1122 ಆಟಗಾರರು ಐಪಿಎಲ್‌ ಹರಾಜು ಕಣದಲ್ಲಿ

Posted By:
1122 players registered to IPL auction

ಬೆಂಗಳೂರು, ಜನವರಿ 26: 11ನೇ ಐಪಿಎಲ್ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಒಟ್ಟು 1122 ಮಂದಿ ಆಟಗಾರರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇದರಲ್ಲಿ 778 ಮಂದಿ ಭಾರತದ ಆಟಗಾರರೇ ಇರುವುದು ವಿಶೇಷ.

1122 ಆಟಗಾರರಲ್ಲಿ 281 ಅಂತರರಾಷ್ಟ್ರೀಯ ಆಟಗಾರರಿದ್ದು, ಉಳಿದ 838 ಆಟಗಾರರು ದೇಸೀ ಆಟಗಾರರಾಗಿದ್ದಾರೆ. ಕಳೆದ ಬಾರಿಗಿಂತಲೂ ಬಿರುಸಿನ ಹರಾಜು ಈ ಬಾರಿ ನಡೆಯಲಿದ್ದು, ಈ ಬಾರಿ ಹೆಚ್ಚಿನ ಹಣ ಆಟಗಾರರ ಮೇಲೆ ಹೂಡಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ಭಾರತದ ಸ್ಟಾರ್ ಆಟಗಾರರಾದ ಗೌತಮ್ ಗಂಭೀರ್, ಯುವರಾಜ್ ಸಿಂಗ್, ಆರ್.ಅ‍ಶ್ವಿನ್, ಕೆ.ಎಲ್.ರಾಹುಲ್, ಶಿಖರ್ ಧವನ್, ರಹಾನೆ, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯಾ ಅವರುಗಳು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. ಹರಾಜು ಪ್ರಕ್ರಿಯೆಯು ಬೆಂಗಳೂರಿನಲ್ಲಿ ಜನವರಿ 27 ಮತ್ತು 28ರಂದು ನಡೆಯಲಿದೆ.

ಈ ಬಾರಿ ವಿದೇಶಿ ಆಟಗಾರರಾದ ಕ್ರಿಸ್ ಗೇಲ್, ಬೆನ್ ಸ್ಟೋಕ್, ಕ್ರಿಸ್ ಲೇನ್, ಇಯೋನ್ ಮಾರ್ಗನ್, ಮಿಶೆಲ್ ಸ್ಟಾರ್ಕ್ ಮುಂತಾದ ಪ್ರಮುಖ ಆಟಗಾರರು ಹರಾಜಿಗೆ ಇದ್ದಾರೆ, ಅದರಲ್ಲಿಯೂ ಕ್ರಿಸ್ ಗೇಲ್ ಈ ಬಾರಿ ಯಾವ ತಂಡದ ಪಾಲಾಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಇಂಗ್ಲೆಂಡ್‌ನ ಟೆಸ್ಟ್ ನಾಯಕ ಜೋ ರೂಟ್ ಮೊದಲ ಬಾರಿಗೆ ಐಪಿಎಲ್ ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಅವರು ಪ್ರಮುಖ ಆಕರ್ಷಣೆ ಆಗಲಿದ್ದಾರೆ. ಡ್ವೇಯ್ನ್ ಬ್ರಾವೊ, ಬ್ರೆತ್‌ವೈಟ್, ಇವೆನ್ ಲಿವಿಸ್, ಜಾಸನ್ ಹೋಲ್ಡರ್ ಅವರುಗಳು ವೆಸ್ಟ್ ಇಂಡೀಸ್ ಸ್ಟಾರ್ ಆಟಗಾರರಾಗಿ ಹರಾಜಿನ ಕಣದಲ್ಲಿದ್ದಾರೆ. ಶ್ರೀಲಂಕಾದಿಂದ ಲಸಿತ್ ಮಾಲಿಂಗಾ, ಆಂಜೆಲೊ ಮಾಥ್ಯುಸ್, ನಿರೋಷಾ ಡಿಕ್‌ವೆಲ್ಲಾ, ತಿಸೆರಾ ಪೆರೆರಾ ಅವರುಗಳು ಸ್ಟಾರ್ ಆಟಗಾರರು.

ಆಸ್ಟ್ರೇಲಿಯಾದಿಂದ ಅತಿ ಹೆಚ್ಚು ಆಟಗಾರರು ಐಪಿಎಲ್‌ಗೆ ನೊಂದಾಯಿಸಿಕೊಂಡಿದ್ದು, ಗ್ಲೇನ್ ಮ್ಯಾಕ್ಸ್‌ವೆಲ್, ಶೇನ್ ವ್ಯಾಟ್ಸ್‌ನ್, ಮಿಶೆಲ್ ಜಾನ್ಸನ್‌ ಅವರುಗಳು ಪ್ರಮುಖ ಆಕರ್ಷಣೆ. ದಕ್ಷಿಣ ಆಪ್ರಿಕಾದಿಂದ ಹಷೀಮ್ ಆಮ್ಲಾ, ಡಿಕಾಕ್, ಡುಪ್ಲಿಸಿಸ್, ಮಿಲ್ಲರ್ ಅವರುಗಳು ಹೆಚ್ಚಿನ ಬೇಡಿಕೆ ಉಳ್ಳ ಆಟಗಾರರು.

ಯಾವ ದೇಶದ ಎಷ್ಟು ಆಟಗಾರರು ಹರಾಜಿನಲ್ಲಿ
ಆಸ್ಟ್ರೇಲಿಯಾ- 58
ದಕ್ಷಿಣ ಆಫ್ರಿಕಾ - 57
ವೆಸ್ಟ್ ಇಂಡೀಸ್- 39
ಶ್ರೀಲಂಕಾ- 39
ನ್ಯೂಜಿಲೆಂಡ್ - 30
ಇಂಗ್ಲೆಂಡ್ - 26
ಅಪ್ಘಾನಿಸ್ಥಾನ- 13
ಬಾಂಗ್ಲಾದೇಶ- 8
ಐರ್ಲೆಂಡ್- 2
ಜಿಂಬಾಬ್ವೆ- 7

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, January 26, 2018, 12:33 [IST]
Other articles published on Jan 26, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