ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಿಂಚ್-ವಾರ್ನರ್ ಅರ್ಧಶತಕ, ಅಫ್ಘಾನ್ ವಿರುದ್ಧ ಆಸೀಸ್‌ಗೆ ಸುಲಭ ಜಯ

Afghanistan vs Australia, Match 4 - Live Cricket Score

ಬ್ರಿಸ್ಟಲ್, ಜೂನ್ 1: ಬ್ರಿಸ್ಟಲ್‌ನ ಕೌಂಟಿ ಗ್ರೌಂಡ್‌ನಲ್ಲಿ ಶನಿವಾರ (ಜೂನ್ 1) ನಡೆದ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಸುಲಭ ಜಯ ಗಳಿಸಿದೆ. ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ನಾಯಕ ಆ್ಯರನ್ ಫಿಂಚ್ ಆಕರ್ಷಕ ಜೊತೆಯಾಟದ ನೆರವಿನಿಂದ ಕಾಂಗರೂ ಪಡೆ ಶುಭಾರಂಭ ಕಂಡಿದೆ.

ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ, ಜೂನ್ 1, Live ಸ್ಕೋರ್‌ಕಾರ್ಡ್

1
43647

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ತಂಡ, ನೀರಸ ಬ್ಯಾಟಿಂಗ್ ಪ್ರದರ್ಶಿಸಿತು. ರಹಮತ್ ಷಾ 43, ಗುಲ್ಬಾದಿನ್ ನೈಬ್ 31, ನಜೀಬುಲ್ಲ ಝದ್ರನ್ 51, ರಶೀದ್ ಖಾನ್ 27 ರನ್ ಕೊಡುಗೆಯೊಂದಿಗೆ ಅಫ್ಘಾನ್ 38.2 ಓವರ್‌ನಲ್ಲಿ ಸರ್ವ ಪತನ ಕಂಡು 207 ರನ್ ಗಳಿಸಿತು.

ವಿಶ್ವಕಪ್: ಕೊಹ್ಲಿ ಕೊಟ್ಟ ಬ್ಯಾಟ್ ಕದ್ದು ಹೋಗಿದ್ದರ ಗಮ್ಮತ್ತು ಬಿಚ್ಚಿಟ್ಟ ರಶೀದ್!ವಿಶ್ವಕಪ್: ಕೊಹ್ಲಿ ಕೊಟ್ಟ ಬ್ಯಾಟ್ ಕದ್ದು ಹೋಗಿದ್ದರ ಗಮ್ಮತ್ತು ಬಿಚ್ಚಿಟ್ಟ ರಶೀದ್!

ಉತ್ತಮ ಫಾರ್ಮ್‌ನಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಆಸೀಸ್ ನೀಡಿದ 208 ರನ್ ಗುರಿ ಸವಾಲಿನ ಮೊತ್ತ ಅನ್ನಿಸಲಿಲ್ಲ. ಅಲ್ಲದೆ ಅಫ್ಘಾನ್ ಇನ್ನಿಂಗ್ಸ್ ವೇಳೆ ಆಸೀಸ್‌ನ ಪ್ಯಾಟ್ ಕಮಿನ್ಸ್ 3, ಮಾರ್ಕಸ್ ಸ್ಟೋಯ್ನಿಸ್ 2 ಮತ್ತು ಆದಂ ಝಂಪಾ 3 ವಿಕೆಟ್ ಪಡೆದು ಅಫ್ಘಾನ್ ಹೆಚ್ಚು ರನ್ ಕಲೆ ಹಾಕದಂತೆ ನೋಡಿಕೊಂಡಿದ್ದರು.

ಭಾರತ 'ರಾಜ'ನಂತೆ ಸೆಮಿಫೈನಲ್ ಹೋಗೋದು ಖಚಿತ: ಮೆಕಲಂ ಭವಿಷ್ಯಭಾರತ 'ರಾಜ'ನಂತೆ ಸೆಮಿಫೈನಲ್ ಹೋಗೋದು ಖಚಿತ: ಮೆಕಲಂ ಭವಿಷ್ಯ

ಗುರಿ ಬೆನ್ನತ್ತಿದ ಆಸೀಸ್‌ಗೆ ವಾರ್ನರ್ ಮತ್ತು ಫಿಂಚ್ ಅವರ ಅದ್ಭುತ ಜೊತೆಯಾಟ ದೊರೆಯಿತು. ಫಿಂಚ್ 66 (49 ಎಸೆತ), ವಾರ್ನರ್ ಅಜೇಯ 89 (114 ಎಸೆತ), ಉಸ್ಮಾನ್ ಖವಾಜಾ 15, ಸ್ಟೀವ್ ಸ್ಮಿತ್ 18 ರನ್ ಸೇರ್ಪಡೆಯೊಂದಿಗೆ ಆಸೀಸ್ 34.5 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 209 ರನ್ ಪೇರಿಸಿತು. ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠರೆನಿಸಿದರು.

ವೆಸ್ಟ್ ಇಂಡೀಸ್ ಎದುರು ಪಾಕ್ ಹೀನಾಯ ಸೋಲಿಗೆ ಪ್ರತಿಕ್ರಿಯಿಸಿದ ವೆಸ್ಟ್ ಇಂಡೀಸ್ ಎದುರು ಪಾಕ್ ಹೀನಾಯ ಸೋಲಿಗೆ ಪ್ರತಿಕ್ರಿಯಿಸಿದ

ಅಫ್ಘಾನಿಸ್ತಾನ ತಂಡ: ಮೊಹಮ್ಮದ್ ಶಹಝಾದ್ (ವಿ.ಕೆ.), ಹಜರತುಲ್ಲಾ ಝಝಾಯಿ, ರಹಮಾತ್ ಷಾ, ಹಶ್ಮತುಲ್ಲಾ ಶಾಹಿದಿ, ನಜೀಬುಲ್ಲಾ ಝದ್ರನ್, ಮೊಹಮ್ಮದ್ ನಬಿ, ಗುಲ್ಬಾದೀನ್ ನಾಯಿಬ್ (ಸಿ), ರಶೀದ್ ಖಾನ್, ದೌಲತ್ ಝದ್ರನ್, ಮುಜೀಬ್ ಉರ್ ರಹಮಾನ್, ಹಮೀದ್ ಹಸನ್.

ವಿಶ್ವಕಪ್: ಗಪ್ಟಿಲ್-ಮುನ್ರೋ ಅಬ್ಬರ, ಕಿವೀಸ್ ಎದುರು ಮಂಕಾದ ಲಂಕಾವಿಶ್ವಕಪ್: ಗಪ್ಟಿಲ್-ಮುನ್ರೋ ಅಬ್ಬರ, ಕಿವೀಸ್ ಎದುರು ಮಂಕಾದ ಲಂಕಾ

ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕ್ಯಾರಿ (ವಿಕೆ), ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆದಮ್ ಝಂಪಾ.

{headtohead_cricket_95_1}

Story first published: Sunday, June 2, 2019, 0:20 [IST]
Other articles published on Jun 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X