ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರಪಂಚದಾದ್ಯಂತ ಕಾಡಿನಲ್ಲಿ 4,000 ಹುಲಿಗಳಿರಬಹುದು, ಆದ್ರೆ ಕೇವಲ ಒಬ್ಬ ರಾಹುಲ್ ದ್ರಾವಿಡ್: ರಾಸ್ ಟೇಲರ್

Ross taylor and rahul dravid

ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ರಾಸ್‌ ಟೇಲರ್ ತನ್ನ ಆತ್ಮಚರಿತ್ರೆಯಲ್ಲಿ ವಿವಾದಗಳ ಜೊತೆಗೆ ವಿಶೇಷ ಸಂಗತಿಗಳನ್ನ ತೆರೆದಿಟ್ಟಿದ್ದಾರೆ. ನ್ಯೂಜಿಲೆಂಡ್‌ ತಂಡದ ಡ್ರೆಸ್ಸಿಂಗ್ ರೂಂ ವರ್ಣಭೇದ ನೀತಿ, ಐಪಿಎಲ್‌ ಫ್ರಾಂಚೈಸಿ ಮಾಲೀಕನಿಂದ ಕಪಾಳ ಮೋಕ್ಷ ಹೀಗೆ ಸಾಕಷ್ಟು ಘಟನೆಗಳನ ಕುರಿತು ಬೆಳಕು ಚೆಲ್ಲಿದ್ದಾರೆ. ಇದ್ರ ಜೊತೆಗೆ ಟೀಂ ಇಂಡಿಯಾ ಮಾಜಿ ನಾಯಕ , ಪ್ರಸ್ತುತ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕುರಿತು ತುಂಬಾ ಕುತೂಹಲಕಾರಿ ವಿಚಾರವೊಂದನ್ನ ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

ರಾಸ್‌ ಟೇಲರ್ ಆತ್ಮಚರಿತ್ರೆ 'ಬ್ಲ್ಯಾಕ್ ಅಂಡ್ ವೈಟ್' ನಲ್ಲಿ ಇಂಡಿಯನ್ ಪ್ರೀಮಿಯರ್ ಆರಂಭಿಕ ಸೀಸನ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಟೇಲರ್, ರಾಹುಲ್ ದ್ರಾವಿಡ್ ಜೊತೆಗೆ ಕಳೆದ ಅದ್ಭುತ ಕ್ಷಣಗಳನ್ನ ಹಂಚಿಕೊಂಡಿದ್ದಾರೆ. ರಾಹುಲ್‌ ದ್ರಾವಿಡ್‌ರಂತಹ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಲೆಜೆಂಡ್‌ಗಳಿಗೆ ಭಾರತದಲ್ಲಿ ಎಂತಹ ಸ್ಥಾನವಿದೆ ಎಂಬುದಕ್ಕೆ ಚಿಕ್ಕ ಉದಾಹರಣೆಯನ್ನು ಬಿಚ್ಚಿಟ್ಟಿದ್ದಾರೆ.

ದ್ರಾವಿಡ್, ಶೇನ್ ವಾರ್ನ್ ಜೊತೆಗೆ ಡ್ರೆಸ್ಸಿಂಗ್ ರೂಂ ಹಂಚಿಕೊಡ್ಡಿದ್ದ ಟೇಲರ್

ದ್ರಾವಿಡ್, ಶೇನ್ ವಾರ್ನ್ ಜೊತೆಗೆ ಡ್ರೆಸ್ಸಿಂಗ್ ರೂಂ ಹಂಚಿಕೊಡ್ಡಿದ್ದ ಟೇಲರ್

2011ರ ಐಪಿಎಲ್‌ ಸೀಸನ್‌ನಲ್ಲಿ ರಾಹುಲ್ ದ್ರಾವಿಡ್, ಶೇನ್ ವಾರ್ನ್‌ರಂತಹ ವಿಶ್ವದ ಲೆಜೆಂಡರಿ ಕ್ರಿಕೆಟರ್‌ಗಳ ಜೊತೆಯಲ್ಲಿ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದ ಟೇಲರ್, ಅದೇ ವರ್ಷದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಭಾರತದಲ್ಲಿ ಎಂತಹ ಅಭಿಮಾನಿಗಳ ಬೆಂಬಲವಿದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಷ್ಟು ತೊಂದರೆ ಎದುರಿಸಬೇಕಾಗುತ್ತದೆ ಎಂಬುದನ್ನ ಅರಿತೆನು ಎಂದಿದ್ದಾರೆ.

