ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಭಾರತ: ಟೀಮ್ ಇಂಡಿಯಾ ಕಾಲೆಳೆದು ಕೆಂಗಣ್ಣಿಗೆ ಗುರಿಯಾದ ಎಬಿಡಿ!

AB De Villiers reaction on South Africas test series win against India made Indian fans unhappy
AB De Villiers ಭಾರತೀಯರನ್ನು ಖುಷಿ ಪಡಿಸಲು ಹೀಗೆ ಮಾಡಿದ್ರಾ | Oneindia Kannada

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆಯುತ್ತಿದ್ದ 3 ಪಂದ್ಯಗಳ ಟೆಸ್ಟ್ ಸರಣಿ ಮುಗಿದಿದೆ. ಇತ್ತಂಡಗಳ ನಡುವೆ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿತ್ತು ಹಾಗೂ ಇದೀಗ ಇಂದು ಮುಕ್ತಾಯಗೊಂಡಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯ ಸಾಧಿಸುವುದರ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಬೀಗಿದೆ.

ಐಪಿಎಲ್ 2022: ಶುರುವಿಗೂ ಮುನ್ನ ವಿಘ್ನ; ಭಾರತ, ಯುಎಇಯಲ್ಲೂ ಟೂರ್ನಿ ಅನುಮಾನ, ಮತ್ತೆಲ್ಲಿ?ಐಪಿಎಲ್ 2022: ಶುರುವಿಗೂ ಮುನ್ನ ವಿಘ್ನ; ಭಾರತ, ಯುಎಇಯಲ್ಲೂ ಟೂರ್ನಿ ಅನುಮಾನ, ಮತ್ತೆಲ್ಲಿ?

ಇತ್ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 111 ರನ್‌ಗಳ ಅಗತ್ಯತೆ ಇತ್ತು ಹಾಗೂ ಟೀಮ್ ಇಂಡಿಯಾಗೆ ಗೆಲ್ಲಲು 8 ವಿಕೆಟ್‍ಗಳು ಬೇಕಾಗಿತ್ತು. ಆದರೆ ಟೀಮ್ ಇಂಡಿಯಾ ನಾಲ್ಕನೇ ದಿನದಾಟದಂದು ಕೇವಲ 1 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದು ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ನೀಡಿದ್ದ 212 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನತ್ತಿದೆ.

ದ.ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯನ್ನು ಹೀನಾಯವಾಗಿ ಸೋತು ಕೆಟ್ಟ ದಾಖಲೆ ಮುಂದುವರೆಸಿದ ಭಾರತ!ದ.ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯನ್ನು ಹೀನಾಯವಾಗಿ ಸೋತು ಕೆಟ್ಟ ದಾಖಲೆ ಮುಂದುವರೆಸಿದ ಭಾರತ!

ಇನ್ನು ಟೀಮ್ ಇಂಡಿಯಾ ಈ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಾಗ ಟೆಸ್ಟ್ ಸರಣಿಯನ್ನು ಗೆಲ್ಲುವ ಫೇವರಿಟ್ ತಂಡವಾಗಿತ್ತು. ಹಾಗೂ ಮೊದಲನೇ ಪಂದ್ಯದಲ್ಲಿಯೇ ಜಯ ಸಾಧಿಸುವುದರ ಮೂಲಕ ಶುಭಾರಂಭವನ್ನು ಮಾಡಿದ್ದ ಟೀಂ ಇಂಡಿಯಾ ಸರಣಿಯನ್ನು ಗೆಲ್ಲಲಿದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಈ ಊಹೆ ಇದೀಗ ಹುಸಿಯಾಗಿದ್ದು ದಕ್ಷಿಣ ಆಫ್ರಿಕಾ ಉಳಿದ ಎರಡೂ ಪಂದ್ಯಗಳಲ್ಲಿಯೂ ಜಯ ಸಾಧಿಸುವುದರ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಹೀಗೆ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯನ್ನು ಗೆದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಣಗಳಿಗೆ ಶುಭಾಶಯವನ್ನು ಹಲವಾರು ಮಾಜಿ ಕ್ರಿಕೆಟಿಗರು ಕೋರಿದ್ದಾರೆ. ಅದೇ ರೀತಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕೂಡ ದಕ್ಷಿಣ ಆಫ್ರಿಕಾ ಗೆಲುವಿಗೆ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಶುಭಾಶಯಗಳನ್ನು ಕೋರಿದ್ದು, ತಾವು ಮಾಡಿದ ಆ ಒಂದು ಟ್ವೀಟ್‌ನಿಂದಾಗಿ ಇದೀಗ ಕೆಲ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಿಷಯದ ಕುರಿತಾದ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ..

