ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಅರ್ಷದೀಪ್ ಸಿಂಗ್ ಭವಿಷ್ಯದ ಕ್ರಿಕೆಟ್ ತಾರೆ: ಪಾಕಿಸ್ತಾನ ಮಾಜಿ ಕ್ರಿಕೆಟರ್

ಅರ್ಷದೀಪ್ ಸಿಂಗ್, ಸದ್ಯ ಈ ಹೆಸರನ್ನು ಕೇಳಿದರೆ ಸಾಕು ಭಾರತದ ಕೆಲವು ಕ್ರಿಕೆಟ್ ಅಭಿಮಾನಿಗಳು ಕಿಡಿಕಾರುತ್ತಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್ ಸಿಂಗ್, ಅಸಿಫ್ ಅಲಿ ಕ್ಯಾಚ್ ಕೈ ಬಿಟ್ಟಿದ್ದೇ ಭಾರತ ತಂಡ ಸೋಲಲು ಕಾರಣ ಎಂದು ಈಗಾಗಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಹಲವು ಮಾಜಿ ಕ್ರಿಕೆಟರ್ ಗಳು, ಅಭಿಮಾನಿಗಳು ಅರ್ಷದೀಪ್ ಬೆಂಬಲಕ್ಕೆ ನಿಂತಿದ್ದಾರೆ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ದ್ಯಾನಿಶ್ ಕನೇರಿಯಾ ಕೂಡ ಅರ್ಷದೀಪ್ ಬೆಂಬಲಕ್ಕೆ ಬಂದಿದ್ದು, ಅರ್ಷದೀಪ್ ಸಿಂಗ್‌ರನ್ನು ಬೆಂಬಲಿಸಲು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡ, ಮುಂದಿನ ಪಂದ್ಯಗಳತ್ತ ಗಮನ ಹರಿಸು: ಅರ್ಷ್‌ದೀಪ್‌ಗೆ ಮೊಹಮ್ಮದ್ ಶಮಿ ಸಲಹೆಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡ, ಮುಂದಿನ ಪಂದ್ಯಗಳತ್ತ ಗಮನ ಹರಿಸು: ಅರ್ಷ್‌ದೀಪ್‌ಗೆ ಮೊಹಮ್ಮದ್ ಶಮಿ ಸಲಹೆ

ಭಾರತದ ಯುವ ವೇಗಿ ಅರ್ಷದೀಪ್ ಬೆಂಬಲಿಸಿ ಹೇಳಿಕೆ ನೀಡಿರುವ ದ್ಯಾನಿಶ್ ಕನೇರಿಯಾ, "ಯಾವುದೇ ಕಾರಣವಿಲ್ಲದೆ ಅರ್ಷದೀಪ್‌ರನ್ನು ಟ್ರೋಲ್ ಮಾಡಲಾಗುತ್ತಿದೆ. ಆತ ಇನ್ನೂ ಚಿಕ್ಕ ವಯಸ್ಸಿನವರಾಗಿದ್ದಾನೆ ಒತ್ತಡದಲ್ಲಿ ಆ ಕ್ಯಾಚ್ ಕೈಬಿಟ್ಟಿದ್ದಾನೆ. ಕ್ಯಾಚ್ ಬಿಡದವರು ಯಾರು ಇಲ್ಲ, ಎಲ್ಲಾ ಆಟಗಾರರು ಫೀಲ್ಡಿಂಗ್‌ನಲ್ಲಿ ತಪ್ಪು ಮಾಡುತ್ತಾರೆ. ಆ ಒಂದು ಕ್ಯಾಚ್ ಬಿಟ್ಟಿದ್ದರಿಂದ ಭಾರತ ಸೋಲಲಿಲ್ಲ. ಆತ ಟೀಂ ಇಂಡಿಯಾದ ಭವಿಷ್ಯದ ತಾರೆ, ಅರ್ಷದೀಪ್‌ರನ್ನು ಕ್ರಿಕೆಟ್ ಅಭಿಮಾನಿಗಳು ಟೀಕೆ ಮಾಡಬಾರದು, ಬದಲಾಗಿ ಅವನಿಗೆ ಪ್ರೇರೇಪಣೆ ನೀಡಿ" ಎಂದು ಮನವಿ ಮಾಡಿದ್ದಾರೆ.

 ಮೊದಲು ಅವನ ವಿರುದ್ಧ ಟೀಕೆ ಮಾಡುವುದು ನಿಲ್ಲಿಸಿ

ಮೊದಲು ಅವನ ವಿರುದ್ಧ ಟೀಕೆ ಮಾಡುವುದು ನಿಲ್ಲಿಸಿ

ಭಾರತದ ಕ್ರಿಕೆಟ್ ಅಭಿಮಾನಿಗಳು ಅರ್ಷದೀಪ್ ವಿರುದ್ಧ ಮಾಡುತ್ತಿರುವ ಟೀಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಮೊದಲು ಆತನ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ.

ಭಾರತೀಯ ಯುವ ಆಟಗಾರನನ್ನು ಹೊಗಳಿದ ಕನೇರಿಯಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿ, "ಕೊನೆಯ ಓವರ್ ಅನ್ನು ಅರ್ಷದೀಪ್ ಉತ್ತಮವಾಗಿ ಮಾಡಿದರು, ಅಸಿಫ್ ಅಲಿ ವಿಕೆಟ್ ಪಡೆದರು, ಪಂದ್ಯವನ್ನು ಗೆಲ್ಲಿಸಲು ಸಾಕಷ್ಟು ಶ್ರಮಿಸಿದರು. ಪಾಕಿಸ್ತಾನ ತಂಡವನ್ನು ಕರಾರುವಕ್ಕಾದ ದಾಳಿಯಿಂದ ಕಾಡಿದರು. ಆತ ಭವಿಷ್ಯದ ತಾರೆ" ಎಂದು ಹೇಳಿದ್ದಾರೆ.