ತನ್ನ ಆತ್ಮಚರಿತ್ರೆ 'ರಾಸ್ ಟೇಲರ್: ಬ್ಲ್ಯಾಕ್ ಅಂಡ್ ವೈಟ್' ನಲ್ಲಿ ಬರೆಯುತ್ತಾ, ಟೇಲರ್ ಅವರು ದ್ರಾವಿಡ್ ಜೊತೆಗೆ ಹುಲಿಯನ್ನು ನೋಡಲು ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಹೋದ ಘಟನೆಯನ್ನು ವಿವರಿಸಿದರು. ಇದೇ ವೇಳೆಯಲ್ಲಿ ಜನರು ಅಪರೂಪದ ಹುಲಿಯನ್ನು ಗುರುತಿಸುವುದಕ್ಕಿಂತ ಹೆಚ್ಚಾಗಿ ದ್ರಾವಿಡ್ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದರು ಎಂಬುದನ್ನ ಬಹಳ ಸಂತೋಷದಿಂದ ಪುಸ್ತಕದಲ್ಲಿ ಬರೆದಿದ್ದಾರೆ.

21 ಬಾರಿ ಸಫಾರಿಗೆ ತೆರಳಿದ್ರೂ, ಹುಲಿ ನೋಡಿರಲಿಲ್ಲಂತೆ ರಾಹುಲ್ ದ್ರಾವಿಡ್

21 ಬಾರಿ ಸಫಾರಿಗೆ ತೆರಳಿದ್ರೂ, ಹುಲಿ ನೋಡಿರಲಿಲ್ಲಂತೆ ರಾಹುಲ್ ದ್ರಾವಿಡ್

''ರಾಹುಲ್ ದ್ರಾವಿಡ್‌ ಜೊತೆಗೆ ಸಫಾರಿಗೆ ತೆರಳಿದ್ದ ವೇಳೆಯಲ್ಲಿ ನಾನು ದ್ರಾವಿಡ್ ಅವರನ್ನು ಕೇಳಿದೆ, ನೀವು ಎಷ್ಟು ಬಾರಿ ಹುಲಿಯನ್ನು ನೋಡಿದ್ದೀರಿ? ಎಂದು, ಅದಕ್ಕೆ ಅವರು ಹೇಳಿದರು, 'ನಾನು ಹುಲಿಯನ್ನು ನೋಡಿಲ್ಲ, ನಾನು ಈ 21 ಬಾರಿಯ ಪ್ರಯತ್ನದಲ್ಲಿ ಮತ್ತು ಒಂದನ್ನೂ ನೋಡಿಲ್ಲ ಎಂದರು. ಈ ವೇಳೆ ಏನು? 21 ಬಾರಿ ಸಫಾರಿಗೆ ತೆರಳಿದ್ರೂ ಒಂದು ಬಾರಿಯೂ ನೋಡಲಿಲ್ವಾ?. ಗಂಭೀರವಾಗಿ ಹೇಳಬೇಕೆಂದರೆ, ನನಗೆ ಇದು ಮೊದಲೇ ತಿಳಿದಿದ್ರೆ, ನಾನು ಹೋಗುತ್ತಲೇ ಇರಲಿಲ್ಲ. ಡಿಸ್ಕವರಿ ಚಾನೆಲ್‌ನಲ್ಲಿ ನೋಡುತ್ತಿದ್ದೆ'' ಎಂದರು.

ಈ ಸಂಭಾಷಣೆ ನಡೆದು ಕೆಲವೇ ನಿಮಿಷಗಳಲ್ಲಿ ನಮ್ಮ ಜೀಪ್ ಡ್ರೈವರ್‌ ಸಹೋದ್ಯೋಗಿಯಿಂದ ರೇಡಿಯೊ ಕರೆ ಬಂದಿತು. ಪ್ರಸಿದ್ಧವಾದ ಕುತ್ತಿಗೆಗೆ ರೇಡಿಯೋ ಕಾಲರ್ ಹಾಕಿದ್ದ T-17 ಅನ್ನು ನೋಡಲು ಸಾಧ್ಯವಾಯಿತು. ನೂರು ಮೀಟರ್ ಅಂತರದಲ್ಲಿ ಬಂಡೆಯ ಮೇಲೆ ಮಲಗಿದ್ದ ಹುಲಿಯನ್ನು ನೋಡಿ ದ್ರಾವಿಡ್ ರೋಮಾಂಚನಗೊಂಡರು. 21 ಸಫಾರಿಗಳ ಬಳಿಕ 22ನೇ ಸಫಾರಿಯಲ್ಲಿ ರಾಹುಲ್ ದ್ರಾವಿಡ್ ಹುಲಿಯನ್ನು ನೋಡಿದರು'' ಎಂದು ಟೇಲರ್ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ ಎಂದು stuff.co.nz ವರದಿ ಮಾಡಿದೆ.

