ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸರಿಯಾದ ಲೈನ್ & ಲೆಂಥ್ ಎಸೆದ್ರೆ ಹಿಟ್‌ಮ್ಯಾನ್ ರೋಹಿತ್‌ ಶರ್ಮಾಗೂ ಆಡೋಕೆ ಕಷ್ಟ!

A Good Line And Length Will Be Difficult To Play Even To Rohit: Anirch Nortje

ದೆಹಲಿ ಕ್ಯಾಪಿಟಲ್ಸ್‌ನ ವೇಗದ ಬೌಲರ್ ಅನ್ರಿಕ್ ನೊರ್ಕಿಯಾ ತಂಡದ ಕೀ ಬೌಲರ್‌ ಆಗಿ ಮಿಂಚುತ್ತಿದ್ದಾರೆ. ಕೇವಲ ವೇಗವನ್ನು ಮಾತ್ರವಲ್ಲದೆ ಅವರ ವಿಧಾನದಲ್ಲಿ ಅಷ್ಟೇ ಕೌಶಲ್ಯ ಹೊಂದಿದ್ದಾರೆ.

ಚೆಂಡನ್ನು ಎರಡೂ ರೀತಿಯಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ಬೌಲರ್ , ಉತ್ತಮ ಲೈನ್ & ಲೆಂಥ್ ಬಾಲ್ ಹಾಕಿದ್ರೆ ಯಾವುದೇ ಉತ್ತಮ ಬ್ಯಾಟ್ಸ್‌ಮನ್‌ಗಳಿಗೂ ಕಷ್ಟವಾಗಬಹುದು ಎಂಬುದನ್ನ ಈ ಬಾರಿ ಐಪಿಎಲ್ ಸೀಸನ್‌ನಲ್ಲಿ ತೋರಿಸಿದ್ದಾರೆ.

ವೈಯಕ್ತಿಕ ಕಾರಣಗಳಿಗಾಗಿ ಈ ವರ್ಷದ ಐಪಿಎಲ್‌ನಿಂದ ಹೊರಗುಳಿದ ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ ಬದಲಿಗೆ ಅನ್ರಿಕ್ ನೊರ್ಕಿಯಾ ದೆಹಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೇರಿಕೊಂಡರು. ಕಗಿಸೊ ರಬಾಡಾ ಜೊತೆಗೆ ನೊರ್ಕಿಯಾ ಹೊಸ ಬಾಲ್ ಹಾಗೂ ಡೆತ್ ಓವರ್‌ಗಳಲ್ಲಿ ಸಖತ್ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ ಒಂಬತ್ತು ಪಂದ್ಯಗಳಲ್ಲಿ ಅವರು 23.25 ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಹೊಂದಿದ್ದಾರೆ.

ಭಾರತದ ಜಸ್‌ಪ್ರೀತ್ ಬೂಮ್ರಾ ವಿಶ್ವದ ಅತ್ಯುತ್ತಮ ವೇಗಿ: ಬಾಂಡ್ಭಾರತದ ಜಸ್‌ಪ್ರೀತ್ ಬೂಮ್ರಾ ವಿಶ್ವದ ಅತ್ಯುತ್ತಮ ವೇಗಿ: ಬಾಂಡ್

ಅನ್ರಿಕ್ ನೊರ್ಕಿಯಾ ಪ್ರಕಾರ, ಬೌಲರ್ ಅದನ್ನು ಸರಳವಾಗಿರಿಸಿಕೊಳ್ಳಬೇಕು ಮತ್ತು ಆಟಗಾರರ ಬದಲು ಅವರ ಯೋಜನೆಯತ್ತ ಗಮನ ಹರಿಸಬೇಕು. ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡುವಾಗ ಗಮನ ಉತ್ತಮವಾಗಿರಬೇಕು. ಅದರಲ್ಲೂ ಲೈನ್ & ಲೆಂಥ್ ಎಸೆದ್ರೆ, ಅವರು ಯಾವುದೇ ಬ್ಯಾಟ್ಸ್‌ಮನ್‌ನ ರಕ್ಷಣಾ ಮತ್ತು ತಂತ್ರವನ್ನು ಸವಾಲು ಮಾಡಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ.

ಯಾವುದೇ ಬೌಲರ್ ಉತ್ತಮ ಲೈನ್ & ಲೆಂಥ್ ಮತ್ತು ತಮ್ಮ ಸಾಮರ್ಥ್ಯದ ಸುತ್ತ ಕೆಲಸ ಮಾಡಿದರೆ ಯಾವುದೇ ಬ್ಯಾಟ್ಸ್‌ಮನ್ ಅನ್ನು ಸೋಲಿಸಬಹುದು ಎಂದು ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ಸ್ಟಾರ್ ರೋಹಿತ್‌ಗೆ ಸಹ, ನಾವು ಉತ್ತಮ ಲೈನ್ & ಲೆಂಥ್ ಆಡಲು ಹಾಕಿದ್ರೆ ಕಷ್ಟವಾಗುತ್ತದೆ, "ಎಂದು ನೊರ್ಕಿಯಾ ಎಎನ್‌ಐಗೆ ತಿಳಿಸಿದರು.

ಬೌನ್ಸರ್‌ಗಳನ್ನು ಉತ್ತಮ ಪರಿಣಾಮಕ್ಕೆ ನಿಯೋಜಿಸಿರುವ ಅನ್ರಿಕ್ ನೊರ್ಕಿಯಾ, ಆರು ಪೂರ್ಣ ಎಸೆತಗಳನ್ನು ಒಂದೇ ರೀತಿ ಬೌಲಿಂಗ್ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಒತ್ತಿಹೇಳಿದ್ದಾರೆ. ಅವರು ಬ್ಯಾಟ್ಸ್‌ಮನ್‌ಗಳನ್ನು ಗ್ರಹಿಸುವುದನ್ನು ನಂಬುತ್ತಾರೆ.

Story first published: Tuesday, October 20, 2020, 10:31 [IST]
Other articles published on Oct 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X