Ind vs SL Asia Cup 2022 : ಶ್ರೀಲಂಕಾ ವಿರುದ್ಧ ಭಾರತದ ಆಡುವ 11ರ ಬಳಗ; ಏನೆಲ್ಲಾ ಬದಲಾವಣೆ?

 ಅರ್ಷದೀಪ್‌ರನ್ನು ಟ್ರೋಲ್ ಮಾಡಿದ ಅಭಿಮಾನಿಗಳು

ಅರ್ಷದೀಪ್‌ರನ್ನು ಟ್ರೋಲ್ ಮಾಡಿದ ಅಭಿಮಾನಿಗಳು

ಕ್ಯಾಚ್ ಬಿಟ್ಟ ಅರ್ಷದೀಪ್ ವಿರುದ್ಧ ಭಾರತದ ಕ್ರಿಕೆಟ್ ಅಭಿಮಾನಿಗಳು ಭಾರಿ ಟೀಕೆ ವ್ಯಕ್ತಪಡಿಸಿದ್ದರು. ಆತ ಭಾರತೀಯನೇ ಅಲ್ಲ ಎನ್ನುವಂತಹ ಟೀಕೆಗಳನ್ನು ಕೂಡ ಯುವ ವೇಗದ ಬೌಲರ್ ಕೇಳಬೇಕಾಯಿತು. ಆತನೊಬ್ಬನಿಂದಲೇ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋತಿದೆ ಎನ್ನುವಂತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.

ಹಲವು ಮಾಜಿ ಕ್ರಿಕೆಟರ್, ಭಾರತದ ಕ್ರಿಕೆಟ್ ಅಭಿಮಾನಿಗಳು, ಕ್ರಿಕೆಟಿಗರು ಎಡಗೈ ವೇಗಿ ಅರ್ಷದೀಪ್ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ. ಆಟದಲ್ಲಿ ಇದೆಲ್ಲಾ ಸಹಜ ಮುಂದಿನ ಪಂದ್ಯದ ಬಗ್ಗೆ ಗಮನ ನೀಡು ಎಂದು ಸಲಹೆ ನೀಡಿದ್ದಾರೆ.

 ಶ್ರೀಲಂಕಾ ವಿರುದ್ಧ ಆರ್. ಅಶ್ವಿನ್ ಆಡಬೇಕು

ಶ್ರೀಲಂಕಾ ವಿರುದ್ಧ ಆರ್. ಅಶ್ವಿನ್ ಆಡಬೇಕು

ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ರವಿಚಂದ್ರನ್ ಅಶ್ವಿನ್‌ರನ್ನು ಕಣಕ್ಕಿಳಿಸಬೇಕು ಎಂದು ದ್ಯಾನಿಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್‌ಗೆ ಹೆಚ್ಚಿನ ಬೆಂಬಲ ಇಲ್ಲದ ಕಾರಣ ಭಾರತ ತಂಡ ಸಂಕಷ್ಟದಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೊಹಮ್ಮದ್ ಶಮಿಯಂತಹ ಅನುಭವಿ ಬೌಲರ್ ಕೊರತೆ ಭಾರತ ತಂಡವನ್ನು ಕಾಡುತ್ತಿದೆ. ಭುವನೇಶ್ವರ್ ಕುಮಾರ್‌ಗೆ ಬೇರೆ ಬೌಲರ್ ಕಡೆಯಿಂದ ಹೆಚ್ಚಿನ ಬೆಂಬಲ ಸಿಗುತ್ತಿಲ್ಲ. ಶ್ರೀಲಂಕಾ ವಿರುದ್ಧ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್‌ ಕಣಕ್ಕಿಳಿದರೆ ಬೌಲಿಂಗ್ ವಿಭಾಗ ಉತ್ತಮವಾಗಲಿದೆ ಎಂದು ಹೇಳಿದ್ದಾರೆ.

 ಮೊಹಮ್ಮದ್ ಶಮಿ ಆಯ್ಕೆ ಮಾಡಬೇಕಿತ್ತು

ಮೊಹಮ್ಮದ್ ಶಮಿ ಆಯ್ಕೆ ಮಾಡಬೇಕಿತ್ತು

ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿಗಿಂತ ಮೊದಲು ಅವೇಶ್ ಖಾನ್ ಆಯ್ಕೆ ಮಾಡಿರುವ ಕ್ರಮಕ್ಕೆ ದ್ಯಾನಿಶ್ ಕನೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡದ ಆಯ್ಕೆ ವೇಳೆ ಬಿಸಿಸಿಐ ಅನುಭವಿ ಆಟಗಾರರಿಗೆ ಆದ್ಯತೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅವೇಶ್ ಖಾನ್ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ, ದೀಪಕ್ ಚಹಾರ್ ಕೂಡ ಉತ್ತಮ ಆಯ್ಕೆಯಾಗಿದ್ದರು. ಭಾರತ ತಂಡ ಅವರನ್ನಾದರೂ ಆಯ್ಕೆ ಮಾಡಬೇಕಿತ್ತು, ಏಷ್ಯಾಕಪ್ ನಂತರ ಅವೇಶ್ ಖಾನ್ ಹೆಚ್ಚಿನ ಪಂದ್ಯಗಳನ್ನು ಆಡುವುದು ಅನುಮಾನ ಎಂದು ಹೇಳಿದ್ದಾರೆ.

Story first published: Tuesday, September 6, 2022, 16:56 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X