ಚೇತೇಶ್ವರ್ ಪೂಜಾರ ಸತತ 2ನೇ ಏಕದಿನ ಕ್ರಿಕೆಟ್ ಶತಕ: 131 ಎಸೆತಗಳಲ್ಲಿ 171 ರನ್

ಹುಲಿ ನೋಡುವ ಬದಲು, ರಾಹುಲ್ ದ್ರಾವಿಡ್‌ರನ್ನ ಕ್ಯಾಮೆರಾದಿಂದ ಸೆರೆ!

ಹುಲಿ ನೋಡುವ ಬದಲು, ರಾಹುಲ್ ದ್ರಾವಿಡ್‌ರನ್ನ ಕ್ಯಾಮೆರಾದಿಂದ ಸೆರೆ!

ತನ್ನ ಆತ್ಮಚರಿತ್ರೆಯಲ್ಲಿ ಹುಲಿ ಸಫಾರಿಯನ್ನು ಮತ್ತಷ್ಟು ವಿಸ್ತಾರವಾಗಿ ತಿಳಿಸಿರುವ ಟೇಲರ್ '' ನಾವೆಲ್ಲರೂ ಹುಲಿ ನೋಡಿದ ಖುಷಿಯಲ್ಲಿದ್ದ ವೇಳೆಯಲ್ಲಿ, ನಮ್ಮ ಬಳಿ ಇತರೆ ವಾಹನದಲ್ಲಿ ಬಂದ ಸಾಮಾನ್ಯ ಜನರು, ಹುಲಿಯನ್ನ ಮರೆತು ತಮ್ಮ ಕ್ಯಾಮೆರಾವನ್ನು ರಾಹುಲ್ ದ್ರಾವಿಡ್‌ರತ್ತ ತಿರುಗಿಸಿದರು. ರಾಹುಲ್‌ ದ್ರಾವಿಡ್‌ರನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ರು. ನಾವು ಹುಲಿಯನ್ನ ನೋಡುವಷ್ಟು ಉತ್ಸುಕರಾಗಿದ್ದಂತೆ, ಅವರು ರಾಹುಲ್ ದ್ರಾವಿಡ್‌ರನ್ನ ನೋಡಿ ಖುಷಿ ಪಟ್ಟರು. ಪ್ರಪಂಚದಾದ್ಯಂತ ಕಾಡಿನಲ್ಲಿ ಸುಮಾರು 4,000 ಹುಲಿಗಳಿವೆ, ಆದರೆ ಕೇವಲ ಒಬ್ಬ ರಾಹುಲ್ ದ್ರಾವಿಡ್'' ಎಂದು ರಾಸ್ ಟೇಲರ್ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

ರಾಸ್ ಟೇಲರ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಕಳೆದ ಗುರುವಾರ ತನ್ನ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದರು. ಈ ಆತ್ಮಚರಿತ್ರೆ ಕೆಲವು ವಿಶೇಷ ಸಂಗತಿಗಳ ಜೊತೆಗೆ ಕೆಲವು ವಿವಾದಿತ ವಿಷಯಗಳನ್ನ ಸಹ ಟೇಲರ್ ಕ್ರಿಕೆಟ್ ಲೋಕಕ್ಕೆ ತಿಳಿಸಿದ್ದಾರೆ.

ಭಾರತ-ಪಾಕಿಸ್ತಾನ ತಂಡಗಳ ಬಲದಲ್ಲಿ ಈ ಒಂದು ವ್ಯತ್ಯಾಸವಿದೆ ಎಂದ ಪಾಕ್ ಮಾಜಿ ಕ್ರಿಕೆಟರ್

ನ್ಯೂಜಿಲೆಂಡ್ ಡ್ರೆಸ್ಸಿಂಗ್‌ ರೂಂನಲ್ಲಿ ಜನಾಂಗೀಯ ನಿಂದನೆ

ನ್ಯೂಜಿಲೆಂಡ್ ಡ್ರೆಸ್ಸಿಂಗ್‌ ರೂಂನಲ್ಲಿ ಜನಾಂಗೀಯ ನಿಂದನೆ

ರಾಸ್ ಟೇಲರ್ ತನ್ನ ಆಟೋಬಯೋಗ್ರಫಿಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್‌ ಡ್ರೆಸ್ಸಿಂಗ್ ರೂಂ ಕರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ. ತಂಡದಲ್ಲಿನ ವರ್ಣಭೇದ ನೀತಿಯನ್ನು ಬಯಲಿಗೆಳೆದಿದ್ದಾರೆ ನ್ಯೂಜಿಲೆಂಡ್ ಕ್ರಿಕೆಟ್‌ನಲ್ಲಿ ಬೇರೂರಿರುವ ವರ್ಣಭೇದ ನೀತಿಯ ವಾಸ್ತವತೆಯನ್ನು ಟೇಲರ್ ತಿಳಿಸಿದ್ದಾರೆ.

