ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅ್ಯಶಸ್ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಟಿ20 ವಿಶ್ವಕಪ್ ಹೀರೋಗಿಲ್ಲ ಸ್ಥಾನ!

Ashes series: Australia announce squad for Ashes Usman Khawaja recalled

ಆ್ಯಶಸ್ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಇಂದು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಅನುಭವಿ ಆಟಗಾರ ಉಸ್ಮಾನ್ ಖವಾಜಾ ತಂಡದಲ್ಲಿ ಮರಳಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಧ್ಯ ಕ್ರಮಾಂಕದಲ್ಲಿ ಮ್ಯಾರ್ತಯೂ ವೇಡ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಟ್ರೇವಿಸ್ ಹೆಡ್ ಅವಕಾಶ ಪಡೆದುಕೊಂಡಿದ್ದಾರೆ.

ಅನುಭವಿ ಉಸ್ಮಾನ್ ಖವಾಜಾ ಆಸ್ಟ್ರೇಲಿಯಾ ಪರವಾಗಿ 44 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ 2019ರ ಆ್ಯಶಸ್ ಸರಣಿಯ ನಂತರ ಆಯ್ಕೆಗಾರರಿಂದ ಕಡೆಗಣನೆಗೆ ಒಳಗಾದರು. ನಂತರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರು. ಆದರೆ ಕ್ವೀನ್ಸ್‌ಲ್ಯಾಂಡ್ ತಂಡದ ನಾಯಕನಾಗಿರುವ ಖವಾಜಾ ಈ ಬಾರಿಯ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದರು. ಸತತ ಶತಕ ಸಿಡಿಸಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಭಾರತ vs ನ್ಯೂಜಿಲೆಂಡ್ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ವಿವರಭಾರತ vs ನ್ಯೂಜಿಲೆಂಡ್ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ವಿವರ

ಖವಾಜಾ ಆಯ್ಕೆಯ ಬಗ್ಗೆ ಆಯ್ಕೆಗಾರರಲ್ಲಿ ಒಬ್ಬರಾಗಿರು ಜಾರ್ಜ್ ಬೈಲಿ ಪ್ರತಿಕ್ರಿಯಿಸಿದ್ದಾರೆ. "ಉಸ್ಮಾನ್ ಖವಾಜಾ ಅದ್ಭುತವಾದ ಬ್ಯಾಟಿಂಗ್ ಲಯದಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಲೈನ್‌ಅಪ್‌ಗೆ ತಾಳ್ಮೆ ಹಾಗೂ ಅನುಭವದ ಜೊತೆಗೆ ಸ್ಥಿರತೆಯನ್ನು ನೀಡಲಿದ್ದಾರೆ. ಟೆಸ್ಟ್ ಮಾದರಿಯಲ್ಲಿ ರನ್‌ಗಳಿಸುವ ಆಟಗಾರ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಅಲ್ಲದೆ ಎಲ್ಲಾ ಕ್ರಮಾಂಕಗಳಲ್ಲಿಯೂ ಬ್ಯಾಟಿಂಗ್ ನಡೆಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ" ಎಂದು ಖವಾಜ ಹೇಳಿದ್ದಾರೆ.

ಇನ್ನು ಅನ್‌ಕ್ಯಾಪ್‌ಡ್ ಆಟಗಾರ ಮಿಚೆಲ್ ಸ್ವೆಪ್ಸನ್ ತಂಡದ ಪ್ರಮುಖ ಸ್ಪಿನ್ನರ್ ನಥನ್ ಲಿಯಾನ್‌ಗೆ ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಮೈಕಲ್ ನೀಸೆರ್ ಹಾಗೂ ಜೇ ರಿಚರ್ಡ್ಸನ್ ಕೂಡ ಆಡುವ ಬಳಗದಲ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಸ್ಥಾನ ಸಂಪಾದಿಸಿದ ಆಟಗಾರರಾಗಿದ್ದಾರೆ. ಆಸ್ಟ್ರೇಲಿಯಾ ತಂಡದ ಪರವಾಗಿ ಆರಂಭಿಕರಾಗಿ ಡೇವಿಡ್ ವಾರ್ನರ್ ಜೊತೆಗೆ ಮಾರ್ಕಸ್ ಹ್ಯಾರೀಸ್ ಕಣಕ್ಕಿಳಿಯಲಿದ್ದಾರೆ. ಆಯ್ಕೆ ಮಂಡಳಿಯ ಸದಸ್ಯ ಜಾರ್ಜ್ ಬೈಲಿ ಈ ವಿಚಾರವನ್ನು ತಿಳಿಸಿದರು.

