ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಸಾ ರದ್ದು ವಿವಾದ: ಕಾನೂನು ಹೋರಾಟದಲ್ಲಿ ಗೆದ್ದ ಜೊಕೊವಿಕ್; ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲು ಅವಕಾಶ

Court reinstates tennis star Novak Djokovics visa, Australian Court orders release from detention

ಕ್ರೀಡಾ ಜಗತ್ತಿನಲ್ಲಿ ದೊಡ್ಡ ವಿವಾದ ಹಾಗೂ ಕುತೂಹಲ ಕೆರಳಿಸಿದ್ದ ಖ್ಯಾತ ಟೆನ್ನಿಸಿಗ ಜೊಕೊವಿಕ್ ವಿಸಾ ರದ್ದು ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಿದ್ದ ಟೆನಿಸ್ ತಾರೆ ಈ ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ. ಆಸ್ಟ್ರೇಲಿಯಾ ಸರ್ಕಾರದ ವಿಸಾ ರದ್ದತಿಯ ಆದೇಶವನ್ನು ಪ್ರಶ್ನಿಸಿ ಜೊಕೊವಿಕ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಆಸ್ಟ್ರೇಲಿಯಾ ಸರ್ಕಾರ ಜೊಕೊವಿಕ್ ವಿಸಾವನ್ನು ರದ್ದುಗೊಳಿಸಿದ್ದು 'ಅಸಮಂಜಸ' ಎಂದಿದ್ದು ಸರ್ಕಾರದ ತೀರ್ಮಾನವನ್ನು ರದ್ದುಗೊಳಿಸಿದೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಕ್ಕೆ ಆಗಮಿಸಿ ಜೊಕೊವಿಕ್ ಕೋವಿಡ್ -19 ವ್ಯಾಕ್ಸಿನೇಷನ್‌ನಿಂದ ವಿನಾಯಿತಿ ಪಡೆದುಕೊಂಡಿರುವುದಾಗಿ ಹೇಳಿಕೊಂಡಿದ್ದರು.

ವಿಶ್ವದಾಖಲೆಯ 21ನೇ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಗುರಿಯಿಟ್ಟು ಜನವರಿ 17ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ಓಪನ್‌ನಲ್ಲಿ ಭಾಗಿಯಾಗಲು ಆಸ್ಟ್ರೇಲಿಯಾಗೆ ಕಾಲಿಟ್ಟಿದ್ದರು ಜೊಕೊವಿಕ್. ಆದ್ರೆ ಆಸ್ಟ್ರೇಲಿಯಾಗೆ ಕಾಲಿಡುತ್ತಿದ್ದಂತೆ ಶಾಕ್ ಕಾದಿತ್ತು. ಕೋವಿಡ್-19 ಲಸಿಕೆಯನ್ನ ಪಡೆಯದ ಆಟಗಾರರಿಗೆ ಆಸ್ಟ್ರೇಲಿಯಾದಲ್ಲಿ ನಿರ್ಬಂಧವಿದ್ದು, ಸಂಪೂರ್ಣ ಲಸಿಕೆ ಪಡೆಯ ನೊವಾಕ್ ಜೊಕೊವಿಕ್‌ಗೆ ನಿರ್ಬಂಧ ಹೇರಲಾಗಿತ್ತು. ಸ್ವತಃ ಪ್ರಧಾನಿಯೇ ಘೋಷಿಸಿದಂತೆ ವೀಸಾ ರದ್ದು ಮಾಡುವ ತೀರ್ಮಾನವನ್ನು ಅಲ್ಲಿನ ಸರ್ಕಾರ ತೆಗೆದುಕೊಂಡಿತ್ತು. ಆಸ್ಟ್ರೇಲಿಯಾ ಸರ್ಕಾರದ ಈ ತೀರ್ಮಾನವನ್ನು ಪ್ರಶ್ನಿಸಿ ಜೊಕೊವಿಕ್ ಕೋರ್ಟ್ ಮೆಟ್ಟಿಲೇರಿದ್ದರು.

ಸಚಿನ್ ತೆಂಡೂಲ್ಕರ್, ಲೆಜೆಂಡ್ಸ್‌ ಲೀಗ್‌ನಲ್ಲಿ ಆಡುತ್ತಿಲ್ಲ: ತಪ್ಪು ದಾರಿಗೆ ಎಳೆಯದಿರಿ ಎಂದ SRT ಕಂಪನಿಸಚಿನ್ ತೆಂಡೂಲ್ಕರ್, ಲೆಜೆಂಡ್ಸ್‌ ಲೀಗ್‌ನಲ್ಲಿ ಆಡುತ್ತಿಲ್ಲ: ತಪ್ಪು ದಾರಿಗೆ ಎಳೆಯದಿರಿ ಎಂದ SRT ಕಂಪನಿ

