ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ F-4 ರೇಸಿಂಗಿಗೆ ನಮ್ಮ ಬೆಂಗಳೂರಿನ ಹುಡುಗ ಯಶ್ ಎಂಟ್ರಿ

Yash Aradhya to debut in International Formula-4 South East Asia racing circuit

ಬೆಂಗಳೂರು, ಮೇ 07: ಹಲವು ಬಾರಿಯ ರಾಷ್ಟ್ರೀಯ ಗೋ ಕಾರ್ಟಿಂಗ್ ಹಾಗೂ ಫಾರ್ಮುಲಾ-4 ಚಾಂಪಿಯನ್ ನಮ್ಮ ಬೆಂಗಳೂರಿನ ಹುಡುಗ ಯಶ್ ಆರಾಧ್ಯ, ಮೇ 11 ಹಾಗೂ 12ರಂದು ಥಾಯ್ಲೆಂಡ್‍ನ ಬುರೀರಮ್‍ನಲ್ಲಿ ನಡೆಯಲಿರುವ ಎಫ್‍ಐಎ ಫಾರ್ಮುಲಾ-4 ಸೌತ್ ಈಸ್ಟ್ ಏಷ್ಯಾ ರೇಸ್‍ನಲ್ಲಿ ಪದಾರ್ಪಣೆ ಮಾಡಲು ಅಣಿಯಾಗಿದ್ದಾರೆ. ಇದರೊಂದಿಗೆ ತನ್ನ ಅಂತಾರಾಷ್ಟ್ರೀಯ ಮೋಟಾರ್ ಸ್ಫೋರ್ಟ್ಸ್ ಕ್ರೀಡಾ ಜೀವನದಲ್ಲಿ ಯಶ್ ಕೂಡ ದೊಡ್ಡ ಹೆಜ್ಜೆ ಇಡಲು ಸಿದ್ಧರಾಗಿದ್ದಾರೆ.

ಎಫ್‍ಐಎ ಫಾರ್ಮುಲಾ-4 ಸೌತ್ ಈಸ್ಟ್ ಏಷ್ಯಾದಲ್ಲಿ ಆಗ್ನೇಯ ಏಷ್ಯಾದ ಪ್ರತಿಭೆಗಳು ಸ್ಪರ್ಧೆ ಮಾಡಲಿದ್ದು, ಪ್ರತಿ ಸುತ್ತಿನಲ್ಲಿ ನಾಲ್ಕು ರೇಸ್‍ಗಳು ಇರುವಂಥ 10 ಸುತ್ತುಗಳ 40 ರೇಸ್‍ಗಳು ಮಲೇಷ್ಯಾ, ಥಾಯ್ಲೆಂಡ್, ಭಾರತ ಹಾಗೂ ಫಿಲಿಪ್ಪಿನ್ಸ್ ನಲ್ಲಿ ನಡೆಯುತ್ತವೆ.

 ಬೆಂಗಳೂರಿನ ಯಶ್- ಫಾರ್ಮುಲಾ ಜ್ಯೂ. ಸೀರಿಸ್‍ ನಲ್ಲಿ ನಂ.2 ಬೆಂಗಳೂರಿನ ಯಶ್- ಫಾರ್ಮುಲಾ ಜ್ಯೂ. ಸೀರಿಸ್‍ ನಲ್ಲಿ ನಂ.2

ಪರೀಕ್ಷೆಗಳು ಹಾಗೂ ಟೂರ್ನಿಯ ಯೋಜನೆಗೆ ಸಿದ್ಧತೆಯ ಕಾರಣದಿಂದಾಗಿ ಮೊದಲ ಎರಡು ಸುತ್ತುಗಳನ್ನು ತಪ್ಪಿಸಿಕೊಂಡಿರುವ ಯಶ್ ಆರಾಧ್ಯಗೆ 10 ಸುತ್ತುಗಳ ಚಾಂಪಿಯನ್‍ಷಿಪ್‍ನಲ್ಲಿ 8 ಸುತ್ತುಗಳಲ್ಲಿ ಗಳಿಸಿರುವ ಅಂಕಗಳು ಮಾತ್ರವೇ ಚಾಂಪಿಯನ್‍ಷಿಪ್‍ನ ಪಟ್ಟಿಗೆ ಸೇರುತ್ತದೆ.

