ಏಷ್ಯಾ ಕಪ್ 2022: IND vs PAK ಪಂದ್ಯಕ್ಕೆ ದಿನಗಣನೆ; ದುಬೈಗೆ ಬಂದಿಳಿದ ಬಾಬರ್ ಅಜಂ ಪಡೆ

ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಹವಣಿಸುತ್ತಿದೆ.

ಪಾಕಿಸ್ತಾನದ ಬೆಂಕಿ ಬೌಲರ್ ಶಾಹೀನ್ ಶಾ ಅಫ್ರಿದಿ ಏಷ್ಯಾ ಕಪ್ ನಿಂದ ಹೊರಗುಳಿಯೋಕೆ ಕಾರಣ ಇಲ್ಲಿದೆ. | Oneindia Kannada

ಇದೇ ವೇಳೆ ಏಷ್ಯಾ ಕಪ್ 2022ರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡ ದುಬೈ ತಲುಪಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ದಿನಗಣನೆ ಶುರುವಾಗಿದ್ದು, ಇಡೀ ವಿಶ್ವವೇ ಈ ಪಂದ್ಯ ಕಣ್ತುಂಬಿಕೊಳ್ಳಲು ಕಾದು ಕುಳಿತಿದೆ.

IND vs PAK: ಈತನ ಅನುಪಸ್ಥಿತಿ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆ ಎಂದ ಇಂಜಮಾಮ್-ಉಲ್-ಹಕ್IND vs PAK: ಈತನ ಅನುಪಸ್ಥಿತಿ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆ ಎಂದ ಇಂಜಮಾಮ್-ಉಲ್-ಹಕ್

ನಾಯಕ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಆಗಸ್ಟ್ 27ರಿಂದ ಆರಂಭವಾಗುವ ಏಷ್ಯಾ ಕಪ್‌ನಲ್ಲಿ ಭಾಗವಹಿಸಲು ದುಬೈಗೆ ಬಂದಿಳಿದಿದೆ. ಇದಕ್ಕೂ ಮೊದಲು ಆಮ್‌ಸ್ಟರ್‌ಡಾಮ್‌ನಲ್ಲಿ ಪಾಕಿಸ್ತಾನ ತಂಡವು ನೆದರ್ಲ್ಯಾಂಡ್ಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು.

ದುಬೈಗೆ ಆಗಮಿಸಿದ ಪಾಕಿಸ್ತಾನ ಟಿ20 ತಂಡದ ಸದಸ್ಯರು

ದುಬೈಗೆ ಆಗಮಿಸಿದ ಪಾಕಿಸ್ತಾನ ಟಿ20 ತಂಡದ ಸದಸ್ಯರು

ಇಫ್ತಿಕರ್ ಅಹ್ಮದ್, ಉಸ್ಮಾನ್ ಖಾದಿರ್, ಹೈದರ್ ಅಲಿ ಮತ್ತು ಆಸಿಫ್ ಅಲಿ ಸೇರಿದಂತೆ ಪಾಕಿಸ್ತಾನ ಟಿ20 ತಂಡದ ಕೆಲವು ಸದಸ್ಯರು ಲಾಹೋರ್‌ನಿಂದ ದುಬೈಗೆ ಆಗಮಿಸಿದರು. ನೆದರ್ಲೆಂಡ್ಸ್ ವಿರುದ್ಧದ 16 ಸದಸ್ಯರ ಏಕದಿನ ತಂಡದ ಭಾಗವಾಗಿದ್ದ ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್, ಸಲ್ಮಾನ್ ಅಲಿ ಅಘಾ ಮತ್ತು ಜಾಹಿದ್ ಮೆಹಮೂದ್ ಅವರು ಏಷ್ಯಾ ಕಪ್ ನಡೆಯುವ ಯುಎಇಗೆ ತಲುಪಿದರು.

ಏಷ್ಯಾ ಕಪ್‌ಗೂ ಮುನ್ನ ಗಾಯಗೊಂಡಿರುವ ಶಾಹೀನ್ ಅಫ್ರಿದಿ ಬದಲಿಗೆ ಮುಹಮ್ಮದ್ ಹಸ್ನೇನ್ ಬ್ರಿಟನ್‌ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಹಾರಲಿದ್ದಾರೆ. ಎಡಗೈ ವೇಗಿ ಶಾಹೀನ್ ಅಫ್ರಿದಿ ಅನುಪಸ್ಥಿತಿ ಪಾಕಿಸ್ತಾನ ತಂಡಕ್ಕೆ ಹಿನ್ನಡೆಯಾಗಲಿದೆ ಎಂದು ಮಾಜಿ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ.

