ಮಡಿಕೇರಿ: ಕರ್ನಾಟಕದ ಮಡಿಕೇರಿಯವರಾದ ಮಾಜಿ ರಾಷ್ಟ್ರೀಯ ಚಾಂಪಿಯನ್ ನಿಕಿ ಪೂಣಚ್ಚ ಅವರು ಇಂಟರ್ ನ್ಯಾಷನಲ್ ಟೆನಿಸ್ ಫೆಡರೇಶನ್ (ಐಟಿಎಫ್- 15 ಸಾವಿರ ಡಾಲರ್) ಪುರುಷರ ಟೆನಿಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಅಮೆರಿಕಾದ ಆಲಿವರ್ ಕ್ರಾಫೋರ್ಡ್ ಅವರನ್ನು ಸೋಲಿಸಿರುವ ಪೂಣಚ್ಚ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ನ ಪ್ಲಸ್-ಮೈನಸ್ ಪಾಯಿಂಟ್ಸ್
ಭಾನುವಾರ (ಏಪ್ರಿಲ್ 4) ನಡೆದ ಫೈನಲ್ ಪಂದ್ಯದಲ್ಲಿ ನಿಕಿ ಪೂಣಚ್ಚ ಅವರು ಅಮೆರಿಕಾದ 4ನೇ ಶ್ರೇಯಾಂಕಿತ ಆಲಿವರ್ ಕ್ರಾಫೋರ್ಡ್ ಅವರನ್ನು 6-3, 7-6 (5) ಅಂತರರಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡರು. ಫೈನಲ್‌ನಲ್ಲಿ, ಎರಡನೇ ಸೆಟ್‌ನ ಒಂಬತ್ತನೇ ಗೇಮ್‌ನಲ್ಲಿ 3-5, 0-4ರಲ್ಲಿ ಮೂರು ಸೆಟ್ ಪಾಯಿಂಟ್‌ಗಳನ್ನು ಎದುರಿಸಿದಾಗ, ನಿಕಿ ಪಂದ್ಯದಲ್ಲಿ ತನ್ನ ಆರು ಏಸ್‌ಗಳಲ್ಲಿ ಒಂದನ್ನು ಪೂರೈಸುವಲ್ಲಿ ಯಶಸ್ವಿಯಾದರು.
ಅಮೆರಿಕದ ಝೇನ್ ಖಾನ್ ಟೂರ್ನ ಮೆಂಟ್ ನ ಮೊದಲ ಎರಡು ಪಂದ್ಯಾವಳಿಗಳನ್ನು ಗೆದ್ದ ನಂತರ, ಇಂದೋರ್ ನಲ್ಲಿ ನಡೆದ ಫೈನಲ್‌ನಲ್ಲಿ ಖಾನ್ ಅವರನ್ನು ಕ್ರಾಫೋರ್ಡ್ ಸೋಲಿಸಿದ್ದರು. ಹೀಗೆ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದ ಕ್ರಾಫೋರ್ಡ್ ಅವರನ್ನು ಸೋಲಿಸಿ, ಸಿಂಗಲ್ಸ್ ನಲ್ಲಿ ಭಾರತೀಯರೊಬ್ಬರು ಚಾಂಪಿಯನ್ ಆಗಿ ಗಮನ ಸೆಳೆದಿರುವುದು ವಿಶೇಷ.
ಐಪಿಎಲ್ 2021: ಸಚಿನ್ ಅಲ್ಲ, ಕೊಹ್ಲಿ ಅಲ್ಲ, ಆರ್ಸಿಬಿ ಆಟಗಾರ ಪಡಿಕ್ಕಲ್ಗೆ ರೋಲ್ ಮಾಡೆಲ್ ಯಾರು ಗೊತ್ತಾ!