ಇದು ದ.ಆಫ್ರಿಕಾದ ಫೈರ್ ಎಂದ ಎಬಿಡಿ

ಇದು ದ.ಆಫ್ರಿಕಾದ ಫೈರ್ ಎಂದ ಎಬಿಡಿ

ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದ ಬೆನ್ನಲ್ಲೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಎಬಿ ಡಿವಿಲಿಯರ್ಸ್ 'ನಿಮಗಿದೋ ದಕ್ಷಿಣ ಆಫ್ರಿಕಾ ತಂಡದ ಬೆಂಕಿಯಂತಹ ಆಟ' ಎಂದು ಕೊಂಡಾಡಿದ್ದಾರೆ. ಹೀಗೆ ಎಬಿ ಡಿವಿಲಿಯರ್ಸ್ ತನ್ನ ದೇಶದ ತಂಡ ಗೆದ್ದ ಖುಷಿಯನ್ನು ಹಂಚಿಕೊಂಡಿದ್ದರೆ, ಪರೋಕ್ಷವಾಗಿ ಟೀಮ್ ಇಂಡಿಯಾ ಕಾಲನ್ನು ಎಳೆದಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿ ಕೆಲವು ಭಾರತೀಯ ಕ್ರಿಕೆಟ್ ಪ್ರೇಕ್ಷಕರು ನಿಮ್ಮನ್ನು ನಾವು ಭಾರತೀಯನೆಂದು ತಪ್ಪು ತಿಳಿದಿದ್ದೆವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಂತರ ಮತ್ತೊಂದು ಟ್ವೀಟ್ ಮಾಡಿ ಎರಡೂ ತಂಡಗಳನ್ನು ಹೊಗಳಿದ ಎಬಿಡಿ

ನಂತರ ಮತ್ತೊಂದು ಟ್ವೀಟ್ ಮಾಡಿ ಎರಡೂ ತಂಡಗಳನ್ನು ಹೊಗಳಿದ ಎಬಿಡಿ

ಹೀಗೆ ಮೊದಲನೇ ಟ್ವೀಟ್ ಮಾಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಎಬಿ ಡಿವಿಲಿಯರ್ಸ್ ನಂತರ ಮತ್ತೊಂದು ಟ್ವೀಟ್ ಮಾಡಿ ದಕ್ಷಿಣ ಆಫ್ರಿಕದ ಗೆಲುವಿಗೆ ಶುಭಾಶಯವನ್ನು ಕೋರಿ ಎರಡೂ ತಂಡದ ಆಟಗಾರರು ಕೂಡ ಉತ್ತಮ ಪ್ರದರ್ಶನವನ್ನು ನೀಡಿದರು ಎಂದು ಬರೆದುಕೊಂಡಿದ್ದಾರೆ.

ಎಬಿ ಡಿವಿಲಿಯರ್ಸ್ ಟ್ವೀಟ್ ಕುರಿತು ವ್ಯಕ್ತವಾಗುತ್ತಿದೆ ಮಿಶ್ರ ಪ್ರತಿಕ್ರಿಯೆ

ಎಬಿ ಡಿವಿಲಿಯರ್ಸ್ ಟ್ವೀಟ್ ಕುರಿತು ವ್ಯಕ್ತವಾಗುತ್ತಿದೆ ಮಿಶ್ರ ಪ್ರತಿಕ್ರಿಯೆ

ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ತಂಡದ ಆಟಗಾರರ ಆಟವನ್ನು ಬೆಂಕಿಗೆ ಹೋಲಿಸಿ ಮಾಡಿರುವ ಟ್ವೀಟ್ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹೇಳಿಕೇಳಿ ಎಬಿ ಡಿವಿಲಿಯರ್ಸ್ ಕಂಡರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಪ್ರೀತಿ ಹಾಗೂ ಗೌರವವಿದೆ. ಸಾಕಷ್ಟು ಬಾರಿ ನಾನು ಅರ್ಧ ಭಾರತೀಯನಾಗಿದ್ದೇನೆ ಹಾಗೂ ಭಾರತ ದೇಶವೆಂದರೆ ನನಗೆ ಬಲು ಪ್ರೀತಿ ಎಂದು ಹೇಳಿಕೆ ನೀಡಿರುವ ಎಬಿ ಡಿವಿಲಿಯರ್ಸ್ ಇದೀಗ ಟೀಂ ಇಂಡಿಯಾ ಸೋಲಿಗೆ ಪರೋಕ್ಷವಾಗಿ ಕಾಲೆಳೆದಿದ್ದಾರೆ ಎಂದು ಆರೋಪಿಸಿ ಕೆಲವೊಂದಿಷ್ಟು ನೆಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದಷ್ಟು ನೆಟ್ಟಿಗರು ತನ್ನ ದೇಶದ ಕ್ರಿಕೆಟ್ ತಂಡ ಗೆದ್ದಿದೆ ಹೀಗಾಗಿ ಎಬಿ ಡಿವಿಲಿಯರ್ಸ್ ಮಾಡಿರುವ ಟ್ವೀಟ್ ತಪ್ಪಲ್ಲ ಎಂದು ಸ್ವಾಗತಿಸಿದ್ದಾರೆ.

Story first published: Friday, January 14, 2022, 21:36 [IST]
Other articles published on Jan 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X