ಶಾರ್ಜಾ ಸ್ಟೇಡಿಯಂ ಆಚೆಗೆ ಸಿಕ್ಸರ್ ಹೊಡೆದ ಜಡೇಜಾ! ಪ್ರಾಣವನ್ನು ಪಣಕ್ಕಿಟ್ಟು ಚೆಂಡನ್ನು ಎತ್ತಿಕೊಂಡ ಬಾಲಕ

ದುಬೈನಲ್ಲಿ ಎಬಿ ಡಿವಿಲಿಯರ್ಸ್ ಸಿಕ್ಸರ್ ಸಿಡಿಸಿದ ಬಳಿಕ ಶಾರ್ಜಾದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ರವೀಂದ್ರ ಜಡೇಜಾ ಭರ್ಜರಿ ಸಿಕ್ಸರ್‌ ಸಿಡಿಸಿದರು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್‌ ಪರ ಆರಂಭಿಗ ಬ್ಯಾಟ್ಸ್‌ಮನ್ ಸ್ಯಾಮ್ ಕರ್ರನ್ ಅವರನ್ನು ಬೇಗನೆ ಕಳೆದುಕೊಂಡಿತು. ಪರಿಣಾಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಸಿಎಸ್‌ಕೆ 179 ರನ್ ಗಳಿಸಲು ಸಾಧ್ಯವಾಯಿತು.

ಫಾಫ್ ಡುಪ್ಲೆಸಿಸ್ ಅರ್ಧಶತಕ ದಾಖಲಿಸಿ ಔಟಾದ ಬಳಿಕ, ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜಾ ಡೆಲ್ಲಿ ಬೌಲರ್‌ಗಳನ್ನು ಚಾರ್ಜ್ ಮಾಡಿದರು. ಅದರಲ್ಲೂ ಎಡಗೈ ಆಟಗಾರ ಜಡ್ಡು ಕೇವಲ 13 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿ ನಾಲ್ಕು ಬೃಹತ್ ಸಿಕ್ಸರ್ ಸಿಡಿಸಿದರು.

ರವೀಂದ್ರ ಜಡೇಜಾ ಸಿಡಿಸಿದ ಸಿಕ್ಸರ್‌ಗಳಲ್ಲಿ ಒಂದು ಶಾರ್ಜಾದ ಸ್ಟೇಡಿಯಂ ದಾಟಿ ರಸ್ತೆಗೆ ಬಿದ್ದಿತು. ಇದೇನು ಈ ಬಾರಿಯ ಐಪಿಎಲ್‌ನಲ್ಲಿ ಮೊದಲೇನಲ್ಲ ಬಿಡಿ. ಆದರೆ ಜಡೇಜಾ ಸಿಕ್ಸರ್ ಸಿಡಿಸಿದ ಚೆಂಡನ್ನು ಪಡೆಯಲು ಬಾಲಕನೊಬ್ಬ ಟ್ರಾಫಿಕ್ ಲೆಕ್ಕಿಸದೇ ಪ್ರಾಣವನ್ನು ಪಣಕ್ಕಿಟ್ಟು ಮುನ್ನುಗ್ಗಿದ್ದ.

18 ನೇ ಓವರ್‌ನಲ್ಲಿ ತುಷಾರ್ ದೇಶಪಾಂಡೆ ಬೌಲಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಜಡ್ಡು ಒಂದು ದೊಡ್ಡ ಸಿಕ್ಸರ್‌ಗಾಗಿ ಡೀಪ್ ಸ್ಕ್ವೇರ್ ಲೆಗ್ ಪ್ರದೇಶದ ಮೇಲೆ ಪಿಕ್-ಅಪ್ ಶಾಟ್ ಹೊಡೆದರು. ಚೆಂಡು ರಸ್ತೆಗೆ ಹೋಗಿ ಬಿದ್ದಿತು. ಅಭಿಮಾನಿ ಬಾಲಕನೊಬ್ಬ, ಬಹುಶಃ ಚೆಂಡನ್ನು ಕಾಯುತ್ತಿದ್ದರು, ಚೆಂಡು ಬಿದ್ದ ಕೂಡಲೇ ಅದನ್ನು ತೆಗೆದುಕೊಳ್ಳಲು ರಸ್ತೆಯ ಮಧ್ಯದಲ್ಲಿ ಓಡಿಹೋದ.

ಚೆಂಡು ರಸ್ತೆಯ ಮಧ್ಯದ ಲೇನ್‌ನಲ್ಲಿ ಬಿದ್ದ ತಕ್ಷಣ, ಚೆಂಡನ್ನು ಟ್ರಾಫಿಕ್ ನಡುವೆ ಹೆದರದೆ ಅಭಿಮಾನಿ ಎತ್ತಿಕೊಂಡು ಹೋದ. ವೀಕ್ಷಣ ವಿವರಣೆಗಾರ ಸೈಮನ್ ಡೌಲ್ ಬಾಲಕನ ಧೈರ್ಯವನ್ನು ಶ್ಲಾಘಿಸಿದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, October 17, 2020, 22:32 [IST]
Other articles published on Oct 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X