ಟಿ20 ವಿಶ್ವಕಪ್‌ ತಂಡದಲ್ಲಿ ಚಾಹಲ್, ಚಾಹರ್‌ಗೆ ಸ್ಥಾನ ನೀಡದ್ದಕ್ಕೆ ಆಕಾಶ್ ಚೋಪ್ರಾ ಕಿಡಿ

ನವದೆಹಲಿ: ಮುಂಬರಲಿರುವ ಟಿ20 ವಿಶ್ವಕಪ್‌ಗೆ ಬೋರ್ಟ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 15 ಜನರ ತಂಡ ಪ್ರಕಟವಾಗಿದೆ. ವಿಶ್ವಕಪ್‌ಗೆ ಪ್ರಕಟಿತ ಭಾರತ ತಂಡದಲ್ಲಿ ಬಹಳಷ್ಟು ಅಚ್ಚರಿಯ ಸಂಗತಿಗಳಿದ್ದವು. ಭಾರತದ ಮಾಜಿ ನಾಯಕ ಎಂಎಸ್ ಧೋನಿ ಕೂಡ ಕಾಣಿಸಿಕೊಂಡಿದ್ದರು. ಆದರೆ ಆಟಗಾರನಾಗಿ ಅಲ್ಲ, ಬದಲಿಗೆ ಮೆಂಟರ್ ಆಗಿ ಹೆಸರಿಸಲ್ಪಟ್ಟಿದ್ದರು. ಜೊತೆಗೆ ಭಾರತದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಬಹಳ ದಿನಗಳ ಬಳಿಕ ಟಿ20ಐ ತಂಡಕ್ಕೆ ವಾಪಸ್ಸಾಗಿದ್ದರು.

T20 World Cup 2021: 15 ಮಂದಿಯ ದಕ್ಷಿಣ ಆಫ್ರಿಕಾ ತಂಡ ಪ್ರಕಟT20 World Cup 2021: 15 ಮಂದಿಯ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಟಿ20 ವಿಶ್ವಕಪ್‌ಗಾಗಿ ಹೆಸರಿಸಲಾಗಿರುವ ತಂಡದ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆ. ಒಂದಿಷ್ಟು ಮಂದಿ ಪ್ರಕಟಿತ ತಂಡ ಸರಿಯಾಗಿದ ಎಂದರೆ, ಇನ್ನೂ ಕೆಲವು ಮಂದಿ ಪ್ರಕಟಿತ ತಂಡದಲ್ಲಿ ಕೆಲವರಿಗೆ ಅವಕಾಶ ನೀಡಬೇಕಿತ್ತು ಎನ್ನುತ್ತಿದ್ದಾರೆ. ವಿಶ್ವಕಪ್ ಪ್ರಕಟಿತ ತಂಡದ ಬಗ್ಗೆ ಅಸಮಾಧಾನ ಹೊಂದಿರುವವರಲ್ಲಿ ಮಾಜಿ ಬ್ಯಾಟ್ಸ್‌ಮನ್‌ ಆಕಾಶ್ ಚೋಪ್ರಾ ಕೂಡ ಒಬ್ಬರು.

ಈ ತಂಡ ಇಟ್ಟುಕೊಂಡು ಟಿ20 ವಿಶ್ವಕಪ್‌ ಗೆಲ್ಲುತ್ತಾ ಇಂಗ್ಲೆಂಡ್?; 3 ಬಲಿಷ್ಠ ಆಟಗಾರರಿಗೆ ಇಲ್ಲ ಸ್ಥಾನ!ಈ ತಂಡ ಇಟ್ಟುಕೊಂಡು ಟಿ20 ವಿಶ್ವಕಪ್‌ ಗೆಲ್ಲುತ್ತಾ ಇಂಗ್ಲೆಂಡ್?; 3 ಬಲಿಷ್ಠ ಆಟಗಾರರಿಗೆ ಇಲ್ಲ ಸ್ಥಾನ!

'ಆ ಪ್ರಮುಖರು ಇಲ್ಲದ್ದು ನೋಡಿ ಶಾಕ್ ಆಯ್ತು!'
ಟಿ20 ವಿಶ್ವಕಪ್‌ಗಾಗಿ ಬುಧವಾರ (ಸೆಪ್ಟೆಂಬರ್‌ 8) ಬಿಸಿಸಿಐ ಪ್ರಕಟಿಸಿರುವ ಭಾರತೀಯ ತಂಡದಲ್ಲಿ ಅನುಭವಿ ಬ್ಯಾಟ್ಸ್‌ಮನ್‌, ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಕಳೆದ ಎರಡೂ ಸೀಸನ್‌ಗಳಲ್ಲೂ ಅಧಿಕ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಅಗ್ರ ಸ್ಥಾನದಲ್ಲಿದ್ದ ಶಿಖರ್ ಧವನ್ ಮತ್ತು ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಇರಲಿಲ್ಲ. ಇದು ಅನೇಕರಿಗೆ ಅಚ್ಚರಿಯುಂಟು ಮಾಡಿದೆ. ಮಾಜಿ ಆಟಗಾರ ಆಕಾಶ್ ಚೋಪ್ರಾ ಕೂಡ ಇದನ್ನೇ ಪ್ರಶ್ನಿಸಿದ್ದಾರೆ. ಮುಖ್ಯವಾಗಿ ಶಿಖರ್ ಧವನ್, ಯುಜುವೇಂದ್ರ ಚಾಹಲ್ ಮತ್ತು ದೀಪಕ್ ಚಾಹರ್‌ಗೆ ಅವಕಾಶ ನೀಡಬೇಕಿತ್ತು ಎಂದು ಚೋಪ್ರಾ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಚಾಹಲ್ ಟಿ20 ಕ್ರಿಕೆಟ್ ವಿಚಾರದಲ್ಲಿ ವಿಶ್ವದಲ್ಲೇ ಶ್ರೇಷ್ಠ ಲೆಗ್ ಸ್ಪಿನ್ನರ್ ಎಂದು ಚೋಪ್ರಾ ಹೇಳಿದ್ದಾರೆ. ಚಾಹಲ್ ಕೈ ಬಿಟ್ಟಿದ್ದರಿಂದ ತಂಡಕ್ಕೆ ತೊಂದರೆಯಾಗುತ್ತದೆ ಎಂದು ಚೋಪ್ರಾ ಎಚ್ಚರಿಸಿದ್ದಾರೆ.