ಭಾರತ vs ನ್ಯೂಜಿಲೆಂಡ್‌ ಟಿ20: 2-1 ಅಂತರದಲ್ಲಿ ಸರಣಿ ಗೆಲ್ಲಲಿರುವ ತಂಡವನ್ನು ಊಹಿಸಿದ ಹರ್ಭಜನ್ ಸಿಂಗ್ಭಾರತ vs ನ್ಯೂಜಿಲೆಂಡ್‌ ಟಿ20: 2-1 ಅಂತರದಲ್ಲಿ ಸರಣಿ ಗೆಲ್ಲಲಿರುವ ತಂಡವನ್ನು ಊಹಿಸಿದ ಹರ್ಭಜನ್ ಸಿಂಗ್

ಇನ್ನು ಆಸ್ಟ್ರೇಲಿಯಾ ತಂಡದ ಯುವ ಆರಂಭಿಕ ಆಟಗಾರ ವಿಲ್ ಪುಕೋವ್ಸ್ಕಿ ಈ ತಮಡದಲ್ಲಿ ಸ್ಥಾನವನ್ನು ಪಡೆದಿಲ್ಲ. ಅವರು ಇತ್ತೀಚೆಗೆ ಕನ್ಕುಶನ್‌ಗೆ ಒಳಗಾಗಿದ್ದರು. ಮತ್ತೊಂದೆಡೆ ಟಿ20 ವಿಶ್ವಕಪ್‌ನಲ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಅದ್ಭುತ ಪ್ರದರ್ಶನ ನೀಡಿದ ಮಿಚೆಲ್ ಮಾರ್ಶ್ ಟೆಸ್ಟ್ ತಂಡದಲ್ಲಿಯೂ ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿತ್ತು. ಆದರೆ ಮಾರ್ಶ್ ಆ್ಯಶಸ್ ಸರಣಿಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ರಾಹುಲ್ ದ್ರಾವಿಡ್ 'ಟೀಂ ಮ್ಯಾನ್': ತಂಡದಲ್ಲಿ ಸಾಂಘಿಕ ಹೋರಾಟಕ್ಕೆ ಒತ್ತು ನೀಡಲಿದ್ದಾರೆ ಎಂದ KLರಾಹುಲ್ ದ್ರಾವಿಡ್ 'ಟೀಂ ಮ್ಯಾನ್': ತಂಡದಲ್ಲಿ ಸಾಂಘಿಕ ಹೋರಾಟಕ್ಕೆ ಒತ್ತು ನೀಡಲಿದ್ದಾರೆ ಎಂದ KL

ಇನ್ನು ಕಳೆದ ಬೇಸಿಗೆ ಋತುವಿನಲ್ಲಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ 2-1 ಅಂತರದಿಂದ ಟೆಸ್ಟ್ ಸರಣಿಯನ್ನು ಸೋತ ಬಳಿಕ ಆಡುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಹೀಗಾಗಿ ಈ ಸರಣಿಯ ಮೇಲೆ ಸಾಕಷ್ಟು ಕುತೂಹಲ ಮೂಡಿಸಿದೆ.

ಅದು ಕ್ರಿಕೆಟ್‌ನ ನಿರ್ಧಾರ ಅಲ್ಲವೇ ಅಲ್ಲ: ಎಸ್‌ಆರ್‌ಹೆಚ್ ತಂಡದಿಂದ ವಾರ್ನರ್ ಹೊರಗಿಟ್ಟ ಬಗ್ಗೆ ಕೋಚ್ ಪ್ರತಿಕ್ರಿಯೆಅದು ಕ್ರಿಕೆಟ್‌ನ ನಿರ್ಧಾರ ಅಲ್ಲವೇ ಅಲ್ಲ: ಎಸ್‌ಆರ್‌ಹೆಚ್ ತಂಡದಿಂದ ವಾರ್ನರ್ ಹೊರಗಿಟ್ಟ ಬಗ್ಗೆ ಕೋಚ್ ಪ್ರತಿಕ್ರಿಯೆ

ಮೂಲೆಗುಂಪಾದವರ ಆಟ ನೋಡಿ ಶಾಕ್ ಆದ ಐಪಿಎಲ್ ಫ್ರಾಂಚೈಸಿಗಳು | Oneindia Kannada

ಆಸ್ಟ್ರೇಲಿಯಾ ಸ್ಕ್ವಾಡ್ ಹೀಗಿದೆ: ಟಿಮ್ ಪೈನ್ (ನಾಯಕ), ಪ್ಯಾಟ್ ಕಮ್ಮಿನ್ಸ್, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಮೈಕೆಲ್ ನೆಸರ್, ಝೇ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್.

Story first published: Thursday, November 18, 2021, 9:50 [IST]
Other articles published on Nov 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X