ಕಳೆದ ಮೂರು ವಾರಗಳಿಂದ ಈಜಿಪ್ಟ್, ಲಕ್ನೋ, ಇಂದೋರ್ ಮತ್ತು ಪುಣೆಯಲ್ಲಿ ನಡೆದ ನಾಲ್ಕು ಪಂದ್ಯಗಳನ್ನು ಗೆಲ್ಲುವಲ್ಲಿ ನಿಕಿ ವಿಫಲರಾಗಿದ್ದರು. ಅವರು ಅಂತರ್ರಾಷ್ಟ್ರೀಯ ಆಟಗಾರರಾದ ನಿಶಾಂತ್ ದಬಾಸ್, ಸ್ವೀಡನ್‌ನ ಫಿಲಿಪ್ ಬರ್ಗೆವಿ ಮತ್ತು ಇಟಲಿಯ ಲೊರೆಂಜೊ ಬೊಚಿ ಅವರನ್ನು ಹಿಂದಿನ ಪಂದ್ಯಾಟಗಳಲ್ಲಿ ಸೋಲಿಸಿದ್ದರು. ಅವರ ಎದುರಾಳಿ ಜೆಕ್ ಗಣರಾಜ್ಯದ ಡಾಲಿಬೋರ್ ಸ್ವರ್ಸಿನಾ ಅವರು ವೈದ್ಯಕೀಯ ಕಾರಣದಿಂದ ಸೆಮಿಫೈನಲ್ ನಲ್ಲಿ ಆಡಲು ಸಾಧ್ಯವಾಗದಿದ್ದಾಗ ವಾಕ್‌ಓವರ್ ಪಡೆದಿದ್ದರು.
Highlights from Niki Poonacha's ITF M15 title win in Delhi
— Indian Tennis Daily (@IndTennisDaily) April 4, 2021
" I feel great! I think my confidence is back and I'm happy to grind in the court and do my best." - @nikikpoonacha after winning his 2nd ITF title.
Thanks to @GauriAwasthi5 for the wonderful Videos! pic.twitter.com/B87gDL1R5Z
ಗೆಲುವಿನ ನಂತರ ಒನ್ ಇಂಡಿಯಾ ಪ್ರತಿನಿಧಿಯೊಂದಿಗೆ ಮಾತನಾಡಿದ ನಿಕಿ ಅವರು, "ಈ ಟ್ರೋಫಿಯಿಂದ ನನಗೆ ತುಂಬಾ ಸಂತೋಷವಾಗಿದೆ. ಟೂರ್ನಮೆಂಟ್‌ನಲ್ಲಿ ನಾನು ಭಾಗವಹಿಸುವ ಯಾವುಧೇ ನಿರೀಕ್ಷೆಗಳಿರಲಿಲ್ಲ. ಪುಣೆಯಲ್ಲಿ ನಡೆದ ಕೊನೆಯ ಪಂದ್ಯಾವಳಿಯಲ್ಲಿ ಮಣಿಕಟ್ಟಿನ ಗಾಯದಿಂದ ನಾನು ನಿವೃತ್ತಿ ಹೊಂದಿದ್ದೆ. ಮೊದಲು ನೋವಿನಿಂದ ಗುಣಮುಖನಾಗಿರುವುದೇ ನನ್ನ ಆದ್ಯತೆ ಆಗಿತ್ತು ಎಂದು ತಿಳಿಸಿದರು.
ಕೊಡಗು ಮೂಲದ 25 ವರ್ಷದ ಕಲಿಯಂಡ ನಿಕಿ ಪೂಣಚ್ಚ ಅವರ ವೃತ್ತಿಪರ ಜೀವನದಲ್ಲಿ ಇದು ಎರಡನೇ ಗಮನಾರ್ಹ ವಿಜಯವಾಗಿದೆ. ಇದಕ್ಕೂ ಮುನ್ನ ನಿಕಿ 2018 ರಲ್ಲಿ ಇಂಡೋನೇಷ್ಯಾದಲ್ಲಿ ಕ್ವಾಲಿಫೈ ಆಗಿ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದಿದ್ದರು. ಅಲ್ಲದೆ ನಿಕಿ 2019 ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದಿದ್ದರು.
ಐಪಿಎಲ್ 2021: ಗೇಲ್ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುಳಿವು ನೀಡಿದ ಕೋಚ್ ಜಾಫರ್
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅರ್ಹತೆ ಗಳಿಸಿಕೊಳ್ಳಲು ನಿಕಿ ಪೂಣಚ್ಚ ಅವರು ಬೆಂಗಳೂರಿನ ರೋಹನ್ ಬೋಪಣ್ಣ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಮುಂದಿನ ಮೇ ತಿಂಗಳ ಮೊದಲ ವಾರದಲ್ಲಿ ಆಫ್ರಿಕಾದಲ್ಲಿ ನಡೆಯಲಿರುವ ಟೆನ್ನಿಸ್ ಟೂರ್ನಮೆಂಟ್ ನಲ್ಲಿ ಭಾಗವಹಿಸಲಿರುವುದಾಗಿ ಹೇಳಿರುವ ನಿಕಿ, ಆ ಟೂರ್ನಿಗಾಗಿ ಸಿದ್ಧತೆ ನಡೆಸುತ್ತಿದ್ದೇನೆ ಎಂದಿದ್ದಾರೆ.