 ಬೆಂಗಳೂರಿನ ಯುವ ರೇಸರ್ ಯಶ್ ಆರಾಧ್ಯ ಸಾಧನೆ ಬೆಂಗಳೂರಿನ ಯುವ ರೇಸರ್ ಯಶ್ ಆರಾಧ್ಯ ಸಾಧನೆ

"ಈ ಎಲ್ಲ ದೇಶಗಳಲ್ಲಿ ನಾನು ಇದೇ ಮೊದಲ ಬಾರಿಗೆ ರೇಸ್‍ನಲ್ಲಿ ಪಾಲ್ಗೊಳ್ಳುತ್ತಿದ್ದು, ಬಹಳ ಉತ್ಸುಕನಾಗಿದ್ದೇನೆ. ರೇಸ್‍ನತ್ತ ಗಮನ ನೀಡುವುದರೊಂದಿಗೆ ಸಾಧ್ಯವಾದಷ್ಟು ಬೇಗ ಟ್ರ್ಯಾಕ್‍ಗಳು ಹಾಗೂ ಕಾರ್ ಗಳಿಗೆ ನಾನು ಹೊಂದಿಕೊಳ್ಳಬೇಕಿದೆ. ಈಗಾಗಲೇ ನಾನು ಎರಡು ಸುತ್ತುಗಳ ರೇಸ್‍ಗಳನ್ನು ತಪ್ಪಿಸಿಕೊಂಡಿರುವುದರಿಂದ ಮುಂದಿನ ಎಲ್ಲ ಸುತ್ತುಗಳ ರೇಸ್‍ನಲ್ಲಿ ನನ್ನ ಶ್ರೇಷ್ಠ ನಿರ್ವಹಣೆ ತೋರಬೇಕಿದೆ. ದೇಶಕ್ಕೆ ಹೆಮ್ಮೆ ತರುವಂಥ ನಿರ್ವಹಣೆ ತೋರುವ ವಿಶ್ವಾಸ ನನ್ನಲ್ಲಿದೆ ಎಂದು ರೇಸ್ ಪದಾರ್ಪಣೆ ಬಗ್ಗೆ ಸಂಭ್ರಮದಲ್ಲಿರುವ ಯಶ್ ಹೇಳಿದ್ದಾರೆ.

ಯಶ್‍ಗೆ ಪ್ರಾಯೋಜಕರಾಗಿ ನಿಂತ ಸಂಸ್ಥೆಗಳು

ಯಶ್‍ಗೆ ಪ್ರಾಯೋಜಕರಾಗಿ ನಿಂತ ಸಂಸ್ಥೆಗಳು

ಅಕ್ವಾಗಾರ್ಡ್, ಸೈಕಲ್ ಪ್ಯೂರ್, ಭಾರತ್ ಫಾರ್ಜ್ ಮತ್ತು ಲಕ್ಷ್ಯ ಬ್ರ್ಯಾಂಡ್‍ಗಳು ಯಶ್‍ಗೆ ಪ್ರಾಯೋಜಕರಾಗಿ ನಿಂತಿವೆ. ಸೌತ್ ಈಸ್ಟ್ ಏಷ್ಯಾದಲ್ಲಿ ಗಮನಾರ್ಹ ನಿರ್ವಹಣೆ ತೋರಿ ದೇಶದ ಕೀರ್ತಿ ಪತಾಕೆ ಹಾರಿಸುವ ವಿಶ್ವಾಸದಲ್ಲಿ ಯಶ್ ಇದ್ದಾರೆ. ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಯಶ್ ಆರಾಧ್ಯ ವಿದ್ಯಾರ್ಥಿಯಾಗಿದ್ದಾಗಿನಿಂದ ರೇಸಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ಗೋ ಕಾರ್ಟಿಂಗ್ ನಿಂದ ಫಾರ್ಮುಲಾ 4 ತನಕ

ಗೋ ಕಾರ್ಟಿಂಗ್ ನಿಂದ ಫಾರ್ಮುಲಾ 4 ತನಕ

"ಗೋ ಕಾರ್ಟಿಂಗ್‍ನಲ್ಲಿ ಇವರ ಆರಂಭದ ದಿನಗಳಿಂದ ಫಾರ್ಮುಲಾ-4ನ ಅಂತಾರಾಷ್ಟ್ರೀಯ ಪದಾರ್ಪಣೆಯವರೆಗೆ ಯಶ್‍ರ ಹಂತ ಹಂತದ ಪ್ರಗತಿಯಲ್ಲಿ ನಿಖರವಾದ ಗುರಿ ಕಾಣುತ್ತಿದ್ದೇವೆ. ಲೀಗ್‍ನಲ್ಲಿ ಅಗ್ರಪಟ್ಟಕ್ಕೆ ಏರಬೇಕು ಎನ್ನುವ ತುಡಿತ ಅವರಲ್ಲಿದೆ. ಈ ಹಂತಕ್ಕೆ ಏರಬಲ್ಲ ಎಲ್ಲ ಸಾಮರ್ಥ್ಯ ಅವರಲ್ಲಿದೆ ಎಂದು ನಾವು ನಂಬಿದ್ದೇವೆ. ಆರೋಗ್ಯ ಮತ್ತು ಸಂತೃಪ್ತಿ ಜೀವನದ ಏಳ್ಗೆಗೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಯುರೇಕಾ ಫೋರ್ಬ್ಸ್ ನಂಬಿದೆ. ಯಶ್ ಅದನ್ನು ಸಾಧಿಸಿ ತೋರಿಸಿದ್ದಾರೆ ಎಂದು ಯುರೇಕಾ ಫೋರ್ಬ್ಸ್ ನ ಮುಖ್ಯ ಟ್ರಾನ್ಸ್ ಫಾರ್ಮೇಷನ್ ಅಧಿಕಾರಿ ಶಶಾಂಕ್ ಸಿನ್ಹಾ ಹೇಳಿದರು.

