ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Asia Cup 2022: ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ವೀರೇಂದ್ರ ಸೆಹ್ವಾಗ್ ಅಚ್ಚರಿಯ ಉತ್ತರ

ಏಷ್ಯಾಕಪ್ ಹಣಾಹಣಿ ರೋಚಕ ಹಂತ ತಲುಪುತ್ತಿದೆ, ಸೂಪರ್ 4 ಹಂತದಲ್ಲಿ ಈಗಾಗಲೇ ಶ್ರೀಲಂಕಾ, ಪಾಕಿಸ್ತಾನ ತಲಾ ಒಂದು ಪಂದ್ಯ ಗೆದ್ದು, ಫೈನಲ್ ತಲುಪುವ ಆತ್ಮವಿಶ್ವಾಸದಲ್ಲಿವೆ. ಟೂರ್ನಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಏಷ್ಯಾಕಪ್ ಕಪ್ ಗೆಲ್ಲುವ ಫೇವರಿಟ್ ತಂಡವಾಗಿತ್ತು. ಅದಕ್ಕೆ ತಕ್ಕಂತೆಯೇ ಗುಂಪು ಹಂತದ ಪಂದ್ಯಗಳಲ್ಲಿ ಪ್ರದರ್ಶನ ನೀಡಿತ್ತು. ಆದರೆ ಸೂಪರ್ 4 ಹಂತದಲ್ಲಿ ಭಾರತ ಆಡಿದ ರೀತಿ ನಿರಾಸೆ ಮೂಡಿಸಿದೆ.

ಏಷ್ಯಾಕಪ್‌ನ ಸೂಪರ್ 4 ಮುಖಾಮುಖಿಯಲ್ಲಿ ಪಾಕಿಸ್ತಾನವು ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ. ರೋಹಿತ್ ಶರ್ಮಾ ಪಡೆ ಏಷ್ಯಾಕಪ್‌ನಲ್ಲಿ ಫೈನಲ್‌ಗೆ ಹೋಗಬೇಕೆಂದರೆ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನವನ್ನು ಸೋಲಿಸಬೇಕಾಗಿದೆ. ಅಫ್ಘಾನಿಸ್ತಾನದ ವಿರುದ್ಧ ಶ್ರೀಲಂಕಾ ಗೆಲುವು ಸಾಧಿಸಿದ ನಂತರ ಉತ್ತಮ ರನ್‌ರೇಟ್ ಹೊಂದಿದೆ, ಭಾರತ ತಂಡಕ್ಕೆ ಗೆಲುವಿನ ಜೊತೆ ರನ್‌ ರೇಟ್ ಸುಧಾರಣೆ ಮಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಭಾರತ ಈ ತಪ್ಪು ಮಾಡಬಾರದು: ಸಂಜಯ್ ಮಂಜ್ರೇಕರ್ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಭಾರತ ಈ ತಪ್ಪು ಮಾಡಬಾರದು: ಸಂಜಯ್ ಮಂಜ್ರೇಕರ್

ಹಾಗಾದ್ರೆ, ಈ ಬಾರಿ ಏಷ್ಯಾಕಪ್ ಯಾರು ಗೆಲ್ಲಬಹುದು ಎನ್ನುವ ಪ್ರಶ್ನೆಗೆ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ವಿಭಿನ್ನ ಉತ್ತರ ನೀಡಿದ್ದಾರೆ.

 ಟೀಂ ಇಂಡಿಯಾ ಮೇಲೆ ಒತ್ತಡವಿದೆ

ಟೀಂ ಇಂಡಿಯಾ ಮೇಲೆ ಒತ್ತಡವಿದೆ

ಸೂಪರ್ 4 ಹಂತದಲ್ಲಿ ನಾಲ್ಕು ತಂಡಗಳು ತಲಾ ಮೂರು ಪಂದ್ಯಗಳನ್ನಾಡಲಿದ್ದು, ಪ್ರತಿ ಪಂದ್ಯ ಕೂಡ ಮುಖ್ಯವಾಗಲಿದೆ. ಭಾರತ ಈಗಾಗಲೇ ಮೊದಲನೇ ಪಂದ್ಯದಲ್ಲಿ ಸೋಲನುಭವಿಸಿರುವುದು ತಂಡದ ಮೇಲೆ ಹೆಚ್ಚಿನ ಒತ್ತಡ ಹಾಕಿದೆ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಟೀಂ ಇಂಡಿಯಾ ಮೇಲಿನ ಹೆಚ್ಚಿನ ಒತ್ತಡ ಮುಂದಿನ ಪಂದ್ಯಗಳ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ. ಭಾರತ ಇನ್ನೊಂದು ಪಂದ್ಯವನ್ನು ಸೋತರು ಟೂರ್ನಿಯಿಂದ ಹೊರಬೀಳಲಿದೆ.

