ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ವಿಲಿಯಮ್ಸನ್‌ಗಿಂತ ಡಿ ವಿಲಿಯರ್ಸ್ ಉತ್ತಮ'

AB de Villiers better than Virat Kohli, Steve Smith, Kane Williamson: Peter Borren

ದುಬೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಎಬಿ ಡಿ ವಿಲಿಯರ್ಸ್ ಆಡಿರುವ 8 ಪಂದ್ಯಗಳಲ್ಲಿ 46.00ರ ಸರಾಸರಿಯಲ್ಲಿ 179.68ರ ಸ್ಟ್ರೈಕ್‌ರೇಟ್‌ನಂತೆ 230 ರನ್ ಗಳಿಸಿದ್ದಾರೆ. ಸದ್ಯ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದವರಲ್ಲಿ ಎ ಬಿಡಿ 13ನೇ ಸ್ಥಾನದಲ್ಲಿದ್ದಾರೆ. ಆದರೆ ಡಚ್ ಮಾಜಿ ಕ್ರಿಕೆಟಿಗ ಪೀಟರ್ ಬೊರೆನ್, ಎಬಿಡಿಯನ್ನು ಉತ್ತಮ ಬ್ಯಾಟ್ಸ್‌ಮನ್‌ ಎಂದು ಶ್ಲಾಘಿಸಿದ್ದಾರೆ.

ಮಹಿಳಾ ಐಪಿಎಲ್: ಬಿಸಿಸಿಐನಿಂದ ತಂಡಗಳು, ಸಂಪೂರ್ಣ ವೇಳಾಪಟ್ಟಿ ಪ್ರಕಟಮಹಿಳಾ ಐಪಿಎಲ್: ಬಿಸಿಸಿಐನಿಂದ ತಂಡಗಳು, ಸಂಪೂರ್ಣ ವೇಳಾಪಟ್ಟಿ ಪ್ರಕಟ

ಭಾರತದ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್, ಪಾಕಿಸ್ತಾನ ನಿಯಮಿತ ಓವರ್‌ಗಳ ಕ್ರಿಕೆಟ್‌ನ ನಾಯಕ ಬಾಬರ್ ಅಝಾಮ್‌ಗಿಂತ ಎಬಿ ಡಿ ವಿಲಿಯರ್ಸ್ ಉತ್ತಮ ಬ್ಯಾಟ್ಸ್‌ಮನ್ ಎಂದು ನೆದರ್ಲ್ಯಾಂಡ್ಸ್ ಮಾಜಿ ನಾಯಕ ಪೀಟರ್ ಬೊರೆನ್ ಹೇಳಿದ್ದಾರೆ.

'ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ, ಬಾಬರ್ ಅಝಾಮ್/ಜೋ ರೂಟ್ ಈ ನಾಲ್ವರ ಬಗ್ಗೆ ಚರ್ಚೆಗಳಾಗುತ್ತಿರುತ್ತವೆ. ಇದನ್ನು ನೋಡುವಾಗ ತಮಾಷೆ ಅನ್ನಿಸುತ್ತದೆ. ಯಾಕೆಂದರೆ ಎಬಿ ಡಿ ವಿಲಿಯರ್ಸ್ ಇವರೆಲ್ಲರಿಗಿಂತೂ ಉತ್ತಮವಾಗಿದ್ದಾರೆ,' ಎಂದು ಬೊರೆನ್ ತಿಳಿಸಿದ್ದಾರೆ.

ವೀಕ್ಷಕರಿಲ್ಲದಿದ್ದರೂ ವಿಂಬಲ್ಡನ್ ಚಾಂಪಿಯನ್‌ಷಿಪ್‌ ನಡೆಸಲು ಸಿದ್ಧತೆವೀಕ್ಷಕರಿಲ್ಲದಿದ್ದರೂ ವಿಂಬಲ್ಡನ್ ಚಾಂಪಿಯನ್‌ಷಿಪ್‌ ನಡೆಸಲು ಸಿದ್ಧತೆ

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್, ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿಡಿ 114 ಟೆಸ್ಟ್ ಪಂದ್ಯಗಳಲ್ಲಿ 8765, 228 ಏಕದಿನ ಪಂದ್ಯಗಳಲ್ಲಿ 9577 ರನ್, 78 ಟಿ20ಐ ಪಂದ್ಯಗಳಲ್ಲಿ 1672 ರನ್, 162 ಐಪಿಎಲ್ ಪಂದ್ಯಗಳಲ್ಲಿ 4625 ರನ್ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ 3 ಶತಕ, 36 ಅರ್ಧಶತಕಗಳ ದಾಖಲೆಯೂ ಎಬಿಡಿ ಹೆಸರಿನಲ್ಲಿದೆ.

Story first published: Saturday, October 17, 2020, 10:44 [IST]
Other articles published on Oct 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X