ತಮ್ಮ ಆತ್ಮಚರಿತ್ರೆ ರಾಸ್ ಟೇಲರ್, 'ಬ್ಲ್ಯಾಕ್ ಅಂಡ್ ವೈಟ್' ನಲ್ಲಿ, ಅವರು ನ್ಯೂಜಿಲೆಂಡ್ ತಂಡದಲ್ಲಿ ಬೇರೂರಿರುವ ವರ್ಣಭೇದ ನೀತಿಯ ಬಗ್ಗೆ ಸಂವೇದನಾಶೀಲ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್‌ನಲ್ಲಿ ತಾರತಮ್ಯವು ತುಂಬಾ ಸಾಮಾನ್ಯವಾಗಿದೆ ಮತ್ತು ತಾನೂ ಅದಕ್ಕೆ ಬಲಿಯಾಗಿದ್ದೇನೆ ಎಂದು ಹೇಳಿದ್ದಾರೆ.

''ನನ್ನ ಕೆಲವು ಕ್ರಿಕೆಟಿಗರು ಡ್ರೆಸ್ಸಿಂಗ್ ರೂಮ್‌ನಲ್ಲಿ ನನ್ನ ಮುಖದ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು. ನಿಮ್ಮ ಮುಖ ನೋಡಿದ್ದೀರಾ ಟೇಲರ್.. ನಿಮ್ಮ ಮುಖ ನೀವು ನ್ಯೂಜಿಲೆಂಡ್ ಅಲ್ಲ ಎಂದು ತೋರುತ್ತಿದೆ. ರಾಸ್, ನೀವು ನಮ್ಮಲ್ಲಿ ಅರ್ಧದಷ್ಟು ಮಾತ್ರ.. ಇನ್ನರ್ಧ ಏನೆಂದು ನೀವೇ ನಿರ್ಧರಿಸಿ. ನನಗೆ ಕೋಪ ಬರುತ್ತಿತ್ತು ಆದರೆ ನನಗೆ ಕ್ರಿಕೆಟ್ ಮಾತ್ರ ನನ್ನ ಜೀವನ ಮತ್ತು ನಾನು ಅಂತಹ ವಿಷಯಗಳನ್ನು ನಿರ್ಲಕ್ಷಿಸುತ್ತಿದ್ದೆ'' ಎಂದು ಟೇಲರ್ ತಿಳಿಸಿದ್ದಾರೆ.

ಐಪಿಎಲ್ ಫ್ರಾಂಚೈಸಿ ಮಾಲೀಕನಿಂದ ಕಪಾಳ ಮೋಕ್ಷ!

ಐಪಿಎಲ್ ಫ್ರಾಂಚೈಸಿ ಮಾಲೀಕನಿಂದ ಕಪಾಳ ಮೋಕ್ಷ!

ಹೌದು, ರಾಸ್ ಟೇಲರ್ ತಾವು ಪ್ರತಿನಿಧಿಸಿದ್ದ ಐಪಿಎಲ್ ಫ್ರಾಂಚೈಸಿಯೊಂದರ ಮಾಲೀಕರೊಬ್ಬರಿಂದ ಕಪಾಳಮೋಕ್ಷ ಗುರಿಯಾಗಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. 2011ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ರಾಸ್ ಟೇಲರ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 195 ರನ್ ಚೇಸ್ ಮಾಡುವಾಗ ತಾನು ಡಕ್ ಔಟ್ ಆಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ ವೇಳೆಯಲ್ಲಿ ನಡೆದ ಘಟನೆಯನ್ನ ವಿವರಿಸಿದ್ದಾರೆ.

ತಾನು ಡಕ್ ಔಟ್ ಆಗಿ ಪೆವಿಲಿಯನ್‌ಗೆ ಬಂದಾಗ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರೊಬ್ಬರು 'ರಾಸ್ ನಿನಗೆ ಮಿಲಿಯನ್ ಡಾಲರ್ ನೀಡಿರುವುದು ಡಕ್ ಔಟ್ ಆಗಲು ಅಲ್ಲ' ಎಂದು ಹೇಳಿ ಮೂರು ನಾಲ್ಕು ಬಾರಿ ಕೆನ್ನೆಗೆ ಬಾರಿಸಿದ್ದರು ಎಂದು ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಈ ವಿಚಾರ ಸದ್ಯ ಬಿಸಿ ಬಿಸಿ ಚರ್ಚೆಗೂ ಕಾರಣವಾಗಿದೆ.

Story first published: Sunday, August 14, 2022, 21:12 [IST]
Other articles published on Aug 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X