Asia Cup 2022: ಅರ್ಷದೀಪ್ ಸಿಂಗ್ ಭವಿಷ್ಯದ ಕ್ರಿಕೆಟ್ ತಾರೆ: ಪಾಕಿಸ್ತಾನ ಮಾಜಿ ಕ್ರಿಕೆಟರ್

 ಈ ಬಾರಿ ಪಾಕಿಸ್ತಾನ ಏಷ್ಯಾಕಪ್ ಗೆಲ್ಲಬಹುದು

ಈ ಬಾರಿ ಪಾಕಿಸ್ತಾನ ಏಷ್ಯಾಕಪ್ ಗೆಲ್ಲಬಹುದು

ಭಾರತದ ವಿರುದ್ಧ ಗೆಲವು ಸಾಧಿಸಿದ ನಂತರ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಉತ್ತಮ ಆತ್ಮವಿಶ್ವಾಸದಲ್ಲಿದೆ, ಈ ಬಾರಿ ಪಾಕಿಸ್ತಾನಕ್ಕೆ ಏಷ್ಯಾಕಪ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

"ಪಾಕಿಸ್ತಾನ ಬಹಳ ಸಮಯದ ನಂತರ ಫೈನಲ್‌ನಲ್ಲಿ ಆಡಲಿದೆ ಮತ್ತು ಏಷ್ಯಾಕಪ್‌ನಲ್ಲಿ ಬಹಳ ಸಮಯದ ನಂತರ ಭಾರತವನ್ನು ಸೋಲಿಸಿದೆ. ಇದು ಪಾಕಿಸ್ತಾನದ ವರ್ಷವೂ ಆಗಿರಬಹುದು" ಎಂದು ಸೆಹ್ವಾಗ್ ಹೇಳಿದ್ದಾರೆ.

 2012ರಲ್ಲಿ ಕೊನೆಯ ಬಾರಿ ಏಷ್ಯಾಕಪ್ ಗೆದ್ದಿದ್ದ ಪಾಕಿಸ್ತಾನ

2012ರಲ್ಲಿ ಕೊನೆಯ ಬಾರಿ ಏಷ್ಯಾಕಪ್ ಗೆದ್ದಿದ್ದ ಪಾಕಿಸ್ತಾನ

ಪಾಕಿಸ್ತಾನ ಕೊನೆಯ ಬಾರಿಗೆ 2012ರಲ್ಲಿ ಏಷ್ಯಾಕಪ್ ಟ್ರೋಫಿಯನ್ನು ಗೆದ್ದಿತ್ತು. ಅದಾದ ನಂತರ 2014ರಲ್ಲಿ ಫೈನಲ್ ಪ್ರವೇಶಿಸಿದ್ದ ಪಾಕಿಸ್ತಾನ ಶ್ರೀಲಂಕಾ ಎದುರು ಮುಗ್ಗರಿಸಿದ್ದುಮ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಭಾರತ ಇದುವರೆಗೂ 7 ಬಾರಿ ಏಷ್ಯಾಕಪ್ ಟ್ರೋಫಿಯನ್ನು ಗೆದ್ದಿದೆ, ಶ್ರೀಲಂಕಾ 5 ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಇದುವರೆಗೂ ಎರಡು ಬಾರಿಯಷ್ಟೆ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

 ಭಾರತದ ಬಗ್ಗೆ ಇಂಜಮಾಮ್-ಉಲ್-ಹಕ್ ಭವಿಷ್ಯ

ಭಾರತದ ಬಗ್ಗೆ ಇಂಜಮಾಮ್-ಉಲ್-ಹಕ್ ಭವಿಷ್ಯ

ಮಂಗಳವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಏಷ್ಯಾಕಪ್ 2022 ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟರ್ ಇಂಜಮಾಮ್-ಉಲ್-ಹಕ್ ಭವಿಷ್ಯ ನುಡಿದಿದ್ದಾರೆ.

ಜಿಯೋ ನ್ಯೂಸ್ ಕಾರ್ಯಕ್ರಮ 'ಜಶನ್-ಎ-ಕ್ರಿಕೆಟ್' ನಲ್ಲಿ ಮಾತನಾಡಿದ ಇಂಜಮಾಮ್, "ಟೀಂ ಇಂಡಿಯಾ ನಾಯಕ ಭಾರಿ ಒತ್ತಡದಲ್ಲಿದ್ದಾರೆ. ಭಾರತವು ಮಂಗಳವಾರ ಶ್ರೀಲಂಕಾ ವಿರುದ್ಧ ಸೋಲುತ್ತದೆ, ಏಷ್ಯಾಕಪ್‌ ಟೂರ್ನಿಯಿಂದಲೇ ಹೊರಬೀಳುತ್ತದೆ ಎಂದು ನನಗೆ ಅನಿಸುತ್ತಿದೆ" ಎಂದು ಹೇಳಿದ್ದಾರೆ.

Story first published: Tuesday, September 6, 2022, 20:42 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X