ಎಡಗೈ ವೇಗಿ ಶಾಹೀನ್ ಅಫ್ರಿದಿ ಅನುಪಸ್ಥಿತಿ ಹಿನ್ನಡೆ

ಎಡಗೈ ವೇಗಿ ಶಾಹೀನ್ ಅಫ್ರಿದಿ ಅನುಪಸ್ಥಿತಿ ಹಿನ್ನಡೆ

ಸೋಮವಾರ (ಆಗಸ್ಟ್ 22)ದಂದು ಪಾಕಿಸ್ತಾನದ ಮುಖ್ಯ ಕೋಚ್ ಸಕ್ಲೇನ್ ಮುಷ್ತಾಕ್ ಅವರು ಮುಂಬರುವ ಏಷ್ಯಾ ಕಪ್ 2022ಕ್ಕೂ ಮುನ್ನ ಗಾಯಗೊಂಡಿರುವ ಶಾಹೀನ್ ಶಾ ಆಫ್ರಿದಿಯನ್ನು ಕಳೆದುಕೊಳ್ಳುವುದು 'ದೊಡ್ಡ ಹಿನ್ನಡೆ' ಎಂದು ಹೇಳಿದರು. ಆದರೆ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಬೌಲಿಂಗ್ ಘಟಕವನ್ನು ಸಮರ್ಥಿಸಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಲಗೈ ವೇಗಿ ನಸ್ಸೆಮ್ ಶಾ ಮಿಂಚಿದ ನಂತರ ಏಷ್ಯಾ ಕಪ್‌ನಲ್ಲಿ ಪ್ರದರ್ಶನ ನೀಡಲು ಸಕ್ಲೇನ್ ಮುಷ್ತಾಕ್ ಬೆಂಬಲಿಸಿದರು.

"ನಿಸ್ಸಂಶಯವಾಗಿ, ಶಾಹೀನ್ ಅಫ್ರಿದಿ ಅವರನ್ನು ಕಳೆದುಕೊಳ್ಳುವುದು ಏಷ್ಯಾ ಕಪ್ ಪಂದ್ಯಾವಳಿಯ ಮೊದಲು ಮತ್ತು ಇಂಗ್ಲೆಂಡ್ ಸರಣಿಗೆ ನಮಗೆ ದೊಡ್ಡ ಹಿನ್ನಡೆಯಾಗಿದೆ. ಏಕೆಂದರೆ ಅಫ್ರಿದಿ ಉನ್ನತ ಮಟ್ಟದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ ಮತ್ತು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ," ಎಂದು ಪಾಕಿಸ್ತಾನದ ಮುಖ್ಯ ಕೋಚ್ ಸಕ್ಲೇನ್ ಮುಷ್ತಾಕ್ ​​ಹೇಳಿದರು.

ಆಗಸ್ಟ್ 28ರ ಭಾನುವಾರದಂದು ಭಾರತ vs ಪಾಕಿಸ್ತಾನ

ಆಗಸ್ಟ್ 28ರ ಭಾನುವಾರದಂದು ಭಾರತ vs ಪಾಕಿಸ್ತಾನ

ಆಗಸ್ಟ್ 28ರ ಭಾನುವಾರದಂದು ದುಬೈನಲ್ಲಿ ಪಾಕಿಸ್ತಾನವು ತನ್ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವನ್ನು ಎದುರಿಸಲಿದೆ. ಇನ್ನು ಅವರ ಗುಂಪಿನ ಎರಡನೇ ಪಂದ್ಯವು ಶುಕ್ರವಾರ, ಸೆಪ್ಟೆಂಬರ್ 2ರಂದು ಶಾರ್ಜಾದಲ್ಲಿ ಕ್ವಾಲಿಫೈಯರ್ ತಂಡದ (ಯುಎಇ, ಕುವೈತ್, ಸಿಂಗಾಪುರ್ ಅಥವಾ ಹಾಂಗ್ ಕಾಂಗ್) ವಿರುದ್ಧ ನಡೆಯಲಿದೆ. ಸೂಪರ್ ಫೋರ್ ಪಂದ್ಯಗಳು ಸೆಪ್ಟೆಂಬರ್ 3 ರಿಂದ 9ರವರೆಗೆ ನಡೆಯಲಿವೆ.

ಸರಣಿಯು ಆಗಸ್ಟ್ 27ರಿಂದ ಸೆಪ್ಟೆಂಬರ್ 11 ರವರೆಗೆ ದುಬೈ ಮತ್ತು ಶಾರ್ಜಾದಲ್ಲಿ ನಡೆಯಲಿದೆ. ಆಗಸ್ಟ್ 27ರಂದು ನಡೆಯಲಿರುವ ಬಹು ನಿರೀಕ್ಷಿತ ಏಷ್ಯಾ ಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

2022ರ ಏಷ್ಯಾ ಕಪ್‌ಗಾಗಿ ಪಾಕಿಸ್ತಾನ ತಂಡ

2022ರ ಏಷ್ಯಾ ಕಪ್‌ಗಾಗಿ ಪಾಕಿಸ್ತಾನ ತಂಡ

ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜನ್ , ನಸೀಮ್ ಶಾ, ಶಹನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 23, 2022, 14:35 [IST]
Other articles published on Aug 23, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X