ನ್ಯಾಯಾಲಯ ಮೆಟ್ಟಿಲೇರಿದ್ದ ನೊವಾಕ್ ಮೇಲ್ಮನವಿಯನ್ನ ಸೋಮವಾರ (ಜನವರಿ 10) ಬೆಳಿಗ್ಗೆ 10 ಗಂಟೆಗೆ ಮುಂದೂಡಲಾಗಿತ್ತು. ಕೋವಿಡ್ -19 ಲಸಿಕೆಗೆ ವೈದ್ಯಕೀಯ ವಿನಾಯಿತಿಗಾಗಿ ಪುರಾವೆಗಳ ಹೊಂದಿರದ ಜೊಕೊವಿಕ್ ಮೆಲ್ಬೋರ್ನ್‌ನಲ್ಲಿರುವ ವಲಸೆ ಬಂಧನ ಸೌಲಭ್ಯದಲ್ಲಿ ಉಳಿದುಕೊಂಡಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಆಂಥೋನಿ ಕೆಲ್ಲಿ ಜೊಕೊವಿಕ್ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ. ಅಲ್ಲದೆ ಜೊಕೊವಿಕ್ ಪಾಸ್‌ಪೋರ್ಟ್ ಮತ್ತು ಇತರ ಪ್ರಯಾಣ ದಾಖಲೆಗಳನ್ನು ಹಿಂದಿರುಗಿಸಿದ್ದಾರೆ. ಈ ಮೂಲಕ ಮುಂಬರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವ ಅವಕಾಶವನ್ನು ಜೊಕೊವಿಕ್ ಗಿಟ್ಟಿಸಿಕೊಂಡಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ನಲ್ಲಿ ದಾಖಲೆಯ 21ನೇ ಗ್ರ್ಯಾಂಡ್‌ಸ್ಲಾಮ್‌ ಗೆಲುವಿನ ಗುರಿಯೊಂದಿಗೆ ಜೊಕೊವಿಕ್‌ ಕಳೆದ ಬುಧವಾರ ರಾತ್ರಿ 11:30ರ ಸುಮಾರಿಗೆ ಮೆಲ್ಬೋರ್ನ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ದುಬೈನಿಂದ 14 ಗಂಟೆಗಳ ಪ್ರಯಾಣದ ನಂತರ ಮೆಲ್ಬರ್ನ್‌ಗೆ ಆಗಮಿಸಿದ ಜೊಕೊವಿಕ್ ಆಸ್ಟ್ರೇಲಿಯಾಗೆ ಬಂದಿಳಿದ ಕೆಲವೇ ಸಮಯದಲ್ಲಿ ಆಸ್ಟ್ರೇಲಿಯಾ ಸರ್ಕಾರ ಜೊಕೊವಿಕ್ ಅವರ ವಿಸಾವನ್ನು ರದ್ದುಗೊಳಿಸಿತ್ತು. ಆಸ್ಟ್ರೇಲಿಯೇತನ್ನರು ಆಸ್ಟ್ರೇಲಿಯಾಗೆ ಪ್ರವೇಶಿಸಲು ಇರುವ ಪ್ರಮುಖ ನಿಯಮವಾದ ಪೂರ್ಣ ಪ್ರಮಾಣದ ಲಸಿಕೆಯನ್ನು ಜೊಕೊವಿಕ್ ಪಡೆದಿರಲಿಲ್ಲ ಎಂಬ ಕಾರಣಕ್ಕೆ ಆಸ್ಟ್ರೇಲಿಯಾ ಸರ್ಕಾರ ಈ ಕಠಿಣ ತೀರ್ಮಾನ ಕೈಗೊಂಡಿತ್ತು.

ಆ್ಯಶಸ್: ನಾಲ್ಕನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ, 1 ವಿಕೆಟ್‌ನಿಂದ ಸೋಲು ತಪ್ಪಿಸಿಕೊಂಡ ಇಂಗ್ಲೆಂಡ್ಆ್ಯಶಸ್: ನಾಲ್ಕನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ, 1 ವಿಕೆಟ್‌ನಿಂದ ಸೋಲು ತಪ್ಪಿಸಿಕೊಂಡ ಇಂಗ್ಲೆಂಡ್

ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳ ಆಧಾರದಲ್ಲಿ ಜೊಕೊವಿಕ್ ಲಸಿಕೆಯನ್ನು ಪಡೆದುಕೊಂಡಿಲ್ಲ ಎಂದು ಸ್ಪಷ್ಟವಾಗಿದ್ದರೂ ಕಳೆದ ತಿಂಗಳಷ್ಟೇ ಕೊರೊನಾವೈರಸ್‌ಗೆ ತುತ್ತಾಗಿದ್ದರು ಎಂಬ ದಾಖಲೆಯನ್ನು ಜೊಕೊವಿಕ್ ಹೊಂದಿದ್ದರು. ಈ ಕಾರಣದಿಂದಾಗಿ ಲಸಿಕೆಯ ಅಗತ್ಯವಿಲ್ಲ ಎಂದು ಕೋರ್ಟ್‌ನಲ್ಲಿ ಜೊಕೊವಿಕ್ ವಾದಿಸಿದ್ದರು.

ಟೆನಿಸ್‌ನಲ್ಲಿ 20 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಸರ್ಬಿಯಾ ಮೂಲದ ನೊವಾಕ್ ಜೊಕೊವಿಕ್ 9 ಬಾರಿ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು ಅತಿ ಹೆಚ್ಚು ಬಾರಿ ಈ ಪ್ರತಿಷ್ಠಿತ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ದಾಖಲೆ ಹೊಂದಿದ್ದಾರೆ.

Story first published: Monday, January 10, 2022, 15:42 [IST]
Other articles published on Jan 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X