ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಲೇಷ್ಯಾ ಓಪನ್ 2022: ಕ್ವಾರ್ಟರ್‌ಫೈನಲ್ ತಲುಪಿದ ಪಿವಿ ಸಿಂಧು, ಪ್ರಣಯ್; ಹೊರಬಿದ್ದ ಸಾಯಿ ಪ್ರಣೀತ್

Malaysia Open 2022: PV Sindhu, HS Prannoy Reach The Quarterfinals; Sai Praneeth Knocked Out

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ, ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಗುರುವಾರ ಕೌಲಾಲಂಪುರದಲ್ಲಿ ನಡೆದ ಮಲೇಷ್ಯಾ ಓಪನ್‌ನಲ್ಲಿ ಥಾಯ್ಲೆಂಡ್‌ನ ಫಿಟ್ಟಾಯಪೋರ್ನ್ ಚೈವಾನ್ ವಿರುದ್ಧ ಜಯ ಗಳಿಸುವ ಮೂಲಕ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ಆಕ್ಸಿಯಾಟಾ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ನಡೆದ 57 ನಿಮಿಷಗಳ ಎರಡನೇ ಸುತ್ತಿನ ಹಣಾಹಣಿಯಲ್ಲಿ ವಿಶ್ವದ ನಂ. 7 ಆಟಗಾರ್ತಿ ಸಿಂಧು, ತನ್ನ ಥಾಯ್ಲೆಂಡ್‌ನ ಎದುರಾಳಿಯನ್ನು 19-21 21-9 21-14 ಅಂತರದಲ್ಲಿ ಸೋಲಿಸಿದರು.

ನಮ್ಮೂರ ಪ್ರತಿಭೆ: ಭಾರತದ ಭವಿಷ್ಯದ ಬ್ಯಾಡ್ಮಿಂಟನ್ ಸೂಪರ್‌ಸ್ಟಾರ್‌ ಅಶ್ವಿನಿ ಭಟ್‌ನಮ್ಮೂರ ಪ್ರತಿಭೆ: ಭಾರತದ ಭವಿಷ್ಯದ ಬ್ಯಾಡ್ಮಿಂಟನ್ ಸೂಪರ್‌ಸ್ಟಾರ್‌ ಅಶ್ವಿನಿ ಭಟ್‌

ಏಳನೇ ಶ್ರೇಯಾಂಕದ ಭಾರತೀಯ ಆಟಗಾರ್ತಿ ಮುಂದಿನ ಎಂಟರ ಘಟ್ಟದ ಮುಖಾಮುಖಿಯಲ್ಲಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಅವರನ್ನು ಎದುರಿಸಲಿದ್ದಾರೆ.

ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಎಚ್‌ಎಸ್ ಪ್ರಣಯ್

ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಎಚ್‌ಎಸ್ ಪ್ರಣಯ್

ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.21 ಆಟಗಾರ ಭಾರತದ ಎಚ್‌ಎಸ್ ಪ್ರಣಯ್ ಅವರು ಚೈನೀಸ್ ತೈಪೆಯ ನಾಲ್ಕನೇ ಶ್ರೇಯಾಂಕದ ಚೌ ಟಿಯೆನ್ ಚೆನ್ ವಿರುದ್ಧ 21-15 21-7 ಸುಲಭ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.

ಭಾರತದ ಐತಿಹಾಸಿಕ ಥಾಮಸ್ ಕಪ್ ವಿಜಯದ ವೀರರಲ್ಲಿ ಒಬ್ಬರಾದ ಶ್ರೇಯಾಂಕ ರಹಿತ ಎಚ್ಎಸ್ ಪ್ರಣಯ್ ಏಳನೇ ಶ್ರೇಯಾಂಕದ ಇಂಡೋನೇಷ್ಯಾದ ಜೊಂಟನ್ ಕ್ರಿಸ್ಟಿ ಅವರೊಂದಿಗೆ ಎಂಟರ ಘಟ್ಟದ ಹಣಾಹಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ನಂತರದ ದಿನದಲ್ಲಿ ಏಳನೇ ಶ್ರೇಯಾಂಕದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮತ್ತು ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪರುಪಳ್ಳಿ ಕಶ್ಯಪ್ ಕೂಡ ಕಣಕ್ಕಿಳಿಯಲಿದ್ದಾರೆ.

ಆರಂಭಿಕ ಸುತ್ತಿನಲ್ಲಿ ಸೋತ ಸಾಯಿ ಪ್ರಣೀತ್, ಸಮೀರ್ ವರ್ಮಾ

ಆರಂಭಿಕ ಸುತ್ತಿನಲ್ಲಿ ಸೋತ ಸಾಯಿ ಪ್ರಣೀತ್, ಸಮೀರ್ ವರ್ಮಾ

ಮಲೇಷ್ಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಸ್ಪರ್ಧೆಯ ಆರಂಭಿಕ ಸುತ್ತಿನ ಹೋರಾಟದಲ್ಲಿ ಭಾರತದ ಶಟ್ಲರ್‌ಗಳಾದ ಬಿ. ಸಾಯಿ ಪ್ರಣೀತ್ ಮತ್ತು ಸಮೀರ್ ವರ್ಮಾ ತಮ್ಮ ಅಭಿಯಾನವನ್ನು ಕೊನೆಗೊಳಿಸಿದರು.

