು 5 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಎನಿಸಿದರು.

ಮುಂದಿನ ಪಂದ್ಯ ಭಾನುವಾರ(ಜ.18) ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿದೆ.(ಪಿಟಿಐ)

Story first published: Friday, January 16, 2015, 17:22 [IST]
Other articles published on Jan 16, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