5 ಲಕ್ಷ ಚಂದಾದಾರರಿಗಾಗಿ ಬೆತ್ತಲಾದ ಸ್ಟಾರ್ ಜೋಡಿ

Posted By: ರಾಜ

ಬೆಂಗಳೂರು, ಏಪ್ರಿಲ್ 24: ಯೂಟ್ಯೂಬಿನಲ್ಲಿ 5 ಲಕ್ಷ ಚಂದಾದಾರರಾದರೆ ನಾವು ಬೆತ್ತಲಾಗಿ ನಿಮ್ಮ ಮುಂದೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದ್ದ ಸ್ಟಾರ್ ಕುಸ್ತಿಪಟುಗಳಾದ ನಿಕ್ಕಿಬೆಲ್ಲಾ ಹಾಗೂ ಜಾನ್ ಸೀನಾ ನುಡಿದಂತೆ ನಡೆದಿದ್ದಾರೆ.

ಬಟ್ಟೆಜಾನ್ ಸೀನಾ ಹಾಗೂ ನಿಕ್ಕಿ ಬೆಲ್ಲಾ ತಾರಾ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದೆ. WWE ಅಖಾಡದಲ್ಲಿ ಇತ್ತೀಚೆಗೆ ಬಹುಕಾಲದ ಗೆಳತಿ ನಿಕ್ಕಿಗೆ ಪ್ರಪೋಸ್ ಮಾಡಿದ್ದ ಸೀನಾ ಅವರು ಕಿಚ್ಚು ಹಬ್ಬಿಸಿದ್ದರು.

WWE: John Cena, Nikki Bella shoot 'revealing' video celebrating 500,000 Youtube followers

ಯುಟ್ಯೂಬ್ ಚಾನೆಲ್ ನಲ್ಲಿ 500,000 ಚಂದಾದಾರರನ್ನು ಪಡೆದ ಖುಷಿಯಲ್ಲಿ ನಿಕ್ಕಿ ಬೆಲ್ಲಾ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಕೊಡುವುದಾಗಿ ಹೇಳಿದ್ದರು. ಅದರಂತೆ, ಇಬ್ಬರು ನಗ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಕತ್ ಟ್ರೆಂಡ್ ಆಗಿದ್ದು, ಭರ್ಜರಿ ಕಾಮೆಂಟ್ ಬರುತ್ತಲೇ ಇವೆ.

ಮೊದಲಿಗೆ ಬಟ್ಟೆ ಕಳಚಲು ಜಾನ್ ಸೀನಾ ಹಿಂದೇಟು ಹಾಕಿದ್ದರು. ಆದರೆ, ನಿಕ್ಕಿ ಒತ್ತಾಯ ಮಾಡಿ ನಿನ್ನ ದೇಹ ಸಿರಿ ತೋರಿಸು ಎಂದರು. 500 ಎಂಬ ಫಲಕ ಹಿಡಿದು ನಿಕ್ಕಿ ಎಡಗಡೆ ನಿಂತರೆ, ಸೀನಾ 000 ಹಿಡಿದು ಬಲಬದಿಯಲ್ಲಿ ನಿಂತರು.

5 ಲಕ್ಷ ಚಂದಾದಾರರನ್ನು ಹೊಂದಿದ ಖುಷಿಯಲ್ಲಿ ಸಂಭ್ರಮಾಚರಣೆ ಈ ರೀತಿಯಲ್ಲಿ ಕಂಡರು. ವಿಡಿಯೋಗಳಲ್ಲಿ ಆಯಕಟ್ಟಿನ ಭಾಗಗಳನ್ನು ಬ್ಲರ್ ಮಾಡಿ ತೋರಿಸಲಾಗಿದೆ. ಆದರೆ, ಇಬ್ಬರ ಬೋಲ್ಡ್ ನೆಸ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

Story first published: Monday, April 24, 2017, 16:05 [IST]
Other articles published on Apr 24, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