ಪ್ರಣೀತ್ ವಿಶ್ವದ ಆರನೇ ಶ್ರೇಯಾಂಕದ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ ಸೋತರೆ, ಸಮೀರ್ ವರ್ಮಾ ವಿಶ್ವದ 8ನೇ ಶ್ರೇಯಾಂಕಿತ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ವಿರುದ್ಧ ಸೋತರು.

ಗಾಯದಿಂದ ಪುನರಾಗಮನ ಮಾಡುತ್ತಿದ್ದ ಸಮೀರ್ ವರ್ಮಾ

ಗಾಯದಿಂದ ಪುನರಾಗಮನ ಮಾಡುತ್ತಿದ್ದ ಸಮೀರ್ ವರ್ಮಾ

ಪ್ರಸ್ತುತ ವಿಶ್ವದ 19ನೇ ಶ್ರೇಯಾಂಕದಲ್ಲಿರುವ 30ರ ಹರೆಯದ ಸಾಯಿ ಪ್ರಣೀತ್ 50 ನಿಮಿಷಗಳ ಪುರುಷರ ಸಿಂಗಲ್ ಪಂದ್ಯದಲ್ಲಿ ಗಿಂಟಿಂಗ್ ವಿರುದ್ಧ 15-21, 21-19, 9-21 ಅಂತರದಿಂದ ಸೋತರು.

ಇದು ಇವರಿಬ್ಬರ ನಡುವಿನ ಎಂಟನೇ ಹೋರಾಟವಾಗಿದ್ದು, ಇಂಡೋನೇಷ್ಯಾದ ಆಟಗಾರ 4-3 ರಿಂದ ಹೆಡ್-ಟು-ಹೆಡ್ ದಾಖಲೆಯನ್ನು ಮುನ್ನಡೆಸಿದರು. ಅವರು ಕೊನೆಯದಾಗಿ 2020ರ ಏಷ್ಯನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ್ದರು. ಅಲ್ಲಿ ಸಾಯಿ ಪ್ರಣೀತ್ ಗಾಯದ ಕಾರಣ ನಿವೃತ್ತರಾದ ನಂತರ ಗಿಂಟಿಂಗ್ ಸ್ಪರ್ಧೆಯನ್ನು ಗೆದ್ದಿದ್ದರು.

ಗಾಯದಿಂದ ಪುನರಾಗಮನ ಮಾಡುತ್ತಿದ್ದ ಸಮೀರ್ ವರ್ಮಾ, ಇನ್ನೊಂದು ಪುರುಷರ ಸಿಂಗಲ್ಸ್ ಮುಖಾಮುಖಿಯಲ್ಲಿ 14-21, 21-13, 7-21 ರಿಂದ 49 ನಿಮಿಷಗಳ ಕಾಲ ಹೋರಾಟ ನಡೆಸಿ, ಸೋಲನಪ್ಪಿದರು.

ಪಂದ್ಯಾವಳಿಯಿಂದ ಹೊರಬಿದ್ದ ಅಶ್ವಿನಿ ಪೊನ್ನಪ್ಪ- ಎನ್. ಸಿಕ್ಕಿ ರೆಡ್ಡಿ

ಪಂದ್ಯಾವಳಿಯಿಂದ ಹೊರಬಿದ್ದ ಅಶ್ವಿನಿ ಪೊನ್ನಪ್ಪ- ಎನ್. ಸಿಕ್ಕಿ ರೆಡ್ಡಿ

ಡಬಲ್ಸ್‌ನಲ್ಲಿ ಮಹಿಳಾ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಎನ್. ಸಿಕ್ಕಿ ರೆಡ್ಡಿ ಅವರು ಜಪಾನ್‌ನ ಆರನೇ ಶ್ರೇಯಾಂಕದ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿದಾ ವಿರುದ್ಧ 15-21, 11-21 ರಿಂದ ಸೋತ ನಂತರ ಪಂದ್ಯಾವಳಿಯಿಂದ ಹೊರಬಿದ್ದರು.

ಇತರ ಭಾರತೀಯರ ಪೈಕಿ ಇಂಡೋನೇಷ್ಯಾ ಓಪನ್ ಸೆಮಿಫೈನಲಿಸ್ಟ್ ಎಚ್‌ಎಸ್ ಪ್ರಣಯ್ ಮಲೇಷ್ಯಾದ ಲಿವ್ ಡೇರೆನ್ ಅವರನ್ನು ಎದುರಿಸಲಿದ್ದಾರೆ, ಆದರೆ ವಿಶ್ವದ 8ನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಲೇಷ್ಯಾದ ಜೋಡಿಯಾದ ಮ್ಯಾನ್ ವೀ ಚೋಂಗ್ ಮತ್ತು ಕೈ ವುನ್ ಟೀ ಅವರನ್ನು ದಿನದ ನಂತರ ಎದುರಿಸಲಿದ್ದಾರೆ.

Story first published: Thursday, June 30, 2022, 13:54 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X