ಬಿಗ್‌ ಬಾಸ್ ಸ್ಪರ್ಧಿಯ ತಂಗಿಯ ಜೊತೆ ದೀಪಕ್ ಚಾಹರ್ ಡೇಟಿಂಗ್?!ಬಿಗ್‌ ಬಾಸ್ ಸ್ಪರ್ಧಿಯ ತಂಗಿಯ ಜೊತೆ ದೀಪಕ್ ಚಾಹರ್ ಡೇಟಿಂಗ್?!

ಟೀಮ್ ಇಂಡಿಯಾ ಮುಳುಗಬಹುದು!
'ಯುಜುವೇಂದ್ರ ಚಾಹಲ್ ಟೀಮ್ ಇಂಡಿಯಾದ ಬೆಸ್ಟ್ ಟಿ20 ಸ್ಪಿನ್ನರ್, ಕಳೆದ ಕೆಲವಾರು ವರ್ಷಗಳಿಂದಲೂ ಚಾಹಲ್ ಟೀಮ್ ಇಂಡಿಯಾಕ್ಕೆ ಬಲ ತುಂಬುತ್ತಿದ್ದಾರೆ. ಟಿ20 ಸ್ಪಿನ್ನರ್‌ಗಳಲ್ಲಿ ಚಾಹಲ್ ವಿಶ್ವದಲ್ಲೇ ಅಫ್ಘಾನಿಸ್ತಾನದ ರಶೀದ್ ಖಾನ್ ಬಳಿಕ ಎರಡನೇ ಅತ್ಯುತ್ತಮ ಸ್ಪಿನ್ನರ್. ಭಾರತೀಯ ತಂಡದಲ್ಲಿ 5 ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಅವರಲ್ಲಿ ಚಾಹಲ್ ಇಲ್ಲ. ಭಾರತೀಯ ತಂಡ ಟಿ20 ವಿಶ್ವಕಪ್‌ ನಲ್ಲಿ ಮುಳುಗಳು ಇದು ದಾರಿ ಮಾಡಿಕೊಡುತ್ತದೆ, ಎಂದು ಆಕಾಶ್ ಚೋಪ್ರಾ ಎಚ್ಚರಿಸಿದ್ದಾರೆ. ಹಾಗೆ ನೋಡಿದರೆ, ಕಳೆದ ಐಪಿಎಲ್‌ನ ಅಂಕಿ ಅಂಶಗಳನ್ನು ಗಮನಿಸಿದರೆ ಚಾಹಲ್ ಮೊದಲ ಸ್ಥಾನದಲ್ಲಿದ್ದಾರೆ. ಚಾಹಲ್ 19.29ರ ಸರಾಸರಿಯಲ್ಲಿ 21 ವಿಕೆಟ್ ಪಡೆದಿದ್ದರೆ, ವರುಣ್ ಚಕ್ರವರ್ತಿ 20.94ರ ಸರಾಸರಿಯಲ್ಲಿ 17 ವಿಕೆಟ್, ದೀಪಕ್ ಚಾಹರ್ 28.8ರ ಸರಾಸರಿಯಲ್ಲಿ 15 ವಿಕೆಟ್ ದಾಖಲೆ ಹೊಂದಿದ್ದಾರೆ.

4 ಟೆಸ್ಟ್‌ಗಳಲ್ಲಿ ಭಾರತದ ಈ 3 ಆಟಗಾರರನ್ನು ಕಟ್ಟಿಹಾಕಲು ನಮ್ಮಿಂದ ಆಗಲಿಲ್ಲ: ಮಾರ್ಕ್ ವುಡ್4 ಟೆಸ್ಟ್‌ಗಳಲ್ಲಿ ಭಾರತದ ಈ 3 ಆಟಗಾರರನ್ನು ಕಟ್ಟಿಹಾಕಲು ನಮ್ಮಿಂದ ಆಗಲಿಲ್ಲ: ಮಾರ್ಕ್ ವುಡ್

ಟಿ20 ವಿಶ್ವಕಪ್‌ಗೆ ಭಾರತೀಯ 15 ಜನರ ತಂಡ
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಒಂದಿಷ್ಟು ಪ್ರಮುಖ ಆಟಗಾರರು ತಂಡದಲ್ಲಿ ಕಾಣಿಸಿಕೊಂಡಿಲ್ಲ. ಮುಖ್ಯವಾಗಿ ಬ್ಯಾಟ್ಸ್‌ಮನ್ ಶಿಖರ್ ಧವನ್, ಸ್ಪಿನ್ನರ್ ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಕೃನಾಲ್ ಪಾಂಡ್ಯ, ಸಂಜು ಸ್ಯಾಮ್ಸನ್ ಮೊದಲಾದ ಆಟಗಾರರು ಕಾಣಿಸಿಕೊಂಡಿಲ್ಲ.
ಭಾರತೀಯ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್.

For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 20:45 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X