ಅಕ್ಬರ್ ಇಬ್ರಾಹಿಂ ಮಾರ್ಗದರ್ಶನ

ಅಕ್ಬರ್ ಇಬ್ರಾಹಿಂ ಮಾರ್ಗದರ್ಶನ

ಜೆಕೆ ಟೈರ್ಸ್ ಸಹಯೋಗದಲ್ಲಿ, ಅಕ್ಬರ್ ಇಬ್ರಾಹಿಂ ಮಾರ್ಗದರ್ಶನದಲ್ಲಿ ತನ್ನ 9ನೇ ವರ್ಷಕ್ಕೆ ಜೆಕೆ ಟೈರ್ ಎಂಎಂಎಸ್ ರೋಟಾಕ್ಸ್ ಮ್ಯಾಕ್ಸ್ ಕಾರ್ಟಿಂಗ್ ಚಾಂಪಿಯನ್‍ಷಿಪ್ ಇಂಡಿಯಾದಲ್ಲಿ ಭಾಗವಹಿಸುವ ಮೂಲಕ ಯಶ್‍ರ ಮೋಟಾರ್ ಸ್ಪೋರ್ಟ್ಸ್ ಜೀವನ ಆರಂಭವಾಗಿತ್ತು. ಆ ಟೂರ್ನಿಯ ಮೈಕ್ರೋ ವಿಭಾಗದಲ್ಲಿ ವೈಸ್ ಚಾಂಪಿಯನ್ ರೂಕಿ ಪ್ರಶಸ್ತಿ ಗೆದ್ದಿದ್ದ ಯಶ್, ಆ ಬಳಿಕ ಹಲವು ಬಾರಿ ಈ ಚಾಂಪಿಯನ್‍ಷಿಪ್‍ಅನ್ನು ಜಯಿಸಿದರು. ತನ್ನ 7 ವರ್ಷದ ಮೋಟಾರ್ ಸ್ಫೋರ್ಟ್ಸ್ ಜೀವನದಲ್ಲಿ ಯಶ್ 59 ಬಾರಿ ರೇಸ್‍ನ ಪದಕ ವೇದಿಕೆ ಏರಿದ್ದಲ್ಲದೆ, 16ನೇ ವರ್ಷದ ವೇಳೆಗೆ 13 ಬಾರಿ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಂಡಿದ್ದಾರೆ.

ಎಲ್ಲರ ಮೆಚ್ಚುಗೆ ಗಳಿಸಿರುವ ಪ್ರತಿಭಾವಂತ

ಎಲ್ಲರ ಮೆಚ್ಚುಗೆ ಗಳಿಸಿರುವ ಪ್ರತಿಭಾವಂತ

ಚಿಕ್ಕ ವಯಸ್ಸಿನಿಂದಲೂ ಯಶ್‍ಗೆ ಗುರು ಆಗಿರುವ ಆರ್ಮಾನ್ ಹೇಳಿದ್ದು. 'ಯಶ್ ಮೋಟಾರ್ ಸ್ಪೋರ್ಟ್ ವೃತ್ತಿಜೀವನ ಆರಂಭ ಮಾಡಿದ ದಿನದಿಂದ ನಮ್ಮ ತಂಡದೊಂದಿಗೆ ಇದ್ದಾರೆ. ನಮ್ಮ ತಂಡ ಅವರಿಗಾಗಿ ಹಂತಹಂತದ ಕಾರ್ಯಕ್ರಮ ರೂಪಿಸಿದೆ. ಅದರಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಯಶ್ ಶ್ರಮಜೀವಿ. ಗಮನಹರಿಸುವ ಬಾಲಕ. ಈ ಋತುವಿನಲ್ಲಿ ಸಹ ಗುರಿ ತಲುಪಲು ಅವರು ಶ್ರಮಿಸುತ್ತಾರೆ.' ಗೋ ಕಾರ್ಟಿಂಗ್‍ನಿಂದ ಫಾರ್ಮುಲಾ 4 ಪದಾರ್ಪಣೆ ಮಾಡಿದ ಮೊದಲ ಬಾರಿಯೇ ಫಾಮುಲಾ ಎಲ್‍ಜಿಬಿ ಸ್ವಿಫ್ಟ್ ನಲ್ಲಿ ಎಲ್ಲರ ಗಮನ ಸೆಳೆದಿದ್ದರು ಇಲ್ಲಿ ಸ್ಮರಿಸಬಹುದು

Story first published: Tuesday, May 7, 2019, 18:22 [IST]
Other